Published : Nov 25, 2021, 05:59 PM ISTUpdated : Nov 25, 2021, 06:17 PM IST
ಶಾರೂಖ್ ಖಾನ್(Shah Rukh Khan) ಪುತ್ರಿ ಸುಹಾನಾ ಖಾನ್(Suhana Khan) ನ್ಯೂಯಾರ್ಕ್(New York) ಬಿಟ್ಟು ಬರಲಿದ್ದಾರೆ. ಆದರೆ ಕಿಂಗ್ ಖಾನ್ ಮಗಳಿಗೆ ಅಲ್ಲಿಂದ ಇತ್ತ ಬರೋಕೆ ಇಷ್ಟವಿಲ್ಲ.
ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಅವರು ನ್ಯೂಯಾರ್ಕ್ ತೊರೆಯುವ ಸುಳಿವು ನೀಡಿದ್ದಾರೆ. ಅವರು ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಸಿನಿಮಾ ನಿರ್ಮಾಣವನ್ನು ಅಧ್ಯಯನ ಮಾಡುತ್ತಿದ್ದಾರೆ.
26
ಸುಹಾನಾ ಅವರು ನ್ಯೂಯಾರ್ಕ್ ಬಿಟ್ಟು ಹೋಗುತ್ತಿರುವ ಬಗ್ಗೆ ಬೇಸರದಲ್ಲಿದ್ದಾರೆ. ಹಾಗೆಯೇ ಆಕೆಯ ಸ್ನೇಹಿತರು ನಟನ ಪುತ್ರಿಗಾಗಿ ಭವಿಷ್ಯಕ್ಕಾಗಿ ಶುಭ ಹಾರೈಸಿದ್ದಾರೆ
36
suhana khan
ಸುಹಾನಾ ಖಾನ್ ಆಗಾಗ ನ್ಯೂಯಾರ್ಕ್‌ನಲ್ಲಿನ ತನ್ನ ಜೀವನದ ಝಲಕ್‌ಗಳನ್ನು ಹಂಚಿಕೊಳ್ಳುತ್ತಾರೆ. ಈಗ ಅವರ ಇತ್ತೀಚಿನ ಪೋಸ್ಟ್‌ನಲ್ಲಿ, ಅವರು ನಗರವನ್ನು ತೊರೆಯುವ ಬಗ್ಗೆ ಸುಳಿವು ನೀಡಿದ್ದಾರೆ.
46
ಕಟ್ಟಡ ಮತ್ತು ಚಲಿಸುತ್ತಿರುವ ಟ್ರಕ್‌ನ ಬ್ಲಾಕ್ & ವೈಟ್ ಫೊಟೋ ಸುಹಾನಾ ಪೋಸ್ಟ್ ಮಾಡಿದ್ದು, ಚಿಂತಿಸಬೇಡಿ. ನೀವು ನ್ಯೂಯಾರ್ಕ್ ತೊರೆದರೂ, ನೀವು ಯಾವಾಗಲೂ ನ್ಯೂಯಾರ್ಕ್‌ನವರೇ ಆಗಿರುತ್ತೀರಿ ಎಂದು ಅದರ ಮೇಲೆ ಬರೆಯಲಾಗಿದೆ. ಅವರು ಶೀರ್ಷಿಕೆಯಲ್ಲಿ ಮುರಿದ ಹೃದಯದ ಎಮೋಜಿಯನ್ನು ಸೇರಿಸಿದ್ದಾರೆ.
56
ಸುಹಾನಾ ಖಾನ್ ಅವರ ಪೋಸ್ಟ್‌ಗೆ ಅವರ ಹಲವಾರು ಸ್ನೇಹಿತರು ಪ್ರತಿಕ್ರಿಯಿಸಿದ್ದಾರೆ. ಒಬ್ಬರು ನೀವು ಅದ್ಭುತವಾದ ಕೆಲಸಗಳನ್ನು ಮಾಡಲಿದ್ದೀರಿ ಎಂದು ಮತ್ತೊಬ್ಬರು ಹೇಳಿದ್ದಾರೆ.
66
ಸುಹಾನಾ ಖಾನ್ ಪ್ರಸ್ತುತ ನ್ಯೂಯಾರ್ಕ್ ವಿಶ್ವವಿದ್ಯಾನಿಲಯದಿಂದ ಸಿನಿಮಾ ಅಧ್ಯಯನ ಕೋರ್ಸ್ ಅನ್ನು ಮಾಡುತ್ತಿದ್ದಾರೆ. ಅವಳ ಅಣ್ಣ ಆರ್ಯನ್ ಖಾನ್ ಮತ್ತು ಅವಳ ಕಿರಿಯ ಸಹೋದರ ಅಬ್ರಾಮ್ ಖಾನ್ ಭಾರತದಲ್ಲಿದ್ದಾರೆ.