ದುಬೈನಲ್ಲಿ ಅತ್ಯಾಕರ್ಷಕ ಐಷಾರಾಮಿ ಬಂಗಲೆ ಹೊಂದಿರುವ ಭಾರತದ ತಾರೆಯರು!

Published : Apr 10, 2024, 06:52 PM IST

ದುಬೈ, ತನ್ನ ಐಶ್ವರ್ಯ, ಐಷಾರಾಮಿ ಮತ್ತು ದುಂದು ವೆಚ್ಚಕ್ಕೆ ಹೆಸರುವಾಸಿಯಾಗಿದೆ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಕ್ರೀಡಾ ತಾರೆಯರು ಆಸ್ತಿಗಳಲ್ಲಿ ಹೂಡಿಕೆ ಮಾಡಲು ಆಕರ್ಷಿಸಿದೆ.  ಬಾಲಿವುಡ್‌ನ ಕಿಂಗ್ ಶಾರುಖ್ ಖಾನ್, ಟೆನಿಸ್ ತಾರೆ ಸಾನಿಯಾ ಮಿರ್ಜಾ ಸೇರಿ ಅನೇಕ ಸೆಲೆಬ್ರಿಟಿಗಳು ದುಬೈ ಅನ್ನು ತಮ್ಮ ಎರಡನೇ ಮನೆಯನ್ನಾಗಿ ಮಾಡಿಕೊಂಡಿದ್ದಾರೆ.  ಈ ಬಗ್ಗೆ ಇಲ್ಲಿ ಸಂಪೂರ್ಣ ವಿವರ ನೀಡಲಾಗಿದೆ.   

PREV
19
ದುಬೈನಲ್ಲಿ ಅತ್ಯಾಕರ್ಷಕ ಐಷಾರಾಮಿ ಬಂಗಲೆ ಹೊಂದಿರುವ ಭಾರತದ ತಾರೆಯರು!

ಬಾಲಿವುಡ್ ಪ್ರೇಮಪಕ್ಷಿಗಳಾದ  ತೇಜಸ್ವಿ ಪ್ರಕಾಶ್ ಮತ್ತು ಕರಣ್ ಕುಂದ್ರಾ ಅವರು ದುಬೈನಲ್ಲಿ ಐಶಾರಾಮಿ ಮನೆ ಹೊಂದಿದ್ದಾರೆ.  ತಮ್ಮ ಐಷಾರಾಮಿ 1BHK ಫ್ಲಾಟ್ ಅನ್ನು ಪಾಮ್ ಜುಮೇರಾ ಬೀಚ್ ರೆಸಿಡೆನ್ಸ್‌ನಲ್ಲಿ   2 ಕೋಟಿ ರೂ. ಗೆ ಖರೀದಿ ಮಾಡಿದ್ರು.

29

ಜುಮೇರಾ ಗಾಲ್ಫ್ ಎಸ್ಟೇಟ್‌ನಲ್ಲಿರುವ ಸ್ಯಾಂಕ್ಚುರಿ ಫಾಲ್ಸ್‌ನಲ್ಲಿರುವ ಅದ್ಭುತವಾದ, ವಿಸ್ತಾರವಾದ ಆಸ್ತಿಯ ಹೆಮ್ಮೆಯ ಮಾಲೀಕರಾಗಿದ್ದಾರೆ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್. ದುಬೈನ ಎಮಿರೇಟ್ಸ್ ಹಿಲ್ಸ್‌ನಲ್ಲಿ ಐಷಾರಾಮಿ ಬಂಗಲೆಯನ್ನೂ ಹೊಂದಿದ್ದಾರೆ. ವರದಿಯಂತೆ 2016 ರಲ್ಲಿ ಈ ಅದ್ದೂರಿ ಮನೆಯನ್ನು ಖರೀದಿಸಿದರು.

39
SRK dubai house

ಶ್ರೀಮಂತ ಪಾಮ್ ಜುಮೇರಾದಲ್ಲಿ  ಬಾಲಿವುಡ್‌ ಬಾದ್ ಶಾ ಶಾರುಖ್ ಖಾನ್ ಬೃಹತ್ 6 ಬೆಡ್‌ ರೋಂ  ವಿಲ್ಲಾವನ್ನು ಹೊಂದಿದ್ದಾರೆ. ಮನೆಯ ಒಳಾಂಗಣವನ್ನು ಅವರ ಪತ್ನಿ ಇಂಟೀರಿಯರ್ ಡಿಸೈನರ್ ಗೌರಿ ಖಾನ್ ಮಾಡಿದ್ದಾರೆ. ವರದಿಯ ಪ್ರಕಾರ, ಆಸ್ತಿಯು 100 ಕೋಟಿ ರೂಪಾಯಿ ಹೆಚ್ಚಿಮ ,

49

ವಿವಾದಿತ ನಟಿ ರಾಖಿ ಸಾವಂತ್ ಇತ್ತೀಚೆಗೆ ದುಬೈನಲ್ಲಿ ಮನೆ ಮತ್ತು ಕಾರು ಖರೀದಿಸಿರುವುದಾಗಿ ಬಹಿರಂಗಪಡಿಸಿದ್ದಾರೆ. ಇದು ದುಬೈನಲ್ಲಿ ಎರಡನೇ ಆಸ್ತಿಯಾಗಿದೆ.  ಎರಡು ಕೂಡ ಐಷಾರಾಮಿಯಾಗಿದೆ. ತನ್ನ Instagram ವೀಡಿಯೊದಲ್ಲಿ, ರಾಖಿ ತನ್ನ ಸುಂದರವಾದ ಮಲಗುವ ಕೋಣೆ, ವಾಸಿಸುವ ಪ್ರದೇಶ, ಅಡುಗೆಮನೆ ತೋರಿಸಿದ್ದಾರೆ.  ಆಕೆಯ ಐಷಾರಾಮಿ ಮನೆಯು ಮ್ಯೂಟ್ ಮತ್ತು ಬ್ಲೂಸ್, ಗ್ರೇಸ್ ಮತ್ತು ಪಿಂಕ್‌ಗಳ ಮಣ್ಣಿನ ಛಾಯೆಗಳನ್ನು ಹೊಂದಿದೆ.  

59

ಬಾಲಿವುಡ್‌ನ ಎವರ್‌ಗ್ರೀನ್  ಬ್ಯಾಚುಲರ್‌ ಸಲ್ಮಾನ್ ಖಾನ್ ಬೇ ಸ್ಟ್ರೀಟ್‌ನಲ್ಲಿ ಅಪಾರ್ಟ್ಮೆಂಟ್ ಹೊಂದಿದ್ದಾರೆ. ವರದಿಯ ಪ್ರಕಾರ ಅವರ ನಿವ್ವಳ ಮೌಲ್ಯ ಸುಮಾರು 2850 ಕೋಟಿಗಳು,  ಸಲ್ಮಾನ್ ಖಾನ್ ದುಬೈನಲ್ಲಿ ಪ್ರತಿ ಸೆಲೆಬ್ರಿಟಿ ಮನೆ ಇರುವ ಅತ್ಯಂತ ಐಷಾರಾಮಿ ಪ್ರದೇಶದಲ್ಲಿ ಆಸ್ತಿಯನ್ನು ಹೊಂದಿದ್ದಾರೆ. ಅಂದರೆ ಬುರ್ಜ್ ಖಲೀಫಾ ಮತ್ತು ಪೆಸಿಫಿಕ್ ಟವರ್ ನಲ್ಲಿ.

69

2010ರಲ್ಲಿ ಬುರ್ಜ್ ಖಲೀಫಾ ಅಪಾರ್ಟ್‌ಮೆಂಟ್, ಯುಕೆಯಲ್ಲಿ 7 ಬೆಡ್‌ರೂಮ್‌ಗಳ ವಿಲ್ಲಾ, ಲಂಬೋರ್ಗಿನಿ ಮತ್ತು ಇತರ ಹಲವು ವಸ್ತುಗಳು ಸೇರಿದಂತೆ ರಾಜ್ ಕುಂದ್ರಾ ಅವರಿಂದ ಅದ್ದೂರಿ ಉಡುಗೊರೆಗಳನ್ನು ಶಿಲ್ಪಾ ಶೆಟ್ಟಿ ಸ್ವೀಕರಿಸಿದ್ದಾರೆ.  ನಂತರ ಶಿಲ್ಪಾ ತಮ್ಮ ಪತಿ ನೀಡಿದ್ದ ವಿಲ್ಲಾವನ್ನು ಮಾರಾಟ ಮಾಡಿ ದುಬೈನ ಪಾಮ್ ಜುಮೇರಾದಲ್ಲಿ ಹೊಸ ವಿಸ್ತಾರವಾದ ವಿಲ್ಲಾವನ್ನು ಖರೀದಿಸಿದರು.

79

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ, ದುಬೈನಲ್ಲಿ ಪಾಮ್ ಜುಮೇರಾದಲ್ಲಿ ಐಶಾರಾಮಿ ಮನೆ ಹೊಂದಿದ್ದಾರೆ. 10 ವರ್ಷಗಳಿಗೂ ಹೆಚ್ಚು ಕಾಲದಿಂದ ದುಬೈನಲ್ಲಿ ನೆಲೆಸಿದ್ದು. ಗ್ರೀಕ್ ಶೈಲಿಯಲ್ಲಿ ಅವರ ಮನೆಯಿದೆ. ದುಬೈನಲ್ಲಿ ಸಾನಿಯಾಗೆ ಎರಡು ಮನೆ ಇದೆ.

89

R.ಮಾಧವನ್ ಮತ್ತು ಅವರ ಪತ್ನಿ, ಹಾಗೂ ಅವರ ಚಾಂಪಿಯನ್ ಮಗ ವೇದಾಂತ್ ಇತ್ತೀಚೆಗೆ ದುಬೈಗೆ ಸ್ಥಳಾಂತರಗೊಂಡರು. ಸೌಲಭ್ಯಗಳ ಕೊರತೆಯಿಂದಾಗಿ, ನಟ ತನ್ನ ಮಗನಿಗೆ ತರಬೇತಿ ನೀಡಲು ದುಬೈಗೆ ತೆರಳಲು ನಿರ್ಧರಿಸಿದರು. ದುಬೈನಲ್ಲಿ ಐಷಾರಾಮಿ ವಿಲ್ಲಾವನ್ನು ನಟ  ಖರೀದಿಸಿದ್ದಾರೆ ಎಂದು ವರದಿಯಾಗಿದೆ. ತನ್ನ ಮಗ 2026 ರಲ್ಲಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಬೇಕೆಂದು ಬಯಸಿರುವುದರಿಂದ  ಸಾಧ್ಯವಾದಷ್ಟು ಉತ್ತಮವಾದ ಈಜು ಕಲಿಸಲು ಅವರು  ದುಬೈಗೆ ಸ್ಥಳಾಂತರಗೊಂಡರು. 

99

ಭಾರತೀಯ ಗಾಯಕ ಸೋನು ನಿಗಮ್ ಅವರ ಕುಟುಂಬಕ್ಕೆ ದುಬೈ ತುಂಬಾ ಇಷ್ಟವಂತೆ. ಹೀಗಾಗಿ ಅವರು ದುಬೈನಲ್ಲಿ ಹೊಸ ಬಂಗಲೆಯನ್ನು ಖರೀದಿಸಿದರು. ಇದು ಎರಡು ಅಂತಸ್ತಿನ ಬಂಗಲೆಯಾಗಿದ್ದು, ದೊಡ್ಡ ಜಾಗ ಮತ್ತು ಖಾಸಗಿ ಕೊಳವನ್ನು ಹೊಂದಿದೆ. ಇವರ ಮನೆಯ ಪಕ್ಕದಲ್ಲಿ  ಬಾಲಿವುಡ್ ವಿಮರ್ಶಕ ಕಮಾಲ್ ಆರ್. ಖಾನ್ ಅವರ ಜನ್ನತ್  ಅಪಾರ್ಟ್ಮೆಂಟ್ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories