ಶಿಖರ್ ತನ್ನ ಬಾಯ್‌ಫ್ರೆಂಡ್ ಎಂದು ನೆಕ್ಲೇಸ್ ಮೂಲಕ ಒಪ್ಪಿಕೊಂಡ ಜಾನ್ವಿ ಕಪೂರ್!

First Published | Apr 10, 2024, 10:23 AM IST

ಇದು ಬಾಲಿವುಡ್‌ನ ಹೊಸ ಟ್ರೆಂಡ್ ಅನಿಸುತ್ತೆ. ಎರಡು ವಾರದ ಹಿಂದಷ್ಟೇ ನಟಿ ಶ್ರದ್ಧಾ ಕಪೂರ್ ತಮ್ಮ ಬಾಯ್‌ಫ್ರೆಂಡ್ ಹೆಸರಿನ ಮೊದಲಕ್ಷರ ಹೊಂದಿರುವ ನೆಕ್ಲೇಸ್ ಧರಿಸಿ ಸಂಬಂಧವನ್ನು ಖಚಿತಪಡಿಸಿದ್ದರು. ಇದೀಗ ಜಾನ್ವಿ ಕಪೂರ್ ಸರದಿ.

ಇದು ಬಾಲಿವುಡ್‌ನ ಹೊಸ ಟ್ರೆಂಡ್ ಅನಿಸುತ್ತೆ. ಎರಡು ವಾರದ ಹಿಂದಷ್ಟೇ ನಟಿ ಶ್ರದ್ಧಾ ಕಪೂರ್ ತಮ್ಮ ಬಾಯ್‌ಫ್ರೆಂಡ್ ಹೆಸರಿನ ಮೊದಲಕ್ಷರ ಹೊಂದಿರುವ ನೆಕ್ಲೇಸ್ ಧರಿಸಿ ಸಂಬಂಧವನ್ನು ಖಚಿತಪಡಿಸಿದ್ದರು. ಇದೀಗ ಜಾನ್ವಿ ಕಪೂರ್ ಸರದಿ.

ಹೌದು, ತಂದೆ ಬೋನಿ ಕಪೂರ್ ನಿರ್ಮಾಣದ ಚಿತ್ರ ಮೈದಾನ್ ಪ್ರದರ್ಶನಕ್ಕೆ ಬಂದಿದ್ದ ಜಾನ್ವಿಯ ನೆಕ್ಲೇಸ್ ಎಲ್ಲರ ಗಮನ ಸೆಳೆಯಿತು. 

Tap to resize

ಇದೊಂದು ಗೋಲ್ಡ್ ಕಸ್ಟಮೈಸ್ ಮಾಡಿಸಿದ ನೆಕ್ಲೇಸ್ ಆಗಿದ್ದು, ಅದರಲ್ಲಿ ಪದಕಕ್ಕೆ 'ಶಿಖು' ಎಂದು ಬರೆಸಲಾಗಿದೆ. ಶಿಖು ಎಂದರೆ ಶಿಖರ್ ಪಹಾರಿಯಾ.

ಈ ಹಿಂದೆ 'ಕಾಫಿ ವಿತ್ ಕರಣ್' ಕಾರ್ಯಕ್ರಮಕ್ಕೆ ಬಂದಿದ್ದ ಜಾನ್ವಿ, ತಮ್ಮ ಸ್ಪೀಡ್ ಡಯಲ್ ಲಿಸ್ಟ್‌ನಲ್ಲಿರುವ 3 ಹೆಸರುಗಳನ್ನು ಹೇಳುವಾಗ, ಅಪ್ಪ, ತಂಗಿ ಖುಷು ಮತ್ತು ಶಿಖು ಎಂದು ಹೇಳಿದ್ದರು. 

ಅಂದರೆ, ಶಿಖರ್ ಪಹಾರಿಯಾಗೆ ಜಾನ್ವಿ ಪ್ರೀತಿಯಿಂದ ಶಿಖು ಎಂದು ಕರೆಯುವುದನ್ನು ಆಗ ಬಹಿರಂಗಪಡಿಸಿದ್ದರು. ಇವರಿಬ್ಬರೂ ಸಾಕಷ್ಟು ಕಡೆ ಒಟ್ಟಿಗೆ ಓಡಾಡುತ್ತಿದ್ದರು. 

ಇತ್ತೀಚೆಗೆ ಜಾನ್ವಿ ಕಪೂರ್ ಹುಟ್ಟುಹಬ್ಬಕ್ಕೆ ಕೂಡಾ ಇಬ್ಬರೂ ಒಟ್ಟಿಗೇ ತಿರುಪತಿಗೆ ಹೋಗಿ ವೆಂಕಟರಮಣನಿಗೆ ಸೇವೆ ಸಲ್ಲಿಸಿ ಬಂದಿದ್ದರು.

ಕೆಲ ದಿನಗಳ ಹಿಂದೆ ಜಾನ್ವಿಯ ತಂದೆ ಬೋನಿ ಕಪೂರ್ ಶಿಖರ್ ಪಹಾರಿಯಾ ಮಗಳಿಗೆ ಉತ್ತಮ ಜೋಡಿ ಎಂದು ಮಾತನಾಡಿದ್ದರು. ಆತ ಬಹಳ ನಂಬಿಕಸ್ಥನಾಗಿದ್ದಾನೆ, ಆಕೆಯ ಬಾಯ್‌ಫ್ರೆಂಡ್ ಆಗುವ ಮೊದಲಿಂದಲೂ ಆತ ನನಗೆ ಸ್ನೇಹಿತ ಎಂದಿದ್ದರು. 

ಹಲವು ಕಾರ್ಯಕ್ರಮಗಳಲ್ಲಿ ಶಿಖರ್ ಬೋನಿ ಕಪೂರ್ ಮತ್ತು ಅರ್ಜುನ್ ಕಪೂರ್ ಜೊತೆ ಕಾಣಿಸಿಕೊಂಡಿದ್ದಾರೆ. ಅಂದ ಹಾಗೆ ಶಿಖರ್  ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ.

ಅಂತೂ ಜಾನ್ವಿ ತನ್ನ ಬಾಯ್‌ಫ್ರೆಂಡ್ ಬಗ್ಗೆ ಮಾತನಾಡದೆಯೇ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಇಷ್ಟಕ್ಕೂ ಇದುವರೆಗೂ ಆಕೆ ಆತನ ಜೊತೆಯ ಓಡಾಟವನ್ನು ಗುಟ್ಟು ಮಾಡುತ್ತಿರಲಿಲ್ಲ ಎಂಬುದೂ ಸತ್ಯವೇ. 

Latest Videos

click me!