ಹಿಂದಿ ಚಿತ್ರರಂಗವನ್ನು ಆಳುತ್ತಿರುವ Non-Nepo ಸ್ಟಾರ್ಸ್‌!

Published : Dec 27, 2022, 05:13 PM IST

ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತ (Nepotism) ಕುರಿತಾಗಿ ಚರ್ಚೆ ಹೊಸದೇನಲ್ಲ. ಬಹಳ ಕಾಲದಿಂದ ಚಾಲ್ತಿಯ್ಲಲಿದೆ. ಆದರೆ ನಟ  ಸುಶಾಂತ್ ಸಿಂಗ್‌ ಸಾವಿನ ನಂತರ ಚಿತ್ರರಂಗದಲ್ಲಿ ನೆಪೊಟಿಸಂ ಬಗ್ಗೆ ಚರ್ಚೆ ಜೋರಾಗುತ್ತಿದೆ. ಇದಕ್ಕೆ ಕಾರಣ ಬಾಲಿವುಡ್‌ನಲ್ಲಿ ಸ್ಟಾರ್‌ಕಿಡ್ಸ್ ಸುಲಭವಾಗಿ ಗಿಟ್ಟಿಸಿಕೊಳ್ಳುತ್ತಿರುವ ಅವಕಾಶಗಳು ಸಹ ಹೌದು. ಆದರೆ ಯಾವುದೇ ಚಿತ್ರರಂಗದ ಹಿನ್ನಲೆ ಇಲ್ಲದೆ ಬಾಲಿವುಡ್‌ನಲ್ಲಿ ನಟ ನಟಿಯರು ಗುರುತಿಸಿಕೊಂಡಿದ್ದಾರೆ. ಹಿಂದಿ ಚಿತ್ರರಂಗವನ್ನು ಆಳುತ್ತಿರುವ ನಾನ್‌ ನೆಪೊ  (Non-Nepo) ಸ್ಟಾರ್ಸ್‌ ಇವರು.  

PREV
19
ಹಿಂದಿ ಚಿತ್ರರಂಗವನ್ನು ಆಳುತ್ತಿರುವ  Non-Nepo  ಸ್ಟಾರ್ಸ್‌!
ಅಮಿತಾಬ್‌ ಬಚ್ಚನ್‌:

ಬಾಲಿವುಡ್‌ ಅನ್ನು ಹಲವು ದಶಕಗಳ ಕಾಲದಿಂದ ಆಳುತ್ತಿರುವ ಬಿಗ್‌ ಬಿ ಯಾವುದೇ ಸಿನಿಮಾ ಹಿನ್ನಲೆ ಹೊಂದಿಲ್ಲ. ತಮ್ಮ ಸ್ವಂತ ಪರಿಶ್ರಮದಿಂದ ಈ ಮಟ್ಟಕ್ಕೆ ತಲುಪಿದ್ದಾರೆ. ಅಮಿತಾಬ್ ಬಚ್ಚನ್  ಅವರ ತಂದೆ ಹರಿವಾನಂಶ್ ರೈ ಬಚ್ಚನ್‌ ಹಿಂದಿ ಕವಿ ಮತ್ತು ತಾಯಿ ತೀಜಿ ಬಚ್ಚನ್ ಸಾಮಾಜಿಕ ಕಾರ್ಯಕರ್ತರಾಗಿದ್ದರು.

29
ಶಾರುಖ್‌ ಖಾನ್‌:

ಕಿಂಗ್‌ ಖಾನ್‌ಗೆ ಕೂಡ ಯಾವುದೇ ಸಿನಿಮಾ ಬ್ಯಾಕ್‌ಗ್ರೌಂಡ್‌ ಇಲ್ಲ. ದೆಹಲಿಯವರಾದ ಇವರ ತಂದೆ ಬ್ಯುಸಿನೆಸ್‌ಮ್ಯಾನ್‌. ಅಷ್ಟೇ ಅಲ್ಲ ಶಾರುಖ್ ಖಾನ್ ಅವರ ಪೂರ್ವಿಕರು ತಾಜ್ ಮೊಹಮ್ಮದ್ ಖಾನ್ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಎಂದು ನಟ ಸಂದರ್ಶನವೊಂದರಲ್ಲಿ ಒಮ್ಮೆ ಹೇಳಿದ್ದಾರೆ. 

39
ದೀಪಿಕಾ ಪಡುಕೋಣೆ:

ಪ್ರಸ್ತುತ ಟಾಪ್‌ ನಟಿಯಾಗಿ ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿರುವ ದೀಪಿಕಾ ಪಡುಕೋಣೆ ತಂದೆ ಪ್ರಕಾಶ್ ಪಡುಕೋಣೆ ಮಾಜಿ ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರ ಮತ್ತು ಅವರ ತಾಯಿ ಉಜ್ಜಾಲಾ ಟ್ರಾವೆಲ್ ಏಜೆಂಟ್.
 

49
ಪ್ರಿಯಾಂಕಾ ಚೋಪ್ರಾ:

ಗ್ಲೋಬಲ್‌ ಐಕಾನ್‌ (Global Icon) ಆಗಿ ಹೆಸರು ಮಾಡಿರುವ ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ನ ಇನ್ನೊಬ್ಬ ನಾನ್‌-ನೆಪೊ ಸ್ಟಾರ್‌. ಪಿಸಿ ಅವರ ತಂದೆ ಭಾರತೀಯ ಸೈನ್ಯದಲ್ಲಿ ವೈದ್ಯರಾಗಿದ್ದರು. ಪ್ರಿಯಾಂಕಾ ಅವರ ತಂದೆ ಮಾತ್ರವಲ್ಲದೆ ಅವರ ತಾಯಿ ಮಧು ಚೋಪ್ರಾ ಕೂಡ  ಹಲವಾರು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಡಾಕ್ಟರ್‌. 

59
ರಣವೀರ್‌ ಸಿಂಗ್‌:

ರಣವೀರ್ ಸಿಂಗ್ ಅವರ ತಂದೆ ಜಗಜಿತ್ ಸಿಂಗ್ ಭವ್ನಾನಿ ವಾಸ್ತುಶಿಲ್ಪಿ ಮತ್ತು ಎಂಜಿನಿಯರ್ ಆಗಿದ್ದು ನಿರ್ಮಾಣ ವ್ಯವಹಾರದಲ್ಲಿದ್ದರು. ಅವರ ತಂದೆ ಗ್ಯಾಂಬ್ಸ್ ಕನ್ಸ್ಟ್ರಕ್ಷನ್ ಕಂ ಎಂಬ ಕಂಪನಿಯ ನೇತೃತ್ವ ವಹಿಸಿದ್ದರು.  


 

69
ಅಕ್ಷಯ್ ಕುಮಾರ್ :

ಬಾಲಿವುಡ್‌ನ ಸೂಪರ್‌ ಸ್ಟಾರ್‌ಗಳಲ್ಲಿ ಒಬ್ಬರಾದ ಅಕ್ಷಯ್‌ ಕುಮಾರ್‌ ಈ ಹಂತ ತಲುಪಲು ವರ್ಷಗಳ ಕಾಲ ಸಾಕಷ್ಷು ಪರಿಶ್ರಮ ಪಟ್ಟಿದ್ದಾರೆ.ಅಕ್ಷಯ್‌ ಅವರ ತಂದೆ ಹರಿ ಓಂ ಭಾಟಿಯಾ ಸೇನಾಧಿಕಾರಿಯಾಗಿದ್ದರು
 

79
ವಿಕ್ಕಿ ಕೌಶಲ್:

ವಿಕ್ಕಿ ಕೌಶಲ್‌ ಅವರು  ಮೊದಲಿನಿಂದ ಬಾಲಿವುಡ್‌ನ ನಂಟು ಹೊಂದಿದ್ದರೂ ಇವರು ವಾಸ್ತವವಾಗಿ ಸ್ಟಾರ್‌ಕಿಡ್‌ ಅಲ್ಲ. ವಿಕ್ಕಿ ತಂದೆ ಶಾಮ್ ಕೌಶಲ್ ಬಾಲಿವುಡ್‌ ಸಿನಿಮಾದಲ್ಲಿ ಆಕ್ಷನ್‌ ನಿರ್ದೇಶಕರಾಗಿದ್ದಾರೆ.

89
ಕಿಯಾರಾ ಅಡ್ವಾಣಿ:

ಬಾಲಿವುಡ್‌ನ ಯಂಗ್‌ ನಟಿಯರಲ್ಲಿ ಒಬ್ಬರಾದ ಕಿಯಾರಾ ಅಡ್ವಾಣಿ ಕೂಡ ಯಾವುದೇ ಚಿತ್ರರಂಗದ ಹಿನ್ನಲೆ ಹೊಂದಿಲ್ಲ. ಕಿಯರಾ ಅಡ್ವಾಣಿ ಸಿಂಧಿ. ಅವರ ತಂದೆ ಜಗದೀಪ್ ಅಡ್ವಾಣಿ ಉದ್ಯಮಿ ಮತ್ತು ತಾಯಿ ಜಿನೀವೀವ್ ಜಾಫ್ರಿ ಶಿಕ್ಷಕಿ.

99
ಅನುಷ್ಕಾ ಶರ್ಮಾ:

ಅನುಷ್ಕಾ ಶರ್ಮ ಕೂಡ ನಾನ್‌-ನೆಪೊ. ಸೆಲ್ಫ್‌ ಮೇಡ್‌ ನಟಿಯರಲ್ಲಿ ಒಬ್ಬರು. ಅನುಷ್ಕಾ ಶರ್ಮಾ ಅವರ ತಂದೆ ಕರ್ನಲ್ ಅಜಯ್ ಕುಮಾರ್ ಶರ್ಮಾ ಸೇನಾಧಿಕಾರಿ  ಮತ್ತು ಅವರ ತಾಯಿ ಆಶಿಮಾ ಶರ್ಮಾ ಗೃಹಿಣಿ.

Read more Photos on
click me!

Recommended Stories