Hansika Motwani; ಹನಿಮೂನ್‌ನಲ್ಲಿ 'ಬಿಂದಾಸ್' ದಂಪತಿ; ಫೋಟೋ ವೈರಲ್

Published : Dec 27, 2022, 04:45 PM IST

ಬಹುಭಾಷ ನಟಿ ಹನ್ಸಿಕಾ ಮೋಟ್ವಾನಿ ಮತ್ತು ಸೊಹೇಲ್ ಕಥರಿಯಾ ದಂಪತಿ ಹನಿಮೂನ್‌ಗೆ ತೆರಳಿದ್ದು ಪ್ರವಾಸದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

PREV
17
Hansika Motwani; ಹನಿಮೂನ್‌ನಲ್ಲಿ 'ಬಿಂದಾಸ್' ದಂಪತಿ; ಫೋಟೋ ವೈರಲ್

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ಇತ್ತೀಚಿಗಷ್ಟೆ ಗೆಳೆಯ ಸೊಹೇಲ್ ಕಥರಿಯಾ ಜೊತೆ ದಾಂಪತ್ಯಕ್ಕೆ ಕಾಲಿಟ್ಟರು. ಹನ್ಸಿಕಾ ಮತ್ತು ಸೊಹೇಲ್ ಮದುವೆ ರಾಜಸ್ಥಾನದ ಅರಮನೆಯಲ್ಲಿ ಅದ್ದೂರಿಯಾಗಿ ನೆರವೇರಿತು. ಸುಮಾರು ಐದಾರು ದಿನಗಳ ಕಾಲ ನಡೆದ ಮದುವೆ ಸಮಾರಂಭದಲ್ಲಿ ಆಪ್ತರು, ಕುಟುಂಬದವರು ಮಾತ್ರ ಭಾಗಿಯಾಗಿದ್ದರು. 

27

ಡಿಸೆಂಬರ್ 4ರಂದು ಹಸೆಮಣೆ ಏರಿದ ಹನ್ಸಿಕಾ ಮತ್ತು ಸೊಹೇಲ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹನ್ಸಿಕಾ ಕೆಂಪು ಬಣ್ಣದ ಲೆಹಂಗಾದಲ್ಲಿ ಕಂಗೊಳಿಸಿದ್ದರು. ಸೊಹೇಲ್ ಕಥರಿಯಾ ಬಿಳಿ ಬಣ್ಣದ ಎಂಬ್ರಾಯಿಡರಿ ಶೇರ್ವಾನಿಯಲ್ಲಿ ಮಿಂಚಿದ್ದರು. ಮದುವೆಯಾಗಿ 20 ದಿನಗಳ ಬಳಿಕ ಹನ್ಸಿಕಾ ದಂಪತಿ ಹನಿಮೂನ್ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ.

37

ಹನ್ಸಿಕಾ ಮತ್ತು ಸೊಹೇಲ್ ಕಥರಿಯಾ ದಂಪತಿ ಹನಿಮೂನ್‌ಗೆ ತೆರಳಿದ್ದಾರೆ. ಇಬ್ಬರೂ ಯುರೋಪ್‌ಗೆ ಹನಿಮೂನ್ ಹೋಗಿದ್ದಾರೆ. ಹನ್ಸಿಕಾ ಮತ್ತು ಸೊಹೇಲ್ ದಂಪತಿಯ ಹನಿಮೂನ್ ಪ್ರವಾಸದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

47

ಹನ್ಸಿಕಾ ಒಂದಿಷ್ಟು ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಪ್ರವಾಸ ಎಂಜಾಯ್ ಮಾಡುತ್ತಿರುವ ಖುಷಿ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಹನ್ಸಿಕಾ ಜೋಡಿ ವಿದೇಶದಲ್ಲೇ ಕ್ರಿಸ್ಮಸ್ ಕೂಡ ಆಚರಣೆ ಮಾಡಿದರು. ನವ ಜೋಡಿಯ ಕ್ರಿಸ್ಮಸ್ ಸಂಭ್ರಮಾಚರಣೆಯ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

57

ನಟಿ ಹನ್ಸಿಕಾ ಸಿನಿಮಾ ಜರ್ನಿ ಬಗ್ಗೆ ಹೇಳುವುದಾದರೆ 2003ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಹಿಂದಿ ಸಿನಿಮಾ ಮೂಲಕ ತೆರೆಮೇಲೆ ಮಿಂಚಿದ ಹನ್ಸಿಕಾ ನಂತರ ಸೌತ್ ಇಂಡಿಯಾ ಕಡೆ ಮುಖ ಮಾಡಿದರು. ತೆಲುಗು ಸಿನಿಮಾ ಮೂಲಕ ದಕ್ಷಿಣಕ್ಕೆ ಎಂಟ್ರಿ ಹನ್ಸಿಕಾ ಬಳಿಕ ಸೌತ್ ನಟಿಯಾಗಿಯೇ ಖ್ಯಾತಿ ಗಳಿಸಿದರು.

67

ಕನ್ನಡ ಸಿನಿಮಾದಲ್ಲೂ ಹನ್ಸಿಕಾ ನಟಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಜೊತೆ ಬಿಂದಾಸ್ ಸಿನಿಮಾದಲ್ಲಿ ಹನ್ಸಿಕಾ ನಟಿಸಿದ್ದರು. ಆದರೆ ಆ ಸಿನಿಮಾ ಬಳಿಕ ಮತ್ತೆ ಕನ್ನಡ ಪ್ರೇಕ್ಷಕರ ಮುಂದೆ ಬಂದಿಲ್ಲ.  ಸದ್ಯ ತಮಿಳಿನ ಅನೇಕ ಸಿನಿಮಾಗಳು ಹನ್ಸಿಕಾ ಕೈಯಲ್ಲಿದೆ.  

77

ಹನ್ಸಿಕಾ ಸದ್ಯ ಪಾರ್ಟನರ್, 105 ಮಿನಿಟ್ಸ್, ರೌಡಿ ಬೇಬಿ, ಗಾರ್ಡಿಯನ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಹನ್ಸಿಕಾ ಬ್ಯುಸಿಯಾಗಿದ್ದಾರೆ. ತಮಿಳು ಸಿನಿಮಾದ ಜೊತೆಗೆ ತೆಲುಗು ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಕೈ ತುಂಬ ಸಿನಿಮಾಗಳನ್ನುಇಟ್ಟುಕೊಂಡಿರುವ ಹನ್ಸಿಕಾ ಸದ್ಯದಲ್ಲೇ ಮತ್ತೆ ಸಿನಿಮಾಗೆ ಮರಳಲಿದ್ದಾರೆ. 
 

Read more Photos on
click me!

Recommended Stories