Published : Dec 02, 2023, 10:05 AM ISTUpdated : Dec 02, 2023, 10:46 AM IST
2023 ರ ವರ್ಷ ಸಿನಿಮಾರಂಗಕ್ಕೆ ವಿಶೇಷವಾಗಿದೆ. ಏಕೆಂದರೆ ಕೋವೀಡ್ ನಂತರ ಪ್ರೇಕ್ಷಕರು ಮತ್ತೆ ಚಿತ್ರಮಂದಿರಗಳಲ್ಲಿ ಕಾಣಿಸಿಕೊಂಡ ವರ್ಷವಾಯಿತು. ಥಿಯೇಟರ್‌ಗಳು ಸ್ಥಗಿತಗೊಂಡಾಗ, ಚಲನಚಿತ್ರಗಳು ನೇರವಾಗಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆ ಮಾಡಲು ಪ್ರಾರಂಭಿಸಿದವು ಆದರೆ ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಲಾಭವಾಗಲಿಲ್ಲ. 2023 ಭಾರತೀಯ ಚಿತ್ರರಂಗಕ್ಕೆ ಇತಿಹಾಸವನ್ನು ಸೃಷ್ಟಿಸುವುದರೊಂದಿಗೆ ಬಹು ದೊಡ್ಡ ಹಿಟ್‌ಗಳನ್ನು ಕಂಡಿತು 2023ರ ಜನಪ್ರಿಯ ಸಿನಿಮಾಗಳ ಪಟ್ಟಿ ಇಲ್ಲಿದೆ.
ಜವಾನ್:
IMDb ಪ್ರಕಾರ, ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ಶಾರುಖ್ ಖಾನ್ ಅವರ ಜವಾನ್ '2023 ರ ಟಾಪ್ 10 ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳ (ಥಿಯೇಟ್ರಿಕಲ್)' ಪಟ್ಟಿಯನ್ನು ಮುನ್ನಡೆಸಿದೆ ಮತ್ತು ವರ್ಷದ ಅತಿದೊಡ್ಡ ಗಳಿಕೆಯಾದ ಚಿತ್ರವಾಗಿ ಹೊರಹೊಮ್ಮಿದೆ.
210
ಪಠಾಣ್:
ಈವರ್ಷದ ಮೊದಲ ದೊಡ್ಡ ಹಿಟ್ ಆಗಿದ್ದ ಶಾರುಖ್ ಖಾನ್ ಅವರ ಇನ್ನೊಂದು ಚಿತ್ರ ಪಠಾಣ್, ಈ ಪಟ್ಟಿಯಲ್ಲಿ ಎರಡನೆಯ ಸ್ಥಾನ ಆಕ್ರಮಿಸಿದೆ. ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟು ಮಾಡಿದ ಡ್ಯಾನ್ಸಿಗೆ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾದರೂ ಬಾಕ್ಸ ಆಫೀಸ್ ಕೊಳ್ಳೆ ಹೊಡೆಯುವದರಲ್ಲಿ ಈ ಚಿತ್ರ ಹಿಂದೆ ಬೀಳಲಿಲ್ಲ.
310
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ:
ನತರ ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಪಡೆದಿದೆ. ಈ ಸಿನಿಮಾದಲ್ಲಿ , ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ನಟಿಸಿದ್ದಾರೆ. ಲಿಪಿ ಲಾಕ್, ರೊಮ್ಯಾನ್ಸ್ ಸೀನ್ ಇರೋ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಗಂಡ ಹಾಗೂ ಎಕ್ಸ್ ಬಾಯ್ ಫ್ರೆಂಡ್ ಮಡದಿ ಆಲಿಯಾ ಭಟ್ ಕೆಮಿಸ್ಟ್ರಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
410
Jailer Movie
ಲಿಯೋ:
ಲೋಕೇಶ್ ಕನಕರಾಜ್ ನಿರ್ದೇಶನದ ಸೌತ್ ಸೂಪರ್ ತಳಪತಿ ವಿಜಯ್ ಅಭಿನಯದ ಲಿಯೋ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.ಬಿಡುಗಡೆಗೂ ಮುನ್ನವೇ ಹವಾ ಸೃಷ್ಟಿಸಿದ್ದ ಲಿಯೋ ಬಾಕ್ಸ್ ಕೊಳ್ಳೆ ಹೊಡೆಯುವುದರಲ್ಲಿಯೂ ಯಶಸ್ವಿಯಾಯಿತು.
510
OMG 2:
ಹೆಚ್ಚು ವಿವಾದಗಳ ನಡುವೆ ಬಿಡುಗಡೆಯಾದ ಅಕ್ಷಯ್ ಕುಮಾರ್ ಮತ್ತು ಪಂಕಜ್ ತ್ರಿಪಾಠಿ ಅಭಿನಯದ OMG 2 ಸಿನಿಮಾ ನಂತರದ ಸ್ಥಾನದಲ್ಲಿದೆ. ಸದಾ ಪ್ಲಾಫ್ ಚಿತ್ರಗಳನ್ನು ನೀಡುತ್ತಿರುವ ಅಕ್ಷಯ್ ಕುಮಾರ್, ಈ ಚಿತ್ರದ ಮೂಲಕ ಸ್ವಲ್ಪ ಉಸಿರಾಡುವಂತಾಗಿದೆ.
610
ಜೈಲರ್:
ಸೂಪರ್‌ಸ್ಟಾರ್ ರಜನಿಕಾಂತ್ ಅವರ ಜೈಲರ್ ಆರನೇ ಸ್ಥಾನದಲ್ಲಿದೆ, ತಮಿಳು ಭಾಷೆಯ ಈ ಆಕ್ಷನ್ ಕಾಮಿಡಿ ಚಿತ್ರವನ್ನು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸಿದ್ದಾರೆ. ಬಹಳ ವರ್ಷಗಳ ನಂತರ ಈ ಸೂಪರ್ ಸ್ಟಾರ್ ನಟಿಸಿದ್ದು, ಚಿತ್ರ ರಸಿಕರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿತ್ತು.
710
ಗದರ್ 2:
ಸನ್ನಿ ಡಿಯೋಲ್ ಅವರ ಪುನರಾಗಮನದ ಗದರ್ 2 ಸಿನಿಮಾ ನಂತರದ ಸ್ಥಾನದಲ್ಲಿದೆ. ಅಮಿಷಾ ಪಟೇಲ್ ನಟಿಸಿರುವ ಈ ಸಿನಿಮಾ ಸೂಪರ್‌ಹಿಟ್ ಗದರ್‌ನ ಮುಂದುವರೆದ ಭಾಗ. ಸುಮಾರು ಎರಡು ದಶಕಗಳ ನಂತ ಸನ್ನಿಗೆ ಬ್ರೇಕ್ ಕೊಟ್ಟ ಸಿನಿಮಾ ಇದಾಗಿದ್ದು, ಪ್ರೇಕ್ಷಕರ ಮನ ಗೆಲ್ಲುವಲ್ಲಿಯೂ ಯಶಸ್ವಿಯಾಯಿತು.
810
ಕೇರಳ ಸ್ಟೋರಿ:
ಸಾಕಷ್ಟು ಹವಾ ಸೃಷ್ಟಿಸಿದ ಕೇರಳ ಸ್ಟೋರಿ 2023ರ ಜನಪ್ರಿಯ ಸಿನಿಮಾಗಳಲ್ಲಿ ಒಂದು. ಸುದೀಪ್ತೋ ಸೇನ್ ನಿರ್ದೇಶಿಸಿರುವ ಇದರಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ ಮತ್ತು ಸಿದ್ಧಿ ಇದ್ನಾನಿ ನಟಿಸಿದ್ದಾರೆ. ಹಾಸ್ಟೇಲ್ ಒಂದರಲ್ಲಿ ಅನ್ಯ ಧರ್ಮೀಯ ಯುವತಿಯರನ್ನು ಮತಾಂತರಗೊಳಿಸುವ ಕಥೆಯುಳ್ಳ ಈ ಚಿತ್ರಕ್ಕೆ ಸಾಕಷ್ಟು ವಿವಾದಗಳೂ ಸುತ್ತಿಕೊಂಡಿದ್ದವು.
910
ತೂ ಜೂಥಿ ಮೈನ್ ಮಕ್ಕರ್
ರೊಮ್ಯಾಂಟಿಕ್ ಕಾಮಿಡಿ ಚಲನಚಿತ್ರ ತು ಜೂಥಿ ಮೈನ್ ಮಕ್ಕರ್ ಅನ್ನು ಲವ್ ರಂಜನ್ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ನಟಿಸಿದ್ದಾರೆ.
1010
ಭೋಲಾ:
ಅಜಯ್ ದೇವಗನ್ ನಿರ್ದೇಶನ ಮತ್ತು ನಟನೆಯ ಭೋಲಾ ಹತ್ತಣೇಯ ಸ್ಥಾನದಲ್ಲಿದೆ. ಹಿಂದಿಯ ಆಕ್ಷನ್ ಥ್ರಿಲ್ಲರ್ ಚಿತ್ರ ತಮಿಳು ಚಲನಚಿತ್ರ ಕೈಥಿಯ ರಿಮೇಕ್ ಆಗಿದೆ ಮತ್ತು ಟಬು, ದೀಪಕ್ ಡೊಬ್ರಿಯಾಲ್, ಸಂಜಯ್ ಮಿಶ್ರಾ, ಗಜರಾಜ್ ರಾವ್ ಮತ್ತು ವಿನೀತ್ ಕುಮಾರ್ ಜೊತೆಗೆ ಅಜಯ್ ದೇವಗನ್ ನಟಿಸಿದ್ದಾರೆ.