ಭೂಗತ ಪಾತಕಿಗಳ ಪ್ರೀತಿಯ ಬಲೆಗೆ ಬಿದ್ದು, ಜೀವನವನ್ನೇ ಹಾಳು ಮಾಡಿಕೊಂಡ ನಟಿಯರು!

Published : Dec 01, 2023, 04:57 PM IST

ಭೂಗತ ಜಗತ್ತು ಮತ್ತು ಗ್ಲಾಮರ್ ನಡುವಣ ಸಂಬಂಧ ಇಂದು - ನಿನ್ನೆಯದ್ದಲ್ಲ. ಬಾಲಿವುಡ್​ ಭೂಗತ ಪಾತಕಿಗಳ ಹಿಡಿತದಲ್ಲಿದೆ.  ಅದೇ ರೀತಿ ಅಂಡರ್‌ವರ್ಲ್ಡ್‌ ಅವರ ಜೊತೆ ಸಂಬಂಧ ಇರಿಸಿಕೊಂಡಿರುವ ನಟಿಯರು ಇವರುಗಳು.

PREV
17
ಭೂಗತ ಪಾತಕಿಗಳ ಪ್ರೀತಿಯ ಬಲೆಗೆ ಬಿದ್ದು, ಜೀವನವನ್ನೇ ಹಾಳು ಮಾಡಿಕೊಂಡ ನಟಿಯರು!

ಮಮತಾ ಕುಲಕರ್ಣಿ:
ನಟಿ ಮಮತಾ ಕುಲಕರ್ಣಿ ಅವರು ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಂಟ ಚೋಟಾ ರಾಜನ್ ಜೊತೆ ಡೇಟಿಂಗ್ ನಡೆಸುತ್ತಿದ್ದರು ಎಂಬ ಸುದ್ದಿ ಇತ್ತು. ನಂತರ ಸನ್ಯಾಸಿ ಆದ್ರು ಎಂಬ ಸುದ್ದಿಯೂ ಬಂತು. ಆದರೆ, ಅಮೇಲೆ ಎಲ್ಲಿ ಹೋದರು, ಏನು ಮಾಡಿದರೆ ಎಂಬ ಬಗ್ಗೆ ಏನೂ ಸುದ್ದಿ ಇಲ್ಲ. 

27

ಮಂದಾಕಿನಿ:
ದಾವೂದ್ ಇಬ್ರಾಹಿಂ ಜೊತೆಗಿನ ಅವರ ಫೋಟೋವೊಂದು ವೈರಲ್ ಆದ ನಂತರ ನಟಿ ಮಂದಾಕಿನಿ ವೃತ್ತಿಜೀವನವೇ ಕುಸಿಯಲು ಪ್ರಾರಂಭಿಸಿತು ‘ರಾಮ್ ತೇರಿ ಗಂಗಾ ಮೈಲಿ’  ಚಿತ್ರದ ಮೂಲಕ ಹೆಸರು ಮಾಡಿದ್ದ ನಟಿಗೆ ಭೂಗತಿ ಪಾತಕಿಯೊಂದಿಗೆ ನಂಟೆಂಬ ಸುದ್ದಿ ಹರಡುತ್ತಿದ್ದಂತೆ ವೃತ್ತಿ ಜೀವನವೇ ಹಾಳಾಯಿತು. 

37

ಮೋನಿಕಾ ಬೇಡಿ:
ಭೂಗತ ಜಗತ್ತಿನ  ಜೊತೆ ಸಂಬಂಧ ಹೊಂದಿದ್ದ ಇನ್ನೊಬ್ಬ ನಟಿ ಮೋನಿಕಾ ಬೇಡಿ. ಆ ದಿನಗಳಲ್ಲಿ ಭೂಗತ ಪಾತಕಿ ಅಬು ಸಲೇಂ ಜೊತೆ ನಟಿ ಮೋನಿಕಾ ಬೇಡಿ ಅವರ  ಸಂಬಂಧ ಹಾಟ್ ಟಾಪಿಕ್ ಆಗಿತ್ತು. ಇಸ್ಲಾಂಗೆ ಮತಾಂತರಗೊಂಡು  ಅಬು ಸಲೇಂ ವರಿಸಿದ ಮೋನಿಕಾರ ಬಾಳು ಆಮೇಲೆ ನರಕವಾಯಿತು. 2002ರಲ್ಲಿ ಲಿಸ್ಬನ್ ಪೊಲೀಸರು ನಕಲಿ ಪಾಸ್​ ಪೋರ್ಟ್​ಗಳನ್ನು ಬಳಸಿ ಪೋರ್ಚುಗಲ್​ಗೆ ಪ್ರವೇಶಿಸಿದ್ದಕ್ಕಾಗಿ ಮೋನಿಕಾ ಮತ್ತು ಅಬು ಸಲೇಂರನ್ನು ಬಂಧಿಸಿದ್ದರು. ಅವರನ್ನು 2005 ರಲ್ಲಿ ಭಾರತಕ್ಕೆ ಹಸ್ತಾಂತರಿಸಲಾಯಿತು. ಎರಡು ವರ್ಷಗಳ ಜೈಲು ಶಿಕ್ಷೆಯ ನಂತರ, ಮೋನಿಕಾ 2007ರಲ್ಲಿ ಬಿಡುಗಡೆಯಾದರು. 

47
Underworld

ಸೋನಾ ಮಿರ್ಜಾ:
ಭೂಗತ ಪಾತಕಿಯ ಪ್ರೀತಿಗೆ ಬಿದ್ದ ಇನ್ನೊಬ್ಬ ನಟಿ ಸೋನಾ ಮಿರ್ಜಾ. ಇವರು ಡಾನ್‌ ಹಾಜಿ ಮಸ್ತಾನ್ ಜೊತೆ ಸಂಬಂಧ ಹೊಂದಿದ್ದರು 

57

 ಹಿನಾ ಕೌಸರ್‌:
70ರ ದಶಕದಲ್ಲಿ ಸಕತ್​ ಫೇಮಸ್​  ನಟಿ, ಸಿನಿಮಾ ನಿರ್ದೇಶಕ ಕೆ. ಆಸಿಫ್ ಮಗಳು ಹಿನಾ ಕೌಸರ್. ಗ್ಯಾಂಗ್‌ಸ್ಟರ್‌ ಇಕ್ಬಾಲ್ ಮಿರ್ಚಿಯನ್ನು ಮದುವೆಯಾದರು.

67

ಜಾಸ್ಮಿನ್ ಧುನ್ನಾ:
ಭೂತ್ ಪಾತಕಿ  ದಾವೂದ್ ಇಬ್ರಾಹಿಂ ಜೊತೆಗಿನ ಸಂಬಂಧದ ನಂತರ ನಟಿ ಜಾಸ್ಮಿನ್ ಧುನ್ನಾ ಉದ್ಯಮದಿಂದ ಕಣ್ಮರೆಯಾದರು 

77

ಅನಿತಾ ಅಯೂಬ್:
ಪಾಕಿಸ್ತಾನದ ನಟಿ ಅನಿತಾ ಅಯೂಬ್ ದಾವೂದ್ ಇಬ್ರಾಹಿಂಗೆ ನಿಕಟವಾಗಿದ್ದರು.  ಒಮ್ಮೆ  ಪಾಕಿಸ್ತಾನಿ ನಿರ್ದೇಶಕರು ತಮ್ಮ ಚಿತ್ರಕ್ಕೆ ಅನಿತಾ ಅಯೂಬ್ ಅವರನ್ನು ರಿಜೆಕ್ಟ್ ಮಾಡಿದ್ದ ಕಾರಣಕ್ಕೆ ಅವರ ಕೊಲೆಯಾಗಿ ಹೋಯಿತು. ಅನಿತಾ ಕೆಲ ಕಾಲ ಬಾಲಿವುಡ್​ನಲ್ಲೂ ಕೆಲಸ ಮಾಡಿದ್ದಾರೆ. 
 

 

 

Read more Photos on
click me!

Recommended Stories