ಮೊನ್ನೆಯಷ್ಟೇ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಇದರಲ್ಲಿ ಜವಾನ್ ಸಿನಿಮಾದಲ್ಲಿ ಅಭಿನಯಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಅವರು 12th ಫೇಲ್ ಸಿನಿಮಾದ ವಿಕ್ರಾಂತ್ ಮೆಸ್ಸಿ ಜೊತೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಷ್ಟಕ್ಕೂ 2023 ಶಾರುಖ್ ಅವರಿಗೆ ಬ್ಲಾಕ್ಬಸ್ಟರ್ ಚಿತ್ರಗಳನ್ನು ಕೊಟ್ಟ ವರ್ಷ. ಒಂದರ ಮೇಲೊಂದರಂತೆ ಸಿನಿಮಾಗಳು ಹಿಟ್ ಆದವು. ಫ್ಲಾಪ್ ಮೇಲೆ ಫ್ಲಾಪ್ ಚಿತ್ರ ಕೊಟ್ಟು ಸಿನಿಮಾ ಸಹವಾಸವೇ ಬೇಡ ಎಂದು ನಾಲ್ಕೈದು ವರ್ಷ ತೆರೆಮರೆಗೆ ಸರಿದು ಕೊನೆಗೆ ವಾಪಸ್ ಆದವರೇ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟರು.
28
ಹಾಲಿವುಡ್ಗೆ ಜಿಗಿದು ಕೈಸುಟ್ಟುಕೊಂಡ ಶಾರುಖ್
ಆದರೆ ನಿಮಗೆ ಗೊತ್ತಾ? ಒಮ್ಮೆ ಶಾರುಖ್ ಬಾಲಿವುಡ್ನಿಂದ ಹಾಲಿವುಡ್ಗೆ ಜಿಗಿದಿದ್ದರು. ಅಲ್ಲಿ ಅದೃಷ್ಟ ಹುಡುಕಲು ಪ್ರಯತ್ನಿಸಿದ್ದರು. ಆದರೆ ಕೈಸುಟ್ಟುಕೊಂಡು ಹಾಲಿವುಡ್ ಸಹವಾಸ ಸಾಕು ಎಂದು ಭಾರತಕ್ಕೆ ವಾಪಸಾಗಿದ್ದರು. ಅದು 2011ರ ಹೊತ್ತಿಗೆ ಹಾಲಿವುಡ್ನ ಎಕ್ಸ್ಟ್ರೀಮ್ ಸಿಟಿ ಚಿತ್ರದಲ್ಲಿ ನಟಿಸಿದ್ದರು. ಶಾರುಖ್ ಖಾನ್ ತಮ್ಮ ಅದೃಷ್ಟವನ್ನು ಹಾಲಿವುಡ್ನಲ್ಲಿ ನೋಡಲು ಬಯಸಿದ್ದರು. ಈ ಚಿತ್ರದಲ್ಲಿ ಖ್ಯಾತ ಹಾಲಿವುಡ್ ನಟ ಲಿಯೊನಾರ್ಡೊ ಡಿಕಾಪ್ರಿಯೊ ಕೂಡ ಅವರ ಜೊತೆಗಿದ್ದರು. ಆದರೆ ಚಿತ್ರ ಬಿಡುಗಡೆಯಾಗಲೇ ಇಲ್ಲ. ಕೊನೆಗೆ ಇದರ ಸಹವಾಸವೇ ಬೇಡ ಎಂದು ವಾಪಸ್ ಬಂದರು.
38
ಐದು ಚಿತ್ರಗಳು ರಿಲೀಸ್ ಆಗ್ಲೇ ಇಲ್ಲ
ಅಷ್ಟೇ ಅಲ್ಲದೇ, ಶಾರುಖ್ ನಟಿಸಿರೋ ಇನ್ನೂ ಐದು ಬಾಲಿವುಡ್ ಚಿತ್ರಗಳು ಬಿಡುಗಡೆಯಾಗಲೇ ಇಲ್ಲ. ಅಷ್ಟಕ್ಕೂ ಒಂದು ಚಿತ್ರ ತಯಾರು ಮಾಡಿದಾಗ, ಅದು ಸಕ್ಸಸ್ ಆಗಿಯೇ ಆಗುತ್ತದೆ ಎಂದು ಹೇಳುವುದು ಕಷ್ಟೇ. ನೂರಾರು ಕೋಟಿ ರೂಪಾಯಿಗಳನ್ನು ಖರ್ಚುಮಾಡಿ ದೊಡ್ಡ ದೊಡ್ಡ ಸ್ಟಾರ್ಗಳನ್ನು ಹಾಕಿಕೊಂಡು ಸಿನಿಮಾ ಮಾಡಿದರೂ ಅದು ಫ್ಲಾಪ್ ಆಗುವುದು ಇದೆ, ಅದೇ ಇನ್ನೊಂದೆಡೆ ಕೆಲವೇ ಕೋಟಿ ರೂಪಾಯಿಗಳಲ್ಲಿ ಸಾಮಾನ್ಯ ನಟರನ್ನು ಹಾಕಿಕೊಂಡು ಮಾಡುವ ಚಿತ್ರಗಳೂ ಭರ್ಜರಿ ಯಶಸ್ಸು ಕಾಣುವುದು ಇದೆ. ಯಾವುದನ್ನೂ ಹೀಗೆಯೇ ಎಂದು ಊಹಿಸುವುದು ಕಷ್ಟ.
ಅದೇ ರೀತಿ ನಟ ಶಾರುಖ್ ಖಾನ್ ಅವರ ಐದು ಚಿತ್ರಗಳು ರಿಲೀಸ್ ಆಗಲೇ ಇಲ್ಲ ಎನ್ನುವ ಸತ್ಯ ಇದೀಗ ಬಹಿರಂಗಗೊಂಡಿದೆ. 95ಕ್ಕೂ ಚಿತ್ರಗಳಲ್ಲಿ ನಟಿಸಿರುವ ಶಾರುಖ್ ಅವರ ಕೆಲವು ಚಿತ್ರಗಳು ಫ್ಲಾಪ್ ಎಂದು ಸಾಬೀತಾಗಿದ್ದರೆ ಐದು ಚಿತ್ರಗಳು ಬಿಡುಗಡೆಯೇ ಕಾಣಲಿಲ್ಲ.
58
ಬಿಡುಗಡೆ ಕಾಣದ ರಕ್ಷಕ್
ರಕ್ಷಕ್ ಹೆಸರಿನ ಚಿತ್ರದ ಚಿತ್ರೀಕರಣ 2001 ರಲ್ಲಿ ಪ್ರಾರಂಭವಾಯಿತು. ಶಾರುಖ್ ಖಾನ್ ಜೊತೆಗೆ ಅಮಿತಾಭ್ ಬಚ್ಚನ್ ಕೂಡ ಇದ್ದರು. ಜೂಹಿ ಚಾವ್ಲಾ ನಾಯಕಿಯಾಗಿದ್ದರು. ಆದರೆ ಕಾರಣಾಂತರಗಳಿಂದ ಈ ಚಿತ್ರ ಬಿಡುಗಡೆಯೇ ಕಾಣಲಿಲ್ಲ.
68
ಬಿಡುಗಡೆ ಕಾಣದ ಅಹಮಕ್
ಅಹಮಕ್ ಹೆಸರು ಚಿತ್ರ ಸಂಪೂರ್ಣವಾಗಿ ಸಿದ್ಧವಾಗಿತ್ತು. 1999ರಲ್ಲಿ ತೆರೆ ಕಾಣಬೇಕಿತ್ತು. ಚಿತ್ರ ಪೂರ್ಣಗೊಂಡು ಕೆಲವು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿತು. ಆದರೆ ಈ ಚಿತ್ರ ಥಿಯೇಟರ್‌ಗೆ ಬರಲೇ ಇಲ್ಲ.
78
ಬಿಡುಗಡೆ ಕಾಣದ ಶಿಖರ್
ಶಿಖರ್ ಚಲನಚಿತ್ರದ ನಿರ್ದೇಶಕರು ಸುಭಾಷ್ ಘಾಯ್. ಸುಭಾಷ್ ಅವರು ಶಾರುಖ್ ಖಾನ್ ಮತ್ತು ಮಾಧುರಿ ದೀಕ್ಷಿತ್ ಅವರೊಂದಿಗೆ ಈ ಚಿತ್ರವನ್ನು ಮಾಡಲು ಬಯಸಿದ್ದರು. ಆದಾಗ್ಯೂ, ಶಾರುಖ್ ಖಾನ್ ಚಿತ್ರದಲ್ಲಿ ಕೆಲವು ಬದಲಾವಣೆಗಳನ್ನು ಬಯಸಿದ್ದರು. ಆದರೆ ಸುಭಾಷ್ ಘಾಯ್ ಅದಕ್ಕೆ ಒಪ್ಪಲಿಲ್ಲ. ಇದರಿಂದಾಗಿ ಶಾರುಖ್ ಖಾನ್ ಚಿತ್ರದಿಂದ ಹೊರಗುಳಿದರು, ನಂತರ ಸುಭಾಷ್ ಘಾಯ್ ಅವರು ಅನಿಲ್ ಕಪೂರ್, ಐಶ್ವರ್ಯ ರೈ ಮತ್ತು ಅಕ್ಷಯ್ ಖನ್ನಾ ಅವರೊಂದಿಗೆ ತಾಲ್ ಎಂಬ ಚಿತ್ರವನ್ನು ನಿರ್ಮಿಸಿದರು, ಇದು ಭಾರಿ ಹಿಟ್ ಆಗಿತ್ತು.
88
ಬಿಡುಗಡೆ ಕಾಣದ ಶಿಖರ್
ಈ ಚಿತ್ರದ ಶೂಟಿಂಗ್ ಕೂಡ ಅರ್ಧಕ್ಕಿಂತ ಹೆಚ್ಚು ಮುಗಿದಿತ್ತು. ಆದರೆ ಕಾರಣಾಂತರಗಳಿಂದ ಚಿತ್ರೀಕರಣ ಸ್ಥಗಿತಗೊಂಡಿದ್ದು, ಚಿತ್ರ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.