ಅರ್ಜಿತ್ ಸಿಂಗ್ ಪಠಾಣ್ ಸಿನಿಮಾದ ಹೊಸ ಹಾಡಿಗೆ ಧ್ವನಿ ನೀಡಿದ್ದಾರೆ ಮತ್ತು ಈ ಹಾಡನ್ನು ಶಾರುಖ್ ಮತ್ತು ದೀಪಿಕಾ ಜೊತೆಯಾಗಿ ಚಿತ್ರೀಕರಿಸಲಾಗಿದೆ.
ಕಳೆದ ದಿನ ಪಠಾಣ್ ಅವರ ಹೊಸ ಹಾಡು ಬಿಡುಗಡೆಯ ಮಾಹಿತಿಯನ್ನು ಚಿತ್ರ ನಿರ್ಮಾಪಕರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಈ ಘೋಷಣೆಯೊಂದಿಗೆ, ಹೊಸ ಹಾಡು ಪ್ರೇಕ್ಷಕರು ಮತ್ತು ಅಭಿಮಾನಿಗಳ ಉತ್ಸಾಹವನ್ನು ಹೆಚ್ಚಿಸಿದೆ.
ಜೂಮ್ ಜೋ ಹಾಡಿನಲ್ಲಿ ಶಾರುಖ್ ಖಾನ್ ಉದ್ದನೆಯ ಹೇರ್ ಕಟ್ ಲುಕ್ ಮತ್ತು ಕನ್ನಡಕದ ಜೊತೆ ತಮ್ಮ ಫಿಟ್ ಬಾಡಿಯಲ್ಲಿ ಮಿಂಚಿದ್ದಾರೆ.
ಹಸಿರು ಬಣ್ಣದ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿ ತುಂಬಾ ಸ್ಟೈಲಿಶ್ ಆಗಿ ಕಾಣುತ್ತಿದ್ದಾರೆ. ಜೂಮ್ ಜೋ ಚಿತ್ರದಲ್ಲಿ ಶಾರುಖ್ ಖಾನ್ ಬಹಳ ಸಮಯದ ನಂತರ ಅತ್ಯುತ್ತಮ ಮತ್ತು ಪರಿಪೂರ್ಣ ನೃತ್ಯವನ್ನು ತೋರಿಸಿದ್ದಾರೆ.
ಬೇಷರಮ್ ರಂಗ್ ಹಾಡಿನಂತೆ ಇದರಲ್ಲಿ ಕೂಡ ಬಾಲಿವುಡ್ ಕ್ವೀನ್ ದೀಪಿಕಾ ಪಡುಕೋಣೆ ಹಾಟ್ ಲುಕ್ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಹಾಡಿನಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಅವರ ಎಲೆಕ್ಟ್ರಿಫೈಯಿಂಗ್ ಕೆಮಿಸ್ಟ್ರಿ ಎಲ್ಲರನ್ನು ನೃತ್ಯ ಮಾಡುವಂತೆ ಮಾಡುತ್ತದೆ.
ಅತ್ಯುತ್ತಮ ನೃತ್ಯ ನಿರ್ದೇಶನ, ಅತ್ಯಾಕರ್ಷಕ ದೃಶ್ಯಗಳು, ಮನಮೋಹಕ ಛಾಯಾಗ್ರಹಣ, ಅರ್ಜಿತ್ ಸಿಂಗ್ ಅವರ ಧ್ವನಿ ಮತ್ತು ಹಾಡಿನಲ್ಲಿನ ಅದ್ಭುತ ನೃತ್ಯ ಸಂಯೋಜನೆಯು ಹಾಡನ್ನು ಹೆಚ್ಚು ಸೆಳೆಯುವಂತೆ ಮಾಡುವಲ್ಲಿ ಸಫಲವಾಗಿದೆ
ಪಠಾಣ್ ಚಿತ್ರದ ಜೂಮ್ ಜೋ ಎರಡನೇ ಹಾಡಿನಲ್ಲಿ ಅರ್ಜಿತ್ ಸಿಂಗ್ ಜೊತೆಗೆ ವಿಶಾಲ್ ದಾದ್ಲಾನಿ, ಶೇಖರ್ ರವಿಜಿಯಾನಿ ಮತ್ತು ಸುಕೃತಿ ಅವರ ಧ್ವನಿ ಸಹ ಇದೆ. ಹೊಸದಾಗಿ ಬಿಡುಗಡೆಯಾಗಿರುವ ಈ ಹಾಡನ್ನು ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ವೀಕ್ಷಿಸಬಹುದು. https://www.youtube.com/watch?v=YxWlaYCA8MU
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಆಕ್ಷನ್-ಥ್ರಿಲ್ಲರ್ ಚಿತ್ರ ಪಠಾಣ್ ಜನವರಿ 25, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.