ಬಾಲಿವುಡ್ ನಟಿ, ಮಾಡೆಲ್, ಡಾನ್ಸರ್ ಮಲೈಕಾ ಅರೋರಾ ಮತ್ತು ನಟ ಅರ್ಜುನ್ ಕಪೂರ್ ಪ್ರೀತಿ ವಿಚಾರ ಗುಟ್ಟಾಗಿ ಉಳಿದಿಲ್ಲ. ಇಬ್ಬರೂ ಪ್ರೀತಿ ವಿಷಯವನ್ನು ಬಹಿರಂಗವಾಗಿಲ್ಲ ಹೇಳಿಕೊಳ್ಳದಿದ್ದರೂ ರೊಮ್ಯಾಂಟಿಕ್ ಫೋಟೋ, ಇನ್ಸ್ಟಾಗ್ರಾಮ್ ಸ್ಟೇಟಸ್‌ಗಳ ಮೂಲಕ ಆಗಾಗ ಪ್ರೀತಿ ವ್ಯಕ್ತಪಡಿಸುತ್ತಿರುತ್ತಾರೆ.
ಇತ್ತೀಚಿಗಷ್ಟೆ ಮಲೈಕಾ ಅರೋರಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 49ನೇ ವಸಂತಕ್ಕೆ ಕಾಲಿಟ್ಟ ನಟಿ ಮಲೈಕಾ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ. ಮಲೈಕಾ ಹುಟ್ಟುಹಬ್ಬದ ಪಾರ್ಟಿಗೆ ಅನೇಕ ಸ್ಟಾರ್ಸ್ ಹಾಜರಿದ್ದರು. ಸಾಮಾಜಿಕ ಜಾಲತಾಣದಲ್ಲಿ ಮಲೈಕಾ ಬರ್ತಡೇ ಫೋಟೋಗಳು ವೈರಲ್ ಆಗಿವೆ.
ಅಂದಹಾಗೆ ಮಲೈಕಾ ಹುಟ್ಟುಹಬ್ಬಕ್ಕೆ ಪ್ರಿಯತಮ ಅರ್ಜುನ್ ಕಪೂರ್ ಪ್ರೀತಿಯ ವಿಶ್ ತಿಳಿಸಿದ್ದಾರೆ. ರೊಮ್ಯಾಂಟಿಕ್ ಪೋಟೋ ಶೇರ್ ಮಾಡಿ ನನ್ನವಳು ಎಂದು ಬರೆದುಕೊಂಡಿದ್ದಾರೆ.
ಮಧ್ಯರಾತ್ರಿ ಮಲೈಕಾ ಜೊತೆಗಿನ ಫೋಟೋ ಶೇರ್ ಮಾಡಿರುವ ಅರ್ಜುನ್ ಕುಪೂರ್ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಇಬ್ಬರೂ ಮಿರರ್ ಮುಂದೆ ತಿಂದಿದ್ದಾರೆ. ಮಲೈಕಾ ಹಿಂದೆ ನಿಂತಿರುವ ಅರ್ಜುನ್ ಪ್ರೇಯಸಿಯನ್ನೇ ದಿಟ್ಟಿಸಿ ನೋಡುತ್ತಿದ್ದಾರೆ.
ಫೋಟೋ ಶೇರ್ ಮಾಡಿ ಅರ್ಜುನ್, ಹುಟ್ಟುಹಬ್ಬದ ಶುಭಾಶಯಗಳು ಬೇಬಿ, ಯಾವಾಗಲೂ ಖುಷಿಯಾಗಿರು. ನೀನು ನನ್ನವಳು' ಎಂದು ಬರೆದುಕೊಂಡಿದ್ದಾರೆ. ಅರ್ಜುನ್ ಕಪೂರ್ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡಿ ಸೆಕ್ಸಿ, ಬೆಂಕಿ ಎನ್ನುತ್ತಿದ್ದಾರೆ.
ಅರ್ಜುನ್ ಕಪೂರ್ ಫೋಟೋಗೆ ಮಲೈಕೀ ಕೂಡ ಪ್ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ನನ್ನವಳು ಎಂದ ಅರ್ಜುನ್‌ಗೆ ಮಲೈಕಾ, ನಾನು ನಿನ್ನವಳು ಮಾತ್ರ' ಎಂದು ಹೇಳಿದ್ದಾರೆ. ಇಬ್ಬರ ಪ್ರೀತಿಯ ಮಾತುಕತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Image: Malaika Arora, Arjun KapoorInstagram
ಮಲೈಕಾ ಅರೋರಾ ಮತ್ತು ಅರ್ಜುನ್ ಆಗಾಗ ಒಟ್ಟಿಗೆ ಕ್ಯಾಮರಾ ಕಣ್ಣಿಗೆ ಸೆರೆಯಾಗುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ರ್ಯಾಂಪ್ ವಾಕ್, ಕಾರ್ಯಕ್ರಮ ಎಲ್ಲಾ ಕಡೆ ಒಟ್ಟಿಗೆ ಕಾಣಿಸಿಕೊಳ್ಳುವ ಈ ಜೋಡಿ ಮದುವೆ ವಿಚಾರವನ್ನು ಇನ್ನು ಬಹಿರಂಗ ಪಡಿಸಿಲ್ಲ. ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಯಾವಾಗ ಎನ್ನುವುದನ್ನು ಅವೇರ ಬಹಿರಂಗ ಪಡಿಸಬೇಕಿದೆ.