ಗರ್ಭಿಣಿ ನೀನಾ ಗುಪ್ತಾರನ್ನು ಮದುವೆಯಾಗಲು ಬಯಸಿದ್ದರು ಸತೀಶ್ ಕೌಶಿಕ್!

First Published | Mar 9, 2023, 4:02 PM IST

66 ನೇ ವಯಸ್ಸಿನ ನಟ ಮತ್ತು ನಿರ್ದೇಶಕ ಸತೀಶ್ ಕೌಶಿಕ್ (Satish Kaushik) ಅವರು ಹೃದಯಾಘಾತದಿಂದ ನಿಧನರಾದರು. ಈ ನಡುವೆ ಅವರಿಗೆ ಸಂಬಂಧಿಸಿದ ಹಳೆಯ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೀನಾ ಗುಪ್ತಾ (nina Gupta )ಮದುವೆಯಾಗದೆ ಗರ್ಭಿಣಿಯಾದಾಗ, ಸತೀಶ್ ಅವರು ನಟಿಗೆ  ಮದುವೆಯ ಪ್ರಸ್ತಾಪವನ್ನು ಮಾಡಿದ್ದರಂತೆ. ಇದರ ಪೂರ್ತಿ ವಿವರ ಇಲ್ಲಿದೆ.

ಸತೀಶ್ ಕೌಶಿಕ್ ಚಿತ್ರರಂಗದಲ್ಲಿ ನಿರ್ದೇಶಕರ ಜೊತೆಗೆ ನಟರಾಗಿ ಕೂಡ  ಹೆಸರುವಾಸಿ. ಅವರು ಬಹುತೇಕ ಚಿತ್ರಗಳಲ್ಲಿ ಪೋಷಕ ನಟರಾಗಿ ಕೆಲಸ ಮಾಡಿದ್ದರೂ  ಅವರ ಈ ಪಾತ್ರಗಳು ಬಹಳ ಪ್ರಸಿದ್ಧವಾದವು. ಅವರ ಕಾಮಿಕ್ ಟೈಮಿಂಗ್ ಕೂಡ ಅದ್ಭುತವಾಗಿತ್ತು.

ವೃತ್ತಿಪರ ಜೀವನದ ಜೊತೆಗೆ ಸತೀಶ್ ಕೌಶಿಕ್ ತಮ್ಮ ವೈಯಕ್ತಿಕ ಜೀವನವೂ ಸಾಕಷ್ಷು ಚರ್ಚೆಯಾಗಿದೆ. ಅವರ ನಿಧನದ ನಂತರ ಮತ್ತೆ ಅವರಿಗೆ ಸಂಬಂಧಿಸಿದ ಹಳೆಯ ಕಥೆಯೊಂದು ವೈರಲ್ ಆಗಿದೆ. ನೀನಾ ಗುಪ್ತಾ ಮದುವೆಯಾಗದೆ ಗರ್ಭಿಣಿಯಾದಾಗ ಸತೀಶ್ ಅವರು ನಟಿಯನ್ನು ಮದುವೆಯಾಗಲು ಮುಂದಾಗಿದ್ದರು.

Tap to resize

ಸತೀಶ್ ಕೌಶಿಕ್ ಅವರು ನೀನಾ ಗುಪ್ತಾ ಅವರೊಂದಿಗೆ ಆಳವಾದ ಸ್ನೇಹ ಹೊಂದಿದ್ದರು. ನೀನಾ ಅವರ ಪುಸ್ತಕ ಸಚ್ ಕಹೂನ್ ತೋ ಕೆಲವು ವರ್ಷಗಳ ಹಿಂದೆ ಪ್ರಕಟವಾಯಿತು. ಈ ಪುಸ್ತಕದಲ್ಲಿ ನೀನಾ ಸತೀಶ್ ಅವರಿಗೆ ಸಂಬಂಧಿಸಿದ ಕೆಲವು ಬಹಿರಂಗಪಡಿಸಿದ್ದಾರೆ.

ಪುಸ್ತಕದಲ್ಲಿ, ನೀನಾ ಗುಪ್ತಾ ಕೌಶಿಕ್‌ನೊಂದಿಗಿನ ತನ್ನ ಸುದೀರ್ಘ ಸ್ನೇಹದ ಬಗ್ಗೆ ಮಾತನಾಡಿದ್ದಾರೆ ಮತ್ತು ಅವರು ಕ್ರಿಕೆಟಿಗ ವಿವಿ ರಿಚರ್ಡ್ಸ್‌ನೊಂದಿಗೆ ಗರ್ಭಿಣಿಯಾದಾಗ, ಕೌಶಿಕ್ ಅವರು ಮದುವೆಯ ಪ್ರಸ್ತಾಪವನ್ನು ನೀಡಿದರು ಮತ್ತು ಅವರ ಮಗುವನ್ನು ತನ್ನ ಸ್ವಂತ ಮಗುವಿನಂತೆ ಬೆಳೆಸುವುದಾಗಿ ಹೇಳಿದರು. ಆದರೆ, ನೀನಾ ಅವರ ಪ್ರಸ್ತಾಪವನ್ನು ತಿರಸ್ಕರಿಸಿದರು ಎಂದು ನೀನಾ ಬಹಿರಂಗ ಪಡಿಸಿದ್ದಾರೆ.

'ಚಿಂತಿಸಬೇಡ, ಮಗು ಕಪ್ಪು ಮೈಬಣ್ಣದಿಂದ ಜನಿಸಿದರೆ, ಅದು ನನ್ನದು ಎಂದು ಹೇಳಬಹುದು ಮತ್ತು ನಾವು ಮದುವೆಯಾಗೋಣ ಯಾರೂ ಏನನ್ನೂ ಅನುಮಾನಿಸುವುದಿಲ್ಲ' ಎಂದು ಕೌಶಿಕ್‌ ಅವರು ನೀನಾ ಗುಪ್ತಾ ಅವರಿಗೆ ಹೇಳಿದ್ದರಂತೆ.

Neena Gupta

ಸ್ವಲ್ಪ ಸಮಯದ ನಂತರ, ಸಂದರ್ಶನವೊಂದರಲ್ಲಿ, ಕೌಶಿಕ್ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಾ, ತಾನು ಮತ್ತು ನೀನಾ 1975 ರಿಂದ ಸ್ನೇಹಿತರಾಗಿದ್ದೇವೆ ಮತ್ತು ಆಕೆಯ ಗರ್ಭಧಾರಣೆಯ ಬಗ್ಗೆ ಕೆಲವೇ ಜನರಿಗೆ ತಿಳಿದಿತ್ತು. ಆಕೆ ಒಂಟಿಯಾಗಿರಬಾರದು ಎಂಬ ಕಾರಣಕ್ಕೆ ನನ್ನ ನೆರವಿನ ಹಸ್ತ ಚಾಚಿದ್ದೇನೆ ಎಂದರು.

Neena Gupta

ನೀನಾ  ಅವರ ಒಂಟಿ ಭಾವನೆ ಬಗ್ಗೆ ನಾನು ಚಿಂತಿತನಾಗಿದ್ದೆ. ಸ್ನೇಹಿತರು ಇರುವುದು ಅದಕ್ಕಾಗಿಯೆ, ಅಲ್ಲವೇ? ಎಂದು ಆ ಸಮಯದಲ್ಲಿ ಸತೀಶ್ ಕೌಶಿಕ್ ಅವರು ಬಾಂಬೆ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು

Satish Kaushik

ನೀನಾ ಗುಪ್ತಾ ಅವರನ್ನು ಮದುವೆಯಾಗುವ ಅವರ ಪ್ರಸ್ತಾವು ಹಾಸ್ಯ, ಕಾಳಜಿ, ಗೌರವ ಮತ್ತು ಬೆಂಬಲದ ಮಿಶ್ರಣವಾಗಿತ್ತು. ನಾನು ಇದ್ದೇನೆ, ನೀನು ಯಾಕೆ ಯೋಚನೆ ಮಾಡುತ್ತೀಯಾ ಎಂದು ಅವರು ಪ್ರಪೋಸ್‌ ಮಾಡಿದ್ದರು ಮತ್ತು ಇದಾದ ನಂತರ ತಮ್ಮ ಸಂಬಂಧ ಗಟ್ಟಿಯಾಗಿದೆ ಎಂದು ಕೌಶಿಕ್ ಹೇಳಿದ್ದರು

ನಿರ್ದೇಶಕ ಕುಂದನ್ ಷಾ ಅವರ 1983 ರ ಹಿಟ್ ಚಲನಚಿತ್ರ ಜಾನೆ ಭಿ ದೋ ಯಾರೋದಲ್ಲಿ ಸತೀಶ್ ಕೌಶಿಕ್ ನಾಸಿರುದ್ದೀನ್ ಶಾ, ರವಿ ಬಸ್ವಾನಿ ಮತ್ತು ನೀನಾ ಗುಪ್ತಾ ಅವರೊಂದಿಗೆ ಕೆಲಸ ಮಾಡಿದ್ದಾರೆಈ ಚಿತ್ರದಿಂದ ಅವರ ಮತ್ತು ನೀನಾ ನಡುವೆ ಉತ್ತಮ ಗೆಳೆತನ ಮೂಡಿತ್ತು. ಸತೀಶ್ ಅವರು 1983 ರ ಮಾಸೂಮ್ ಚಿತ್ರದಲ್ಲಿ ಪಾದಾರ್ಪಣೆ ಮಾಡಿದರು.

Latest Videos

click me!