ಜಾನ್ ಅಬ್ರಹಾಂ ಹೋಳಿ ಆಚರಣೆಯಿಂದ ದೂರವಂತೆ. 'ನಾನು ಹೋಳಿ ಆಚರಿಸುವುದಿಲ್ಲ, ಜನರು ಹೋಳಿಯನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಮತ್ತು ತುಂಬಾ ವಿಕೃತರಾಗಿದ್ದಾರೆ, ಆದ್ದರಿಂದ ನಾನು ಅದನ್ನು ಆಚರಿಸುವ ವಿಧಾನವನ್ನು ನಿಜವಾಗಿಯೂ ಗೌರವಿಸುವುದಿಲ್ಲ' ಎಂದು ಹೇಳಿದರು. 'ನೀವು ಮರಗಳನ್ನು ಕಡಿಯುತ್ತೀರಿ, ನೀವು ಪ್ರಕೃತಿ ನಾಶ ಮಾಡುತ್ತಿದ್ದೀರಿ, ನೀವು ಧರ್ಮದ ಹೆಸರಿನಲ್ಲಿ ಎಲ್ಲವನ್ನೂ ನಾಶಪಡಿಸುತ್ತಿದ್ದೀರಿ. ಆದ್ದರಿಂದ ನಾನು ಹೋಳಿ ಆಡುವುದನ್ನು ಆನಂದಿಸುವುದಿಲ್ಲ' ಎಂದು ಜಾನ್ ಮತ್ತಷ್ಟು ಹೇಳಿದರು.