ವಾಂತಿ ಆದ್ರೆ ಹುಷಾರು; ವಿದೇಶ ಪ್ರಯಾಣ ಮಾಡುತ್ತಿರುವ ಉಪಾಸನಾ ರಾಮ್‌ ಚರಣ್‌ಗೆ ನೆಟ್ಟಿಗರ ಉಪದೇಶ

Published : Mar 09, 2023, 02:16 PM IST

ಬೇಬಿ ಮೂನ್ ಎಂಜಾಯ್ ಮಾಡುತ್ತಿರುವ ಉಪಾಸನಾ- ರಾಮ್ ಚರಣ್. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್....

PREV
17
ವಾಂತಿ ಆದ್ರೆ ಹುಷಾರು; ವಿದೇಶ ಪ್ರಯಾಣ ಮಾಡುತ್ತಿರುವ ಉಪಾಸನಾ ರಾಮ್‌ ಚರಣ್‌ಗೆ ನೆಟ್ಟಿಗರ ಉಪದೇಶ

RRR ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಪಡೆದ ನಂತರ ತೆಲುಗು ನಟ ರಾಮ್ ಚರಣ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ತಂದೆಯಾಗುತ್ತಿರುವ ಖುಷಿಯಲ್ಲಿ ಈಗ ಬೇಬಿ ಮೂನ್ ಎಂಜಾಯ್ ಮಾಡುತ್ತಿದ್ದಾರೆ.

27

ರಾಮ್‌ ಚರಣ್ ಮತ್ತು ಉಪಾಸನಾ ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟು 11 ವರ್ಷ ಕಳೆದಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಹಂಚಿಕೊಂಡಿದ್ದರು.

37

'ಎಷ್ಟೇ ಬ್ಯುಸಿ ಇದ್ದರೂ  ಮಿಸ್ಟರ್‌  ಚರಣ್ ನನಗೆ ಸಮಯ ಮಾಡಿಕೊಂಡಿದ್ದಾರೆ.ಈ ವಿಡಿಯೋ ಮೂಲಕ ನಮ್ಮ ಬೇಬಿ ಮೂನ್ ಹೇಗಿತ್ತು ನೋಡಿ' ಎಂದು ಉಪಾಸನಾ ಬರೆದುಕೊಂಡಿದ್ದಾರೆ.

47

ಬೇಬಿ ಮೂನ್‌ನಲ್ಲಿ ಉಪಾಸನಾ ಮತ್ತು ರಾಮ್ ಚರಣ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಡಿಫರೆಂಟ್ ಫುಡ್‌ಗಳ ರುಚಿ ನೋಡುತ್ತಿದ್ದಾರೆ.  ಬೇಬಿ ಮೂನ್ ಚೆನ್ನಾಗಿರಲಿ ಎಂದು ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ. 

57

ಪ್ರೆಗ್ನೆನ್ಸಿ ವಿಚಾರವನ್ನು ಅನೌನ್ಸ್ ಮಾಡಿದ ಆರಂಭದಿಂದಲೂ ಉಪಾಸನಾ ಪ್ರಯಾಣ ಮಾಡುತ್ತಿರುವುದಕ್ಕೆ ನೆಟ್ಟಿಗರಲ್ಲಿ ಆತಂಕ ಮೂಡಿ. ವಿಮಾನ ಪ್ರಯಾಣದಿಂದ ವಾಂತಿ ಆಗಬಹುದು ಹುಷಾರು ಎಂದಿದ್ದಾರೆ. 

67

ಕೆಲವು ದಿನಗಳ ಹಿಂದೆ ಉಪಾಸನಾ ಮೊದಲ ಮಗುವಿಗೆ ವಿದೇಶದಲ್ಲಿ ಜನ್ಮ ನೀಡುತ್ತಾರೆ ಎಂದು ಹೇಳಲಾಗಿತ್ತು. ಭಾರತದಲ್ಲಿ ನನ್ನ ಮಗುವಿನ ಜನನ ಎನ್ನುವ ಮೂಲಕ ಕ್ಲಾರಿಟಿ ಕೊಟ್ಟಿದ್ದಾರೆ.

77

ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಉಪಾಸನಾ ಬಸರಿ ಬಯಕೆ, ಬ್ಯಸಿನೆಸ್‌ ಮತ್ತು ಫ್ಯಾಮಿಲಿ ಬಗ್ಗೆ ಅಪ್ಡೇಟ್ ಹಂಚಿಕೊಳ್ಳುತ್ತಾರೆ. ಹೀಗಾಗಿ ರಾಮ್‌ ಚರಣ್‌ ರೀತಿ ಜನರಿಗೆ ಹತ್ತಿರವಾಗಿದ್ದಾರೆ. 

Read more Photos on
click me!

Recommended Stories