Sara Ali Khan Style: ಬ್ಲ್ಯಾಕ್‌ ಲೆಹೆಂಗಾದಲ್ಲಿ ಮಿಂಚಿದ ಸಾರಾ !

First Published | Dec 22, 2021, 5:23 PM IST

ಬಾಲಿವುಡ್ (Bollywood) ನಟಿ ಸಾರಾ ಆಲಿ ಖಾನ್‌ (Sara Ali Khan) ಈ ದಿನಗಳಲ್ಲಿ  ತಮ್ಮ ಮುಂದಿನ ಸಿನಿಮಾ ಅತ್ರಾಂಗಿ ರೇ (Atrangi Re) ಪ್ರಚಾರದಲ್ಲಿ ಬ್ಯುಸಿ ಯಾಗಿದ್ದಾರೆ.  ಸಾರಾ  ತಮ್ಮ ಸಿನಿಮಾದ  ಚಕಾ ಚಕ್ ಹಾಡಿಗೆ ಡ್ಯಾನ್ಸ್‌ ಮಾಡುತ್ತಾ  ಪ್ಯಾನ್ಸ್‌  ಹೃದಯ ಗೆಲ್ಲುತ್ತಿದ್ದಾರೆ. ಸಾರಾ ತಮ್ಮ ಸಿನಿಮಾ ಅತ್ರಾಂಗಿ ರೇ ಪ್ರಚಾರಗಳಿಗಾಗಿ ಮುಖ್ಯವಾಗಿ ಎಥ್ನಿಕ್ ವೇರ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಅವರು ಧರಿಸಿದ ಬ್ಲ್ಯಾಕ್‌ ಲೆಹೆಂಗಾ ಲುಕ್‌ ಸಖತ್‌ ವೈರಲ್‌ ಆಗಿದೆ. 

ಕಳೆದ ದಿನದಲ್ಲಿ ಸಾರಾ ಅಲಿ ಖಾನ್ ಮತ್ತು ಅಕ್ಷಯ್ ಕುಮಾರ್  ಸ್ಟುಡಿಯೊದ ಹೊರಗೆ ತಮ್ಮ ಅತ್ರಾಂಗಿ ರೇ ಚಿತ್ರದ ಪ್ರಚಾರದಲ್ಲಿ ಕಾಣಿಸಿಕೊಂಡರು. ಕಪಿಲ್ ಶರ್ಮಾ ಶೋನ ಸೆಟ್‌ಗೆ ಅತ್ರಾಂಗಿ ರೇ ಸಿನಿಮಾ ತಂಡ ಪ್ರಚಾರಕ್ಕಾಗಿ ಹಾಜರಾಗಿತ್ತು. 

ಅಕ್ಷಯ್‌ ಕುಮಾರ್‌ ಹಾಗೂ ಸಾರಾ ಅಲಿ ಖಾನ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಅಕ್ಷಯ್ ಕುಮಾರ್ ಕಪ್ಪು ಬಣ್ಣದ ಕೋ-ಆರ್ಡ್ ಸೆಟ್‌ನೊಂದಿಗೆ ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Tap to resize

ಈ ಸಮಯದಲ್ಲಿ ಸಾರಾ ಕಪ್ಪು ಲೆಹೆಂಗಾದಲ್ಲಿ ಕಾಣಿಸಿಕೊಂಡಿದ್ದರು. ಮನೀಷ್ ಮಲ್ಹೋತ್ರಾ ಡಿಸೈನ್‌ ಮಾಡಿದ ಬ್ಲ್ಯಾಕ್‌ ಮತ್ತು ಗೋಲ್ಡ್‌ ಕಲರ್‌ನ ಸ್ಲೀವ್‌ಲೆಸ್‌ ಬ್ಲೌಸ್‌  ಲೆಹೆಂಗಾ ಸ್ಕರ್ಟ್‌ನಲ್ಲಿ ನಟಿ ಅದ್ಭುತವಾಗಿ ಕಾಣಿಸುತ್ತಿದ್ದರು. 

ಲೆಹೆಂಗಾಗೆ ಸಾರಾ ದುಪಟ್ಟಾವನ್ನು  ಧರಿಸಿರಲಿಲ್ಲ ಮತ್ತು ಕೇವಲ ಕಿವಿಯೋಲೆಗಳನ್ನು ಮಾತ್ರ ಧರಿಸಿ ಮಿನಿಮಮ್‌ ಮೇಕಪ್‌ನಲ್ಲಿ ಸಾರಾ ಕಾಣಿಸಿಕೊಂಡರು. ಹೊರಬಿದ್ದ ಫೋಟೋಗಳಲ್ಲಿ, ಸಾರಾ ತನ್ನ ಲೆಹೆಂಗಾವನ್ನು ಹಿಡಿದುಕೊಂಡು ತಿರುಗಾಡುವ ಮೂಲಕ ಕ್ಯಾಮೆರಾಮನ್‌ಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು.

ಸಾರಾ ಅವರ ಚಿತ್ರ ಅತ್ರಾಂಗಿ ರೇ ಡಿಸೆಂಬರ್ 24 ರಂದು OTT ನಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ಸೌತ್ ಸೂಪರ್ ಸ್ಟಾರ್ ಧನುಷ್ ಕೂಡ ಕಾಣಿಸಿಕೊಳ್ಳಲಿದ್ದಾರೆ.ಇದೇ ಮೊದಲ ಬಾರಿಗೆ ಸಾರಾ ಅಕ್ಷಯ್‌ ಕುಮಾರ್‌ ಮತ್ತು ಧನುಷ್ ಜೊತೆ ಸ್ಕ್ರೀನ್‌ ಶೇರ್‌ ಮಾಡಿಕೊಳ್ಳುತ್ತಿದ್ದಾರೆ. 

ತನು ವೆಡ್ಸ್ ಮನು, ರಾಂಜನಾ ಮತ್ತು ಇನ್ನೂ ಅನೇಕ ಹಿಟ್ ಚಲನಚಿತ್ರಗಳಿಗೆ ಹೆಸರುವಾಸಿಯಾದ ಆನಂದ್ ಎಲ್ ರೈ ಅವರು ಅತ್ರಾಂಗಿ ರೇ ಅನ್ನು ನಿರ್ದೇಶಿಸುತ್ತಿದ್ದಾರೆ. ಎ.ಆರ್‌.ರೆಹಮಾನ್‌ ಅವರು ಮ್ಯೂಸಿಕ್‌ ನೀಡಿದ್ದಾರೆ. ಈಗಾಗಲೇ ಈ ಸಿನಿಮಾದ ಚಕಾ ಚಕ್ ಹಾಡು ಹಾಗೂ ಸಾರಾರ ಡ್ಯಾನ್ಸ್‌ ಸಖತ್‌ ವೈರಲ್‌ ಆಗಿದೆ. 

Latest Videos

click me!