ದೀಪಾವಳಿ 2021: ಈ ಕಾರಣಕ್ಕೆ ಈ ಬಾರಿ ಬಾಲಿವುಡ್‌ನಲ್ಲಿ ಗ್ರ್ಯಾಂಡ್‌ ಸೆಲೆಬ್ರೆಷನ್‌ ಇಲ್ಲ

First Published Nov 2, 2021, 7:37 PM IST

ಬಾಲಿವುಡ್‌ನ (Bollywood)  ದೀಪಾವಳಿ (Diwali) ಪಾರ್ಟಿಗಳು (Party) ತುಂಬಾ ಫೇಮಸ್‌. ಪ್ರತಿ ವರ್ಷ ಸೆಲೆಬ್ರಿಟಿಗಳು ತಮ್ಮ ಮನೆಗಳಲ್ಲಿ ದೀಪಾವಳಿ ಪಾರ್ಟಿಯನ್ನು ಆಯೋಜಿಸುತ್ತಾರೆ. ಆದಾಗ್ಯೂ, ಕಳೆದ ಎರಡು ವರ್ಷಗಳಿಂದ, ಕೊರೋನಾ (Corona) ಸಾಂಕ್ರಾಮಿಕ ರೋಗದಿಂದ, ದೀಪಾವಳಿಯ ಆಚರಣೆ ಜೋರಾಗಿಲ್ಲ.ಕೋವಿಡ್ (Covid) ಸಮಯದಲ್ಲಿ, ಯಾವುದೇ ಸೆಲೆಬ್ರಿಟಿಗಳು ದೊಡ್ಡ ಪ್ರಮಾಣದಲ್ಲಿ ದೀಪಾವಳಿ ಪಾರ್ಟಿ ಮಾಡಲಿಲ್ಲ. ಈ ನಡುವೆ ಇದೀಗ ಬಾಲಿವುಡ್‌ನಲ್ಲಿ ಈ ಬಾರಿಯೂ ದೀಪಾವಳಿ ಪಾರ್ಟಿ ಡಲ್ ಆಗಲಿದೆ, ಎಂಬ ಸುದ್ದಿ ಬರುತ್ತಿದೆ. ಆ ಕಾರಣಗಳೇನು ಗೊತ್ತಾ?

ಮುಂಬೈನಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ದೀಪಾವಳಿ ಪಾರ್ಟಿ ಬಗ್ಗೆ ಯಾವುದೇ ಸುದ್ದಿ ಇಲ್ಲ. ಮಹಾರಾಷ್ಟ್ರದಲ್ಲಿ ಅಕ್ಟೋಬರ್‌ನಲ್ಲಿ ಚಿತ್ರಮಂದಿರಗಳು ತೆರೆದಿರುತ್ತವೆ. ಹೀಗಿರುವಾಗ ಹಿರಿತೆರೆಯಲ್ಲಿ ತಮ್ಮ ಚಿತ್ರಗಳಿಗೆ ಹೇಗೆ ರೆಸ್ಪಾನ್ಸ್ ಸಿಗುತ್ತೋ ಎಂಬ ಚಿಂತೆ ಸದ್ಯಕ್ಕೆ ತಾರೆಯರೆಲ್ಲರನ್ನೂ ಕಾಡುತ್ತಿದೆ. ಇದರೊಂದಿಗೆ ಸೆಲೆಬ್ರಿಟಿಗಳೂ ಕೊರೊನಾ ಬಗ್ಗೆ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ.
 

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ 28 ದಿನಗಳ ನಂತರ ಇತ್ತೀಚೆಗೆ ಜೈಲಿನಿಂದ ಹೊರಬಂದಿದ್ದಾರೆ. ಹೀಗಿರುವಾಗ ಬಾಲಿವುಡ್‌ನಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಲೆಬ್ರಿಟಿಗಳು ಇನ್ನೂ ಟೆನ್ಷನ್‌ನಲ್ಲಿದ್ದಾರೆ. ಶಾರುಖ್ ಅವರ ಮಗನ ಹೆಸರು ಕಾಣಿಸಿಕೊಂಡ ನಂತರ, ಇನ್ನೂ ಅನೇಕ ಸೆಲೆಬ್ರಿಟಿಗಳು ಮತ್ತೊಮ್ಮೆ ಸ್ಕ್ಯಾನರ್ ಅಡಿಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸೆಲೆಬ್ರಿಟಿಗಳು ಈ ಬಾರಿ ಯಾವುದೇ ದೊಡ್ಡ ಪಾರ್ಟಿಯನ್ನು ಆವಾಯ್ಡ್‌ ಮಾಡುತ್ತಿದ್ದಾರೆ

ಆರ್ಯನ್ ಖಾನ್ ಜೊತೆಯ ಚಂಕಿ ಪಾಂಡೆ ಮಗಳು ಅನನ್ಯಾ ಪಾಂಡೆಯ ಡ್ರಗ್ಸ್‌ ಪೆಡ್ಲರ್ ಲಿಂಕ್ ಸಹ ಬಹಿರಂಗಗೊಂಡಿದೆ. NCB ಹಲವು ದಿನಗಳ ಕಾಲ ಅನನ್ಯಾಳನ್ನು ನಿರಂತರವಾಗಿ ವಿಚಾರಣೆ ನಡೆಸಿತ್ತು. ಇಂತಹ ಪರಿಸ್ಥಿತಿಯಲ್ಲಿ ಚಂಕಿ ಪಾಂಡೆ ಕುಟುಂಬವೂ ದೀಪಾವಳಿಯನ್ನು ಸಂಭ್ರಮಿಸುವ ಮೂಡಲ್ಲಿ ಇಲ್ಲ.

ಬಾಲಿವುಡ್‌ನಲ್ಲಿ, ಅನಿಲ್ ಕಪೂರ್ ಮತ್ತು ಅವರ ಪತ್ನಿ ಸುನೀತಾ ಕಪೂರ್ ಪ್ರತಿ ವರ್ಷ ಗ್ರ್ಯಾಂಡ್ ಪಾರ್ಟಿಗಳನ್ನು ಆಯೋಜಿಸುತ್ತಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಮತ್ತು ಅನನ್ಯಾ ಹೆಸರುಗಳು ಹೊರಬಿದ್ದ ನಂತರ, ಈ ಪ್ರಕರಣದಲ್ಲಿ ಅನಿಲ್ ಕಪೂರ್ ಅವರ ಸೋದರ  ಸಂಜಯ್ ಕಪೂರ್ ಅವರ ಪುತ್ರಿ ಶನಯಾ ಅವರನ್ನೂ ಸಹ ವಿಚಾರಣೆಗೆ ಒಳಪಡಿಸಬಹುದು ಎಂದು ಹೇಳಲಾಗುತ್ತಿದೆ. ಈ ವಿಷಯ ಅನಿಲ್ ಕಪೂರ್ ಕುಟುಂಬವನ್ನು ಕರಿ ನೆರಳಿನಲ್ಲಿ ಇರಿಸಿದೆ.

ಪ್ರತಿ ಬಾರಿಬಚ್ಚನ್ ಕುಟುಂಬ ಕೂಡ ದೀಪಾವಳಿಯಂದು ಪಾರ್ಟಿಯನ್ನು ಆಯೋಜಿಸುತ್ತದೆ, ಆದರೆ ಎರಡು ವರ್ಷಗಳಿಂದ ಕರೋನಾದಿಂದಾಗಿ ಇಲ್ಲಿಯೂ ಯಾವುದೇ ದೀಪಾವಳಿ ಪಾರ್ಟಿಯನ್ನು ಮಾಡುತ್ತಿಲ್ಲ. ಬಚ್ಚನ್ ಕುಟುಂಬದಲ್ಲಿ ಜಯಾ ಬಚ್ಚನ್‌ ಹೊರತುಪಡಿಸಿ ಎಲ್ಲಾ ಕೊರೊನಾಗಳು ಸೋಂಕಿಗೆ ಒಳಗಾಗಿದ್ದರು  ಇಂತಹ ಪರಿಸ್ಥಿತಿಯಲ್ಲಿ ಈ ಬಾರಿಯೂ ಬಚ್ಚನ್ ಕುಟುಂಬ ಸಂಪೂರ್ಣ ಮುಂಜಾಗ್ರತೆ ವಹಿಸುತ್ತಿದೆ.

ಶಿಲ್ಪಾ ಶೆಟ್ಟಿ ಕೂಡ ದೀಪಾವಳಿ ಪಾರ್ಟಿಯನ್ನು ಆಯೋಜಿಸುತ್ತಿದ್ದರು, ಆದರೆ ಈ ಬಾರಿ ಕೊರೋನಾ ಜೊತೆಗೆ ಅವರ ಪತಿ ರಾಜ್ ಕುಂದ್ರಾ ಅವರ  ಕೇಸ್‌ ಕಾರಣದಿಂದ ಅವರೂ ಕೂಡ ಪಾವಳಿ ಪಾರ್ಟಿ ಮಾಡುವ ಯಾವುದೇ ಭರವಸೆ ಇಲ್ಲ. ಪೋರ್ನ್ ಕಂಟೆಂಟ್ ಪ್ರಕರಣದಲ್ಲಿ ರಾಜ್ ಕುಂದ್ರಾ ಕೆಲವು ದಿನಗಳ ಹಿಂದೆ ಜೈಲಿನಿಂದ ಬೇಲ್‌ ಮೇಲೆ  ಹೊರಬಂದಿದ್ದಾರೆ.   ಇದಾದ ನಂತರ ನಟಿ ಶೆರ್ಲಿನ್ ಚೋಪ್ರಾ ಪತ್ರಿಕಾಗೋಷ್ಠಿ ನಡೆಸಿ ರಾಜ್‌ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ.

ಪ್ರತಿ ವರ್ಷ ಏಕ್ತಾ ಕಪೂರ್ ಬಾಲಿವುಡ್ ಮತ್ತು ಟಿವಿ ಉದ್ಯಮದ ಸೆಲೆಬ್ರಿಟಿಗಳಿಗಾಗಿ ಗ್ರ್ಯಾಂಡ್ ಪಾರ್ಟಿಯನ್ನು ಆಯೋಜಿಸುತ್ತಾರೆ. ಈ ವರ್ಷವೂ ಏಕ್ತಾ ಕಪೂರ್ ಸಣ್ಣ ಪಾರ್ಟಿ ನಡೆಸಬಹುದು. ಆದರೆ ಇಲ್ಲಿಯವರೆಗೆ ಯಾವುದನ್ನೂ ಅಂತಿಮಗೊಳಿಸಿಲ್ಲ. ಏಕ್ತಾ ಅವರಲ್ಲದೆ, ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ಕೂಡ ಸಣ್ಣ ಮಟ್ಟದಲ್ಲಿ  ದೀಪಾವಳಿ ಪಾರ್ಟಿಯನ್ನು ಆಯೋಜಿಸಬಹುದು.

ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಶರ್ಮಾ ದೀಪಾವಳಿಯಂದು ಬಾಂದ್ರಾ ಅಪಾರ್ಟ್ಮೆಂಟ್‌ನಲ್ಲಿ ತನ್ನ ಕುಟುಂಬ ಮತ್ತು ಸ್ನೇಹಿತರಿಗೆ ಸಣ್ಣ ಪಾರ್ಟಿಯನ್ನು ನೀಡಬಹುದು. ಅರ್ಪಿತಾ ತನ್ನ ಅಪಾರ್ಟ್‌ಮೆಂಟ್‌ನ ಇಂಟೀರಿಯರ್  ಕೆಲಸದಲ್ಲಿ ಬ್ಯುಸಿಯಾಗಿದ್ದರು ಮತ್ತು  ಈಗ ಮನೆ ಸಂಪೂರ್ಣವಾಗಿ ಸಿದ್ಧವಾಗಿದೆ.

click me!