ಜೊತೆಯಾಗಿ ಹಾಲಿಡೇ ಎಂಜಾಯ್‌ ಮಾಡುತ್ತಿರುವ ಸಾರಾ, ಜಾನ್ವಿ ಫೋಟೋ ವೈರಲ್‌!

Suvarna News   | Asianet News
Published : Nov 02, 2021, 07:23 PM IST

ಸಾರಾ ಅಲಿ ಖಾನ್ (Sara Ali Khan) ಮತ್ತು ಜಾನ್ವಿ ಕಪೂರ್ (Janhvi Kapoor) ಇತ್ತೀಚೆಗೆ ಕೇದಾರನಾಥ (Kedarnath) ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಹಾಲಿಡೇಯಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು, ಇದೇ ಮೊದಲು. ಇಬ್ಬರೂ ದೇವರ ದರ್ಶನ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಫೋಟೋಗಳಲ್ಲಿ, ಇಬ್ಬರೂ ಚಳಿಗಾಗಿ ದಪ್ಪ ಜಾಕೆಟ್ ಮತ್ತು ಸ್ವೆಟರ್‌ ಧರಿಸಿದ್ದಾರೆ. ಸಾರಾ ನೇರಳೆ ಬಣ್ಣದ ಜಾಕೆಟ್ ಮತ್ತು ಕ್ಯಾಪ್ ಧರಿಸಿದ್ದರೆ, ಜಾನ್ವಿ ಬಿಳಿ ಓವರ್ ಕೋಟ್ ಧರಿಸಿದ್ದಾರೆ. ಇಬ್ಬರೂ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದಾಗ. ಈ ಸ್ನೇಹಿತರ ನಡುವೆ ಸ್ಪರ್ಧೆ ತೀವ್ರಗೊಳ್ಳುತ್ತೆ ಎನ್ನಲಾಗಿತ್ತು. ನಂತರ ಇಬ್ಬರೂ ಈ ವಿಷಯವನ್ನು ಸಂಪೂರ್ಣವಾಗಿ ಸುಳ್ಳಾಗಿಸಿದ್ದರು. ಆಗಾಗ ಒಟ್ಟಿಗೆ ವರ್ಕ್‌ವೌಟ್ ಮಾಡೋ ವೀಡಿಯೋವನ್ನೂ ಇವರಿಬ್ಬರು ಹಂಚಿಕೊಳ್ಳುತ್ತಾರೆ. 

PREV
17
ಜೊತೆಯಾಗಿ ಹಾಲಿಡೇ ಎಂಜಾಯ್‌ ಮಾಡುತ್ತಿರುವ ಸಾರಾ, ಜಾನ್ವಿ ಫೋಟೋ ವೈರಲ್‌!

ಅಂದಹಾಗೆ, ಇತ್ತೀಚಿನ ದಿನಗಳಲ್ಲಿ ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ತುಂಬಾ ಕ್ಲೋಸ್‌ ಆಗಿದ್ದಾರೆ. ಕೆಲವು ಸಮಯದ ಹಿಂದೆ ಇಬ್ಬರೂ ಮುಂಬೈನಲ್ಲಿ ಜಿಮ್‌ ಹೊರಗೆ ಹಲವಾರು ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಅದೇ ಸಮಯದಲ್ಲಿ, ಇತ್ತೀಚೆಗೆ ಇಬ್ಬರೂ ರಣವೀರ್ ಸಿಂಗ್ ಅವರ ದಿ ಬಿಗ್ ಪಿಕ್ಚರ್ ಕ್ವಿಜ್ ರಿಯಾಲಿಟಿ ಶೋನಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿದ್ದರು.

27

ಈ ಫೋಟೋವೊಂದರಲ್ಲಿ, ಸಾರಾ ಜಾನ್ವಿಯ ಭುಜದ ಮೇಲೆ ತಲೆ ಇಟ್ಟಿರುವುದು ಕಾಣಬಹುದು. ಈ ವೇಳೆ ಗೆಳೆಯರಿಬ್ಬರೂ ನಗುನಗುತ್ತಾ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ವೇಳೆ ಜಾನ್ವಿ ಮತ್ತು ಸಾರಾ ಕೈದರನಾಥ ದೇವಸ್ಥಾನದ ಹೊರಗೆ ಅಭಿಮಾನಿಯೊಂದಿಗೆ ಪೋಸ್ ನೀಡಿದರು. ಫೋಟೋದಲ್ಲಿ, ದೇವಾಲಯದ ಭವ್ಯವಾದ ನೋಟವನ್ನು ಹಿಂಭಾಗದಲ್ಲಿ ಕಾಣಬಹುದು.

37

ಇತ್ತೀಚೆಗೆ, ಜಾನ್ವಿ ಕಪೂರ್ ಸಂದರ್ಶನವೊಂದರಲ್ಲಿ ಸಾರಾ ಜೊತೆಗಿನ ಸ್ನೇಹವು ಕಾಮನ್‌ ಫ್ರೆಂಡ್‌ ಮೂಲಕವಾಯಿತೆಂದು ಹೇಳಿದ್ದರು. ಅದೇ ಸಮಯದಲ್ಲಿ, ಸಾರಾ ಅವರೊಂದಿಗಿನ ಅವರ ಮೊದಲ ಭೇಟಿ ಪ್ರಶಸ್ತಿ ಸಮಾರಂಭದಲ್ಲಿ ನಡೆಯಿತು ಎಂದೂ ಹೇಳಿದ್ದರು. 

47

ಸಾರಾ ಮತ್ತು ಜಾನ್ವಿ ಇಬ್ಬರೂ ಬಾಲಿವುಡ್‌ನ ಫೇಮಸ್‌ ಕುಟುಂಬಕ್ಕೆ ಸೇರಿದವರು . ಸಾರಾ ಅವರ ಪೋಷಕರು ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಉದ್ಯಮದ ಪ್ರಸಿದ್ಧ ತಾರೆಗಳು. ಹಾಗೆಯೇ ಜಾನ್ವಿ ತಾಯಿ ಶ್ರೀದೇವಿ ಬಾಲಿವುಡ್‌ನ ಟಾಪ್ ಹೀರೋಯಿನ್‌ಗಳಲ್ಲಿ ಒಬ್ಬರು.

57

ಸೈಫ್ ಖಾನ್ ಮಗಳಾದರೂ, ಅಮ್ಮನಂತೆ ಸಾರಾ ಅಲಿ ಖಾನ್ ಹಿಂದೂ ದೇವಸ್ಥಾನಗಳಿಗೆ ಹೋಗುವುದಲ್ಲದ್ದೇ, ಹಿಂದೂ ಹಬ್ಬವನ್ನು ತುಂಬಾ ಶ್ರದ್ಧೆಯಿಂದ ಆಚರಿಸುತ್ತಾರೆ. ಆದರೆ, ನೆಟ್ಟಿಗರು ಇದಕ್ಕೂ ಆಕೆಯ ಕಾಲೆಳೆಯುವುದನ್ನು ಬಿಡೋಲ್ಲ. 

67

ಸಾರಾಗಿಂತ ಮೊದಲು ಜಾನ್ವಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಜಾನ್ವಿ ಜುಲೈ 2018 ರಲ್ಲಿ ಧಡಕ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅದೇ ಸಮಯದಲ್ಲಿ, ಸಾರಾ ಅಲಿ ಖಾನ್ ಡಿಸೆಂಬರ್ 2018 ರಲ್ಲಿ ಕೇದಾರನಾಥ್ ಚಿತ್ರದಲ್ಲಿ ಪಾದಾರ್ಪಣೆ ಮಾಡಿದರು.

 
 

77

ಸಾರಾ  ಮುಂದಿನ ದಿನಗಳಲ್ಲಿ  ಅತ್ರಾಂಗಿ ರೇ ಸಿನಿಮಾದಲ್ಲಿ ಕಾಣಿಸಿಕೊಂಡರೆ, ಜಾನ್ವಿ ಗುಡ್ ಲಕ್ ಜೆರ್ರಿ ಮತ್ತು ದೋಸ್ತಾನಾ 2 ನಂತಹ ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಈ ಇಬ್ಬರು ನಟಿಯರು ಪ್ರಸ್ತುತ ತಮ್ಮ ಮುಂದಿನ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. 

Read more Photos on
click me!

Recommended Stories