10 ಮಹಿಳೆಯರೊಂದಿಗೆ ಸೆಕ್ಸ್‌ ಮಾಡಿದ ಜೈಲರ್‌ ನಟನಿಗೆ ಬುದ್ಧಿ ಕಲಿಸಿದ ರಜನಿಕಾಂತ್‌! ಕೈಮುಗಿದ ವಿನಾಯಕನ್

Published : Sep 07, 2023, 07:10 PM ISTUpdated : Sep 09, 2023, 06:41 PM IST

ಬಹುಭಾಷಾ ನಟ, ಸಂಗೀತ ಸಂಯೋಜಕ ವಿನಾಯಕನ್ ಕಳೆದ ವರ್ಷ 'ನಾನು 10 ಮಹಿಳೆಯರ (Woman) ಜತೆ ಲೈಂಗಿಕ ಸಂಬಂಧವನ್ನು ಹೊಂದಿದ್ದೇನೆ. ನನ್ನೊಂದಿಗೆ ಮಲಗುತ್ತೀರಾ ಎಂದು ನಾನು ನೇರವಾಗಿಯೇ ಕೇಳುತ್ತೇನೆ' ಎಂದು ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಇದಾದ ನಂತರ ಸಿನಿಮಾದಿಂದ ದೂರವಿದ್ದ ವಿನಾಯಕನ್‌ಗೆ ಸೂಪರ್‌ಸ್ಟಾರ್‌ ರಜನಿಕಾಂತ್‌ ಬುದ್ಧಿಹೇಳಿ 'ಜೈಲರ್'​ ಸಿನಿಮಾದಲ್ಲಿ ಖಳನಾಯಕ ಪಾತ್ರ ಕೊಡಿಸಿದ್ದ ಬಗ್ಗೆ ಸ್ವತಃ ನಟನೇ ಮಾಹಿತಿ ಹಂಚಿಕೊಂಡಿದ್ದಾರೆ.  

PREV
18
10 ಮಹಿಳೆಯರೊಂದಿಗೆ ಸೆಕ್ಸ್‌ ಮಾಡಿದ ಜೈಲರ್‌ ನಟನಿಗೆ ಬುದ್ಧಿ ಕಲಿಸಿದ ರಜನಿಕಾಂತ್‌! ಕೈಮುಗಿದ ವಿನಾಯಕನ್

ಸೂಪರ್‌ಸ್ಟಾರ್‌ ರಜನಿಕಾಂತ್‌ ಅಭಿಯನಯದ ಜೈಲರ್​ ಸಿನಿಮಾ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಈಗ ಅಮೇಜಾನ್‌ ಪ್ರೈಮ್ ಒಟಿಟಿಯಲ್ಲೂ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಖಡಕ್‌ ವಿಲನ್‌ 'ವರ್ಮನ್‌' ಪಾತ್ರ ಮಾಡಿದ ವಿನಾಯಕನ್‌ ತಮ್ಮ ಪಾತ್ರದ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

28

ಜೈಲರ್ ಚಿತ್ರದ (Movie) ಮೂಲಕ ಫೇಮಸ್ ಆಗುತ್ತಿರುವ ವಿನಾಯಕನ್‌ಗೆ ಸಿನಿಮಾ ಹೊಸತಲ್ಲ. ವಿನಾಯಕನ್ ಕಳೆದ 25 ವರ್ಷಗಳಿಂದ ಮಲಯಾಳಂ ಚಿತ್ರರಂಗದಲ್ಲಿ ನಟಿಸುತ್ತಿದ್ದಾರೆ. ವಿನಾಯಕ್ 1995ರಲ್ಲಿ ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸಿದ ಮಲಯಾಳಂ ಚಿತ್ರ  'ಮಾಂತ್ರಿಕಂ' ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ್ದರು.

38

ಇದಾದ ನಂತರ ಮಲಯಾಳಂ ಸಿನಿಮಾ ಇಂಡಸ್ಟ್ರಿಯಿಂದ ದೂಷಣೆಗೆ ಒಳಗಾಗಿದ್ದರು. ಬಹುದಿನಗಳ ಕಾಲ ದೂರು ಉಳಿದು, ಜೈಲರ್‌ ಮೂಲಕ ಕಂಬ್ಯಾಕ್‌ ಮಾಡಿದ್ದಾರೆ.

48

2022ರಲ್ಲಿ ನಟಿ ನವ್ಯಾ ನಾಯರ್​ ಅಭಿನಯದ 'ಒರುಥಿ' ಚಿತ್ರದ ಪ್ರಚಾರದ ವೇಳೆ ವಿನಾಯಕನ್​ 'ನಾನು 10 ಮಹಿಳೆಯರ (Woman) ಜತೆ ಲೈಂಗಿಕ ಸಂಬಂಧವನ್ನು ಹೊಂದಿದ್ದೇನೆ. ನನ್ನೊಂದಿಗೆ ಮಲಗುತ್ತೀರಾ ಎಂದು ನಾನು ನೇರವಾಗಿಯೇ ಕೇಳುತ್ತೇನೆ. ಓಕೆ ಅಂದರೆ ಓಕೆ. ಒಂದು ವೇಳೆ ನಿರಾಕರಿಸಿದರೆ, ನಾನದನ್ನು ಅಲ್ಲಿಗೆ ಬಿಟ್ಟು ಬಿಡುತ್ತೇನೆ. 

58

ಕಳೆದ ವರ್ಷ ನಡೆದ ಸಂದರ್ಶನವೊಂದರಲ್ಲಿ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು .ಹೀಗಾಗಿ, ನಟ ವಿನಾಯಕ್ ವಿರುದ್ಧ ರೂಪದರ್ಶಿಯೊಬ್ಬರು ದೂರು ದಾಖಲಿಸಿದ್ದರು. 

68

ಜೈಲರ್​ ಸಿನಿಮಾ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಕಥೆ, ಸಿನಿಮಾಟೋಗ್ರಫಿ, ಆಕ್ಷನ್‌, ಡ್ಯಾನ್ಸ್‌ಗೆ ಪ್ರೇಕ್ಷಕರು ತಲೆಬಾಗಿದ್ದಾರೆ. ಅದರಲ್ಲೂ ಅದರಲ್ಲೂ ಖಳನಾಯಕ ವಿನಾಯಕನ್​ ವಿಭಿನ್ನ ಮ್ಯಾನರಿಸಂ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

78

ದೇಶದಲ್ಲಿ ಜೈಲರ್‌ ಸಿನಿಮಾದಿಂದ ಪ್ರಸಿದ್ಧಿಗೆ ಬರುತ್ತಿದ್ದಂತೆ ಮಹಿಳೆಯರ ಬಗ್ಗೆ ಮಾತನಾಡಿದ್ದ ಹಳೇ ಸಂದರ್ಶನದ ಕ್ಲಿಪ್ ಮತ್ತೆ ವೈರಲ್ ಆಗ್ತಿದೆ.

88

ನಾನು ಮಹಿಳೆಯರಿಗೆ ಬಲವಂತ (Force) ಮಾಡುವುದಿಲ್ಲ. ಮಹಿಳೆಗೆ ಲೈಂಗಿಕತೆ (Sex) ಬಗ್ಗೆ ಕೇಳುವುದು 'ಮೀ ಟೂ' ಎಂದಾದರೆ, ನಾನದನ್ನು ಮುಂದುವರಿಸುತ್ತೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

click me!

Recommended Stories