ಮದ್ವೆಯಾಗಲೂ ಆಶಾಗೆ ರಿಸ್ಟ್ರಿಕ್ಟ್ ಮಾಡಿದ್ರಾ ಲತಾ ಮಂಗೇಶ್ಕರ್, ತಂಗಿ ಮೇಲೆ ಹೊಟ್ಟೆಕಿಚ್ಚಿತ್ತಾ ಅಕ್ಕಂಗೆ?

Published : Sep 08, 2023, 04:49 PM IST

ದೇಶದ ಖ್ಯಾತ ಗಾಯಕಿ ಆಶಾ ಭೋಂಸ್ಲೆ (Asha Bhosle) ಅವರು ಸೆಪ್ಟೆಂಬರ್ 8 ರಂದು ತಮ್ಮ 90ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.1933ರಲ್ಲಿ ಸಾಂಗ್ಲಿಯಲ್ಲಿ ಜನಿಸಿದ ಅವರು, 16 ಸಾವಿರ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಗಾಯಕಿ ಆಶಾ ಭೋಂಸ್ಲೆ ಅವರು ಹಿರಿಯ ಸಹೋದರಿ ಮತ್ತು ಗಾಯಕಿ ದಿವಂಗತ ಲತಾ ಮಂಗೇಶ್ಕರ್ (Lata Mangeshkar) ಅವರೊಂದಿಗಿನ ಸಂಬಂಧದ ಬಗ್ಗೆ ಸಾಕಷ್ಟು ವರದಿಗಳು ಬಂದಿವೆ. ಆಶಾ ಅವರು ಮದುವೆಯಾಗುವ ಮುನ್ನ ಲತಾ ಇವರಿಗೆ ಎಚ್ಚರಿಸಿದ್ದರಂತೆ. ಆದರೂ ಲತಾ ಮಂಗೇಶ್ಕರ್ ಅವರ ಮಾತನ್ನು ಸಹೋದರಿ  ನಿರ್ಲಕ್ಷಿಸಿದ್ದೇಕೆ? ಆಶಾ ತನ್ನ ಸಹೋದರಿ ಲತಾ ಅವರ ಸಲಹೆಯನ್ನು ಅನುಸರಿಸಿದ್ದರೆ, ಬಹುಶಃ ಅವರು ಜೀವನದಲ್ಲಿ ಕೆಲವು ತೊಡಕುಗಳಿಂದ ಪಾರಾಗುತ್ತಿದ್ದರು.  

PREV
112
ಮದ್ವೆಯಾಗಲೂ ಆಶಾಗೆ ರಿಸ್ಟ್ರಿಕ್ಟ್ ಮಾಡಿದ್ರಾ ಲತಾ ಮಂಗೇಶ್ಕರ್, ತಂಗಿ ಮೇಲೆ ಹೊಟ್ಟೆಕಿಚ್ಚಿತ್ತಾ ಅಕ್ಕಂಗೆ?

ಮಂಗೇಶ್ಕರ್ ಕುಟುಂಬದಲ್ಲಿ ಲತಾ ಹಿರಿಯವರು, ಬಾಲ್ಯದಿಂದಲೂ ಕುಟುಂಬದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತಿದ್ದರು. ಕುಟುಂಬವನ್ನು ನೋಡಿಕೊಳುವುದರ ಜೊತೆಗೆ ಅವರು ಯಾವಾಗಲೂ ಆಶಾ ಅವರಿಗೆ ಸಲಹೆ ನೀಡುತ್ತಿದ್ದರು.

212

 ಆಶಾ ಭೋಂಸ್ಲೆ ಮತ್ತು ಲತಾ ನಡುವಿನ ವೈಮನಸ್ಯದ ಮಾತುಕತೆಗಳು ಮಾಧ್ಯಮಗಳಲ್ಲಿ ಆಗಾಗ ಸುದ್ದಿಯಾಗುತ್ತಲೇ ಇತ್ತು. ಆದರೆ ಲತಾ ಮಂಗೇಶ್ಕರ್ ಅವನ್ನು ನಿರಾಕರಿಸುತ್ತಲೇ ಇದ್ದರು.

312

ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದ್ದರು. ನಾನು ಆಶಾಳೊಂದಿಗೆ ಇತರೆ ಒಡಹುಟ್ಟಿದವರಷ್ಟೇ ಭಾಂದವ್ಯ ಹೇಗಿದೆಯೋ ಹಾಗೆಯೇ ಇದೆ ಎಂದರು. 
 

412

'ಅವರು ತಮ್ಮ ಸಹೋದರಿ ಆಶಾಗೆ ತುಂಬಾ ಹತ್ತಿರವಾಗಿದ್ದಾರೆ. ಆದರೆ ಈಗ ಭೇಟಿಯಾಗುವುದು ಅಪರೂಪ. ಅವಳು ತನ್ನ ಕುಟುಂಬದೊಂದಿಗೆ ವಾಸಿಸುತ್ತಾಳೆ, ಈಗ ನಾವು ಅಪರೂಪವಾಗಿ ಭೇಟಿಯಾಗುತ್ತೇವೆ ಎಂದು ಸಂದರ್ಶನದಲ್ಲಿ, ಲತಾ ಮಂಗೇಶ್ಕರ್ ಹೇಳಿಕೊಂಡಿದ್ದರು.

512

ತನ್ನ ತಂಗಿ ಮದುವೆಯಾಗಲು ನಿರ್ಧರಿಸಿದ್ದರಿಂದ ಅವಳ ಮೇಲೆ ಕೋಪಗೊಂಡರು ಎಂದು ಆ ಸಂದರ್ಶನದಲ್ಲಿ ಲತಾ ಮಂಗೇಶ್ಕರ್ ಹೇಳಿದ್ದರು. ವಾಸ್ತವವಾಗಿ, ಆಶಾ  ಕೇವಲ 16ನೇ ವಯಸ್ಸಿನಲ್ಲಿ ಲತಾ ಅವರ ಮ್ಯಾನೇಜರ್ ಗಣಪತ್ ರಾವ್ ಭೋಸ್ಲೆ ಅವರನ್ನು ವಿವಾಹವಾದರು. 
 

612

ತರಾತುರಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ .ಗಣಪತರಾವ್ ಈಗಾಗಲೇ ಮದುವೆಯಾಗಿದ್ದಾರೆ. ಈ ಸಂಬಂಧಕ್ಕೆ ಭವಿಷ್ಯವಿಲ್ಲ ಎಂದು ಆಶಾಗೆ ವಿವರಿಸಿದ್ದೇನೆ ಎಂದು ಲತಾ ಮಂಗೇಶ್ಕರ್‌ ಅವರು ಹಂಚಿಕೊಂಡರು.

712

ಆಶಾ ಭೋಂಸ್ಲೆ ಅವರ ಹೃದಯದ ಮಾತು ಕೇಳಿಸಿಕೊಂಡರೂ, ಸಹೋದರಿ ಲತಾ ಅವರ ಹಲವಾರು ಮನವೊಲಿಕೆಗಳ ಹೊರತಾಗಿಯೂ ಅವರು ಗಣಪತ್ ರಾವ್ ಭೋಂಸ್ಲೆ ಅವರನ್ನು ಆಯ್ಕೆ ಮಾಡಿದರು. ಈ ಮದುವೆಯು ಸುಮಾರು 14 ವರ್ಷಗಳ ಕಾಲ ನಡೆಯಿತು, ನಂತರ ಆಶಾ ಮತ್ತು ಗಣಪತ್ ರಾವ್ ಬೇರೆಯಾದರು.

812

ಇದೇ ರೀತಿ ಗಾಯಕಿ ಆಶಾ ಭೋಂಸ್ಲೆ ಅವರು ಹಿರಿಯ ಸಹೋದರಿ ಮತ್ತು ಗಾಯಕಿ ದಿವಂಗತ ಲತಾ ಮಂಗೇಶ್ಕರ್ ಅವರೊಂದಿಗಿನ ಪೈಪೋಟಿಯ ಬಗ್ಗೆಯೂ ಮನಬಿಚ್ಚಿ ಮಾತನಾಡಿದ್ದರು.

912

'ಜನರು ಕಥೆಗಳನ್ನು ಕಟ್ಟಿದರು ಮತ್ತು ತೊಂದರೆಗಳನ್ನು ಸೃಷ್ಟಿಸಲು ಪ್ರಯತ್ನಿಸಿದರು, ಆದರೆ ರಕ್ತ ನೀರಿಗಿಂತ ದಪ್ಪ. ನನಗೆ ನೆನಪಿರುವಂತೆ ಕೆಲವೊಮ್ಮೆ ನಾವಿಬ್ಬರೂ ಸಮಾರಂಭವಿದ್ದಾಗ ಕೆಲವು ಉದ್ಯಮದ ವ್ಯಕ್ತಿಗಳು ನನ್ನನ್ನು ನಿರ್ಲಕ್ಷಿಸಿ ತಮ್ಮ ನಿಷ್ಠೆಯನ್ನು ಸಾಬೀತುಪಡಿಸುವಂತೆ ಅವಳೊಂದಿಗೆ ಮಾತ್ರ ಸಂವಹನ ನಡೆಸುತ್ತಿದ್ದರು. ಆದರೆ ನಂತರ, ದೀದಿ ಮತ್ತು ನಾನು ಚೆನ್ನಾಗಿ ನಗುತ್ತಿದ್ದೆವು,' ಎಂದು ಆಶಾ ಭೋಂಸ್ಲೆ ಹೇಳಿದ್ದರು.

1012

16 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿ ನೀಡಿರುವ ಆಶಾ ಭೋಂಸ್ಲೆ ಅವರು 7 ಬಾರಿ ಫಿಲಂಫೇರ್ ಪ್ರಶಸ್ತಿ ಪಡೆದಿದ್ದಾರೆ. ದಿಲ್ ಚೀಜ್ ಕ್ಯಾ ಹೈ (ಉಮ್ರಾವ್ ಜಾನ್) ಮತ್ತು ಮೇರಾ ಕುಚ್ ಸಾಗನ್ (ಇಜಾತ್) ಗಾಗಿ ಆಶಾ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದಾರೆ.

1112

1940 ರ ದಶಕದಲ್ಲಿ ಮನರಂಜನಾ ಜಗತ್ತಿನಲ್ಲಿ ಪಾದಾರ್ಪಣೆ ಮಾಡಿದ ಆಶಾ ಭೋಂಸ್ಲೆ  ಅವರು  ತನ್ನ 90ನೇ ಹುಟ್ಟುಹಬ್ಬದಂದು ಲೈವ್‌ ಸಂಗೀತ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ.

1212

'ನಾನು ಅಸಾಮಾನ್ಯ ಕೆಲಸಗಳನ್ನು ಮಾಡಲು ಇಷ್ಟಪಡುತ್ತೇನೆ. ನನ್ನ 90ನೇ ಹುಟ್ಟುಹಬ್ಬದಂದು ಅದ್ಭುತವಾದ ಸಂಗೀತ ಕಾರ್ಯಕ್ರಮ ನೀಡಲು  ನಿರ್ಧರಿಸಿದೆ. ಜಗತ್ತಿನಲ್ಲಿ ಯಾರಾದರೂ ಈ ಸಾಧನೆ ಮಾಡಿದ್ದಾರೆಯೇ ಎಂದು ನನಗೆ ಅನುಮಾನವಿದೆ,' ಎಂದೂ ಆಶಾ ಭೋಂಸ್ಲೆ ಹೇಳಿದರು.

Read more Photos on
click me!

Recommended Stories