ಸಾನ್ಯಾ ಮಲ್ಹೋತ್ರಾಗಿತ್ತು ಮೀಸೆ ಕೂದಲು; ಹೈಸ್ಕೂಲಲ್ಲಿ ಆಡಿಕೊಳ್ಳುತ್ತಿದ್ದ ಸಹಪಾಠಿಗೆ ನಟಿ ಕೊಟ್ಟ ಖಡಕ್ ರಿಪ್ಲೈ ಇದು

Published : May 16, 2024, 12:51 PM IST

ಬಾಲಿವುಡ್‌ನಲ್ಲಿ ಸಾನ್ಯಾ ಮಲ್ಹೋತ್ರಾ ಅದ್ಭುತ ನಟಿ ಎಂಬುದರಲ್ಲಿ ಎರಡು ಮಾತಿಲ್ಲ. ಸೌಂದರ್ಯದ ವಿಷಯದಲ್ಲಿ ಅವರು ಹಲವು ಸವಾಲು ಎದುರಿಸಿದರಂತೆ, ಆದರೆ ಅವೆಲ್ಲವನ್ನೂ ನಟಿ ಎದುರಿಸಿದಾಗ ತೋರಿದ ಆತ್ಮವಿಶ್ವಾಸ ಎಲ್ಲರಿಗೂ ಮಾದರಿ. 

PREV
110
ಸಾನ್ಯಾ ಮಲ್ಹೋತ್ರಾಗಿತ್ತು ಮೀಸೆ ಕೂದಲು; ಹೈಸ್ಕೂಲಲ್ಲಿ ಆಡಿಕೊಳ್ಳುತ್ತಿದ್ದ ಸಹಪಾಠಿಗೆ ನಟಿ ಕೊಟ್ಟ ಖಡಕ್ ರಿಪ್ಲೈ ಇದು

'ದಂಗಲ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಟಿ ಸಾನ್ಯಾ ಮಲ್ಹೋತ್ರಾ ಬದಾಯಿ ಹೋ, ಲುಡೋ, ಪಾಗ್‌ಲೈಟ್, ಜವಾನ್, ಸ್ಯಾಮ್ ಬಹದ್ದೂರ್ ಮತ್ತು ಇನ್ನೂ ಅನೇಕ ಪಾಥ್‌ಬ್ರೇಕಿಂಗ್ ಚಲನಚಿತ್ರಗಳ ಭಾಗವಾಗಿದ್ದಾರೆ.

210

ಆಕೆಯ ರೂಪ, ನಟನೆ, ನೃತ್ಯ ಮಾಡುವ ಶೈಲಿ ಎಲ್ಲವೂ ಜನರಿಂದ ಮೆಚ್ಚುಗೆಗೊಳಗಾಗಿವೆ. ಆದರೆ, ನಟಿಯ ಇದೇ ರೂಪದ ಕಾರಣದಿಂದ ಅವರು ತಮ್ಮ ಹದಿಹರೆಯದಲ್ಲಿ ಹಾಗೂ ವೃತ್ತಿಜೀವನದ ಆರಂಭದಲ್ಲಿ ಸಾಕಷ್ಟು ಕಾಮೆಂಟ್‌ಗಳನ್ನು ಕೇಳಿದರು. ಆದರೆ, ನಟಿಯ ಆತ್ಮವಿಶ್ವಾಸದ ಮುಂದೆ ಆ ನಕಾರಾತ್ಮಕ ಮಾತುಗಳೆಲ್ಲ ಕಾಲು ಮುರಿದುಕೊಂಡು ಕೂತವು.

310

ಕಾಸ್ಟಿಂಗ್ ಡೈರೆಕ್ಟರ್‌‌ನ ವಿಚಿತ್ರ ಬೇಡಿಕೆ
ಸೋಷಿಯಲ್ ಮೀಡಿಯಾ ಸೆನ್ಸೇಷನ್ ಜೊತೆಗಿನ ಸಂವಾದದಲ್ಲಿ,  ಸಾನ್ಯಾ ಮಲ್ಹೋತ್ರಾ ಅವರು ತಮ್ಮ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ಹೊರಗಿನವರಾಗಿದ್ದಾಗ ಅವರು ಎದುರಿಸಿದ ಹಲವಾರು ಸವಾಲುಗಳ ಬಗ್ಗೆ ಮಾತನಾಡಿದ್ದಾರೆ.

410

ನಟನೆಗೆ ಬರುವ ಮುನ್ನ ನಟಿಗೆ ತಾನು ನಾಯಕಿಯಾಗೇ ಆಗುತ್ತೇನೆ ಎಂಬ ಅಚಲ ವಿಶ್ವಾಸ. ಹೀಗಾಗಿ ಆಕೆ ಹೇರ್‌ಸ್ಟೈಲ್, ಮೇಕಪ್ ಯಾವುದೂ ಇಲ್ಲದೆ ಆಡಿಶನ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಒಮ್ಮೆ ಕ್ಯಾಸ್ಟಿಂಗ್ ನಿರ್ದೇಶಕರೊಬ್ಬರು ಆಕೆಗೆ, ಜಾ ರಿಕನ್ಸ್ಟ್ರಕ್ಷನ್(ದವಡೆಯ ಪುನರ್ನಿರ್ಮಾಣ) ಮಾಡಿಸಿಕೊಂಡು ಬರಲು ಹೇಳಿದರು. 

510

ಈ ಬೇಡಿಕೆ ಕೇಳಿ ನಟಿ ಆಶ್ಚರ್ಯಗೊಂಡು ಹೊರಬಂದರಂತೆ. ಆದರೆ, ಈ ಬಗ್ಗೆ ಮಾತನಾಡುವ ನಟಿ, 'ನಾನು ಪರಿಪೂರ್ಣ ಎಂದು ನನಗೆ ತಿಳಿದಿದೆ! ನಾನು ತುಂಬಾ ಆತ್ಮವಿಶ್ವಾಸ ಹೊಂದಿದ್ದೇನೆ' ಎನ್ನುತ್ತಾರೆ.

610

ಪೀರಿಯಡ್ಸ್ ಸಮಯದಲ್ಲಿ ಏರಿಳಿತ
ಎಷ್ಟೇ ಆತ್ಮವಿಶ್ವಾಸವಿದ್ದರೂ ಪೀರಿಯಡ್ಸ್ ಸಮಯದಲ್ಲಿ ಅದು ಏರಿಳಿತಗೊಳ್ಳುತ್ತದೆ ಎಂದಿರುವ ನಟಿ ತನಗೆ ಎಂಡೊಮೆಟ್ರಿಯೊಸಿಸ್ ಇರುವ ವಿಷಯವನ್ನು ಹಂಚಿಕೊಂಡಿದ್ದಾರೆ. 

710

ಶಾಲೆಗೆ ಹೋಗುವಾಗ ಇತ್ತು ಮೀಸೆ!
ಸಾನ್ಯಾಗೆ ಹೈಸ್ಕೂಲ್ ದಿನಗಳಲ್ಲಿ ಹಾರ್ಮೋನ್ ಏರುಪೇರಿನಿಂದ ಮುಖದಲ್ಲಿ ಕೂದಲಿದ್ದವು. ಮೀಸೆ ಕೂದಲುಗಳು ಕೊಂಚ ನೋಟಿಸ್ ಮಾಡುವಂತಿದ್ದವು. ಆಗ ಸಹಪಾಠಿಯೊಬ್ಬ ಗೇಲಿ ಮಾಡಿದನಂತೆ, ಆತನಿಗೆ ನಟಿ 'ನಿನ್ನ ಬಳಿ ಇಲ್ಲ' ಎಂದು ತಿರುಗೇಟು ಕೊಟ್ಟರಂತೆ. ಆತ ಚುಪ್ಚಾಪ್!

810

ಹೀಗೆ ಮುಖದಲ್ಲಿ ಕೂದಲಿರುವಾಗಲೂ ಸಾನ್ಯಾಗೆ ತಾನು ಮುಂದೊಂದು ದಿನ ನಟಿಯಾಗುವ ವಿಶ್ವಾಸವಿತ್ತಂತೆ. ಇಂಥ ಆತ್ಮವಿಶ್ವಾಸ ಎಲ್ಲರಿಗೂ ಬೇಕಾಗಿರುವುದು ಅಲ್ಲವೇ?

910

ಬ್ಯಾಂಕ್ ಉದ್ಯೋಗಿಯಾಗುವೆ ಎಂದಿದ್ದ ಜ್ಯೋತಿಷಿಗಳು
ಸದಾ ನಟಿಯಾಗುವ ಕನಸು ಕಾಣುತ್ತಿದ್ದ ಸಾನ್ಯಾ ತಾಯಿಗೆ ಮಗಳು ಸ್ನಾತಕೋತ್ತರ ಓದಬೇಕೆಂಬ ಹಂಬಲವಿತ್ತು. ಅವರು ಮಗಳ ಮನಸ್ಸನ್ನು ಬದಲಿಸಲು ಮೂವರು ಜ್ಯೋತಿಷಿಗಳ ಬಳಿ ಕರೆದೊಯ್ದರು. ಅವರೆಲ್ಲರೂ ಆಕೆಗೆ, ನೀನು ನಟಿಯಾಗುವುದು ಸಾಧ್ಯವಿಲ್ಲ, ಅರ್ಥಶಾಸ್ತ್ರ ಓದಿ ಬ್ಯಾಂಕ್ ಉದ್ಯೋಗಿಯಾಗುವೆ ಎಂದಿದ್ದರಂತೆ. ಆದರೆ, ಸಾನ್ಯಾ ಆಗಲೇ 'ಅದು ಸಾಧ್ಯವಿಲ್ಲ' ಎಂದಿದ್ದರು. 

1010

ಕೆಲಸದ ಮುಂಭಾಗದಲ್ಲಿ, ಸನ್ಯಾ ಮಲ್ಹೋತ್ರಾ 'ಜವಾನ್', 'ಸ್ಯಾಮ್ ಬಹಾದೂರ್', 'ಕಥಾಲ್'ನಲ್ಲಿ ಕಳೆದ ವರ್ಷ ಕಾಣಿಸಿಕೊಂಡಿದ್ದರು. ಅವರ ಬೇಬಿ ಜಾನ್ ಮತ್ತು ಮಿಸಸ್ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. 

click me!

Recommended Stories