ಮಿಲ್ಕಿ ಬ್ಯೂಟಿ ತಮನ್ನಾಗೆ ಇನ್ನೂ ಅಭಿಮಾನಿಗಳೇನು ಕಮ್ಮಿಯಾಗಿಲ್ಲ. ಸಿನಿಮಾ ಜೊತೆಗೆ ಸದ್ಯ ವೆಬ್ ಸೀರಿಸ್‌ಗಳಲ್ಲಿಯೂ ಬ್ಯುಸಿಯಾಗಿರೋ ನಟಿ ಲವ್‌ನಲ್ಲಿ ಬಿದ್ದಿದ್ದಾರೆ. ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದು, ಆಗಾಗ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ತಮನ್ನಾ ನೀಡಿದ ಸಂದರ್ಶನದಲ್ಲಿ ತನ್ನ ಬಗೆಗಿನ ಗುಟ್ಟೊಂದನ್ನು ಬಹಿರಂಗಪಡಿಸಿದ್ದಾರೆ. ತನಗೊಂದು ವಿಚಿತ್ರ ಅಭ್ಯಾಸವಿದ್ದು, ಅದನ್ನು ಕೇಳಿದರೆ ನಿಮಗೆ ಆಶ್ಚರ್ಯ ಆಗುತ್ತೆ ಎಂದಿದ್ದಾರೆ.
ತಮನ್ನಾ ಸಿನಿಮಾದಲ್ಲಿ ನಟಿಸುತ್ತಿದ್ದರೂ, ಡೇಟಿಂಗ್ ವಿಷಯವಾಗಿ ಹೆಚ್ಚು ಚರ್ಚೆಯಲ್ಲಿದ್ದಾರೆ. ಇತ್ತೀಚೆಗಿನ ನೀಡಿದ ಸಂದರ್ಶನದಲ್ಲಿ ನಟಿ ತಮನ್ನಾ ಯಾರನ್ನಾದರೂ ಭೇಟಿಯಾಗಲು ಬಯಸಿದರೆ ಮೊದಲು ಸ್ಥಳ ಹಾಗೂ ಫುಡ್ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರಂತೆ.
ಹೌದು! ತಮನ್ನಾ ಭಾಟಿಯಾ ತನ್ನ ಇಷ್ಟ ಕಷ್ಟದ ಬಗ್ಗೆ ಸಂದರ್ಶನದಲ್ಲಿ ಮಾತಾಡಿದ್ದಾರೆ. ರಾತ್ರಿ 8 ಗಂಟೆಯ ನಂತರ ಎಲ್ಲಿಯೂ ಹೋಗುವುದಕ್ಕೆ ಇಷ್ಟವಿಲ್ಲ. ಕೆಲಸ ಮಾಡುವುದಕ್ಕೂ ಇಷ್ಟವಿಲ್ಲ ಎಂದಿದ್ದಾರೆ. ರಾತ್ರಿ ಎಂಟು ಗಂಟೆಯ ನಂತರ ಸಿನಿಮಾದಲ್ಲಿ ಕೆಲಸ ಮಾಡುವುದಕ್ಕೆ ಇಷ್ಟವಿಲ್ಲ ಎಂದಿದ್ದಾರೆ.
ಮಿಲ್ಕಿ ಬ್ಯೂಟಿ ತಮನ್ನಾಗೆ ಇನ್ನೂ ಅಭಿಮಾನಿಗಳೇನು ಕಮ್ಮಿಯಾಗಿಲ್ಲ. ಸಿನಿಮಾ ಜೊತೆಗೆ ಸದ್ಯ ವೆಬ್ ಸೀರಿಸ್‌ಗಳಲ್ಲಿಯೂ ಬ್ಯುಸಿಯಾಗಿರೋ ನಟಿ ಲವ್‌ನಲ್ಲಿ ಬಿದ್ದಿದ್ದಾರೆ. ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದು, ಆಗಾಗ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
ತಮನ್ನಾ ಭಾಟಿಯಾ ಇತ್ತೀಚೆಗೆ ಬಾಲಿವುಡ್‌ನಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರೂ, ತಮಿಳಿನ ಸಿನಿಮಾವೊಂದು ರಿಲೀಸ್ ಆಗಿತ್ತು. 'ಅರಣ್ಮನೈ 4' ಅನ್ನುವ ಸಿನಿಮಾದಲ್ಲಿ ನಟಿಸಿದ್ದು, ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಹೀಗಾಗಿ ಸಿನಿಮಾ ಬಗ್ಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ.
ಟಾಲಿವುಡ್ ಮೂಲಗಳ ಇತ್ತೀಚಿನ ಮಾಹಿತಿಯೆಂದರೆ, ಪೌರಾಣಿಕ ನಟಿ ಜಮುನಾ ಅವರ ಜೀವನಚರಿತ್ರೆ ಬರಲಿದೆ. ಈ ಬಯೋಪಿಕ್‌ನಲ್ಲಿ ಜಮುನಾ ಪಾತ್ರದಲ್ಲಿ ತಮನ್ನಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಸಿನಿಮಾಗಾಗಿ ಆಕೆಯನ್ನು ಈಗಾಗಲೇ ಸಂಪರ್ಕಿಸಲಾಗಿದೆ ಎಂದು ವರದಿಯಾಗಿದೆ.