ಭಾರತದಲ್ಲಿ ಅತಿಹೆಚ್ಚು ಹುಡುಕಲ್ಪಡುವ ಟಾಪ್‌-10 ನಟಿಯರು ಇಲ್ಲಿದ್ದಾರೆ ನೋಡಿ...

Published : May 15, 2024, 09:18 PM ISTUpdated : May 15, 2024, 09:20 PM IST

ಭಾರತೀಯ ಚಿತ್ರರಂಗದಲ್ಲಿ ಒಬ್ಬರಿಗಿಂತ ಒಬ್ಬ ನಟಿಯರು ಹಾಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಆದರೆ, ಅಭಿಮಾನಿಗಳು ಹೆಚ್ಚಾಗಿ ಯಾವ ನಟಿಯರನ್ನು ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹುಡುಕುತ್ತಾರೆ ಗೊತ್ತಾ.?  ಇಲ್ಲಿದೆ ನೋಡಿ ಹುಡುಕುವ ಟಾಪ್-10 ನಟಿಯರ ಪಟ್ಟಿ...

PREV
110
ಭಾರತದಲ್ಲಿ ಅತಿಹೆಚ್ಚು ಹುಡುಕಲ್ಪಡುವ ಟಾಪ್‌-10 ನಟಿಯರು ಇಲ್ಲಿದ್ದಾರೆ ನೋಡಿ...

ದಕ್ಷಿಣ ಭಾರತದ ಸ್ಟಾರ್ ನಟಿಯಾಗಿರುವ ಸಮಂತಾ ರುತ್ ಪ್ರಭು (samantha ruth prabhu) ಅವರು ಅತಿಹೆಚ್ಚು ಹುಡುಕಲ್ಪಡುವ ಭಾರತೀಯ ನಟಿಯರಲ್ಲಿ 10ನೇ ಸ್ಥಾನಸಲ್ಲಿದ್ದಾರೆ. ಇವರು ಕಳೆದೊಂದು ವಾರದಿಂದ ಅವರ ಅರೆನಗ್ನ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ವಿವಾದಕ್ಕೆ ಸಿಲುಕಿದ್ದರು. ಆದರೆ, ಕಣ್ತಪ್ಪಿನಿಂದ ಆದ ಫೋಟೋವನ್ನು ಕೂಡಲೇ ಡಿಲೀಟ್ ಮಾಡಿದ್ದರು.

210

ಬಾಲಿವುಡ್ ಬಹುಬೇಡಿಕೆ ನಟಿಯರಲ್ಲಿ ಒಬ್ಬರಾದ ಶ್ರದ್ಧಾ ಕಪೂರ್ (shraddha Kapoor) ಅವರು ತಮ್ಮ ಸೌಂದರ್ಯದಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅಂತರ್ಜಾಲದಲ್ಲಿ ಹುಡುಕುವ ಭಾರತೀಯ ನಟಿಯರಲ್ಲಿ 9ನೇ ಸ್ಥಾನದಲ್ಲಿದ್ದಾರೆ.

310

ಬಾಲಿವುಡ್ ಮತ್ತೊಬ್ಬ ಬೆಡಗಿ ಕೃತಿ ಸನೋನ್ (Kriti Sanon) ಬಾಲಿವುಡ್ ಸ್ಟಾರ್ ಹೀರೋಯಿನ್‌ಗಳಲ್ಲಿ ಒಬ್ಬರಾಗಿದ್ದು, ಹಿಂದಿ ಹಾಗೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದಿಪುರುಷ್‌ ಸಿನಿಮಾದಲ್ಲಿ ಸೀತೆಯಾಗಿ ನಟಿಸಿ ನಿರೀಕ್ಷಿತ ಯಸ್ಸು ಗಳಿಸದಿದ್ದರೂ ಅವರ ಮಹಿಳಾ ಪ್ರಧಾನ ಚಿತ್ರ ಕ್ರ್ಯೂ ಯಶಸ್ಸಿನ ಹಾದಿ ಹಿಡಿದಿದೆ. ಕೃತಿ ಸನೋನ್ ಅಂತರ್ಜಾಲದಲ್ಲಿ ಹುಡುಕವ ಭಾರತೀಯ ನಟಿಯರ ಪೈಕಿ 8ನೇ ಸ್ಥಾನದಲ್ಲಿದ್ದಾರೆ.

410

ಬಾಲಿವುಡ್‌ನ ಬೊಂಬೆಯಂತಹ ಬೆಡಗಿ ಜಾನ್ವಿ ಕಪೂರ್ (Janhvi Kapoor) ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಇರುವ ಜಾನ್ವಿ ಆಗಾಗ್ಗೆ ತಮ್ಮ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇನ್ನು ಸಿನಿಮಾದಂತೆ ನಿಜ ಜೀವನದಲ್ಲಿಯೂ ತುಂಡುಡುಗೆ ತೊಡುವ ಜಾಹ್ನವಿ ಎಲ್ಲೇ ಕಂಡರೂ ಫೋಟೋ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಡುತ್ತಾರೆ. ಹೀಗಾಗಿ, ಜಾಹ್ನವಿ ಹುಡುಕುವರ ಸಂಖ್ಯೆಯೂ ಹೆಚ್ಚಾಗಿದೆ.

510

ಇಂಗ್ಲೆಂಡಿನಿಂದ ಭಾರತಕ್ಕೆ ಬಂದು ಬಾಲಿವುಡ್‌ನಲ್ಲಿ ಮಿಂಚಿದ ಕತ್ರಿನಾ ಕೈಫ್ (Katrina Kaif) ಮಾತ್ರ ಆರಂಭದಿಂದಲೂ ಅಭಿಮಾನಿಗಳಲ್ಲಿ ಕ್ರೇಜ್ ಉಳಿಸಿಕೊಂಡು ಬಂದಿದ್ದಾರೆ. ಕತ್ರಿನಾ ವಾಟ್ಸಾಪ್‌ ಚಾನಲ್‌ನಲ್ಲಿ ಅತಿಹೆಚ್ಚು 2.1 ಕೋಟಿ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ನಟ ವಿಕ್ಕಿ ಕೌಶಲ್‌ (Vicky Kaushal) ರನ್ನು ಮದುವೆಯಾಗಿ ಈಗ ಭಾರತದ ಸೊಸೆ ಎನಿಸಿಕೊಂಡಿರುವ ಕತ್ರಿನಾ ಕೈಫ್ ಅಂತರ್ಜಾಲದಲ್ಲಿ ಹುಡುಕುವ ಟಾಪ್ 6 ನಟಿಯಾಗಿದ್ದಾರೆ.

610
Priyanka Chopra Jonas

ಬಾಲಿವುಡ್‌ನಲ್ಲಿ ಭರ್ಜರಿಯಾಗಿ ಮಿಂಚಿದ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಹಾಲಿವುಡ್ ನಟ ನಿಕ್ ಜೋನಸ್ ಮದುವೆಯಾಗಿ ವಿದೇಶದಲ್ಲಿಯೇ ನೆಲೆಸಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಪ್ರಿಯಾಂಕಾ ತಮ್ಮ ಹಾಟ್ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ರಸದೌತಣ ಬಡಿಸುತ್ತಾರೆ. ಕೆಲವೊಮ್ಮೆ ಭಾರತೀಯ ಸಂಪ್ರದಾಯವನ್ನೇ ಗಾಳಿಗೆ ತೂರಿ ಟೀಕೆಗಳನ್ನೂ ಎದುರಿಸುತ್ತಿದ್ದಾರೆ. ಒಟ್ಟಿನಲ್ಲಿ ಅಂತರ್ಜಾಲ ಹುಡುಕಾಟದಲ್ಲಿ ಪ್ರಿಯಾಂಕಾ ಮುಂದಿದ್ದಾರೆ.

710

ಕನ್ನಡ ನಾಡಿನ ಕುವರಿ ದೀಪಿಕಾ ಪಡುಕೋಣೆ (Deepika Padukone) ಬಾಲಿವುಡ್‌ಗೆ ಹಾರಿದ್ದು, ಇತಿಹಾಸದ ಪುಟ ಸೇರಾಗಿದೆ. ಈಗ ಬಾಲಿವುಡ್ ನಟ ರಣವೀರ್ ಸಿಂಗ್ ಮದುವೆಯಾಗಿ ಸುಖ ಸಂಸಾರ ಸಾಗಿಸುತ್ತಿರುವ ದೀಪಿಕಾ ಪ್ರಗ್ನೆಂಟ್ ಆಗಿದ್ದು, ಮಗು ಹೆರಲು ಸಜ್ಜಾಗಿದ್ದಾಳೆ. ಆದರೆ, ಮೈತುಂಬಾ ಬಟ್ಟೆಗಿಂತ ಅರೆಬರೆ ಬಟ್ಟೆ ಹಾಗೂ ಬಿಕಿನಿ ತೊಟ್ಟಿದ್ದೇ ಹೆಚ್ಚು ಎಂದು ಅಭಿಮಾನಿಗಳು ಹೇಳುತ್ತಾರೆ. ಹೀಗಾಗಿ, ದೀಪಿಕಾ ನೆಟ್ಟಿಗರಿಂದ ಜಾಸ್ತಿ ಹುಡುಕಾಟಕ್ಕೆ ಒಳಗಾಗಿದ್ದಾರೆ.

810
Rashmika Mandanna

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashika Mandanna) ಸ್ಯಾಂಡಲ್‌ವುಡ್, ಕಾಲಿವುಡ್ ಸೇರಿ ದಕ್ಷಿಣ ಚಿತ್ರರಂಗವನ್ನು ದಾಟಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾಳೆ. ಅಲ್ಲಿ ರಣಬೀರ್ ಕಪೂರ್ ಅವರೊಂದಿಗೆ ಅನಿಮಲ್ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಂಡಿದ್ದಾಳೆ. ಈಗ ಅಂತರ್ಜಾಲದಲ್ಲಿಯೂ ಹೆಚ್ಚು ಹುಡುಕುವ ನಟಿಯರ ಪೈಕಿ 3ನೇ ಸ್ಥಾನದಲ್ಲಿದ್ದಾಳೆ.

910

ಬಾಲಿವುಡ್‌ನಲ್ಲಿ ಪದೇ ಪದೇ ನೆಪೋಟಿಸಂ ಕಿಡ್‌ ಎಂಬ ಟಾರ್ಗೆಟ್‌ಗೆ ಒಳಗಾಗುತ್ತಿರುವ ನಟಿ ಆಲಿಯಾ ಭಟ್ (Alia Bhat), ಚಿತ್ರರಂಗದ ಹಿನ್ನೆಲೆಯ ಕುಟುಂಬದ ಜೊತೆಗೆ ತನ್ನ ನಟನಾ ಕೌಶಲ್ಯದೊಂದಿಗೆ ಅತಿ ಕಡಿಮೆ ಸಮಯದಲ್ಲಿ ಉತ್ತುಂಗಕ್ಕೆ ಏರಿದ ನಟಿಯಾಗಿದ್ದಾಳೆ. ಆಲಿಯಾ ಸೌಂದರ್ಯ ನೋಡಲೆಂದೇ ನೆಟ್ಟಿಗರು ಅತಿಹೆಚ್ಚಿ ಆಲಿಯಾ ಫೋಟೋ ಹುಡುಕುತ್ತಾರೆ. ಇನ್ನು ರಣಬೀರ್ ಕಪೂರ್ (Ranbir Kapoor) ಮದುವೆಯಾದ ಒಂದು ವರ್ಷಕ್ಕೆ ಹೆಣ್ಣು ಮಗು ಹೆತ್ತು ಆರೈಕೆಯಲ್ಲಿದ್ದಾಳೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಇರುವ ಆಲಿಯಾ ಅಭಿಮಾನಿಗಳ ಹುಡುಕಾಟದಿಂದ ಮಾತ್ರ ದೂರವಾಗಿಲ್ಲ.

1010

ಬಾಲಿವುಡ್ ಚಿತ್ರರಂಗದಲ್ಲಿ ಏಕಾಏಕಿ ಸೆನ್ಸೇಷನಲ್ ಕ್ರಿಯೇಟ್ ಮಾಡಿದ ನಟಿಯೆಂದರೆ ಅದು ಕಿಯಾರಾ ಅಡ್ವಾಣಿ ಎಂದರೆ ತಪ್ಪಿಲ್ಲ. ಅವರ ಲಸ್ಟ್ ಸ್ಟೋರೀಸ್ ಸಿನಿಮಾದಲ್ಲಿ ನಟಿಸಿದ ಆರ್ಗಾನಿಸಂ ದೃಶ್ಯದಿಂದಾಗಿ ಭಾರಿ ಹುಡುಕಾಟದಲ್ಲಿದ್ದಾರೆ. ಮಾಹಿತಿಯ ಪ್ರಕಾರ ಗೂಗಲ್‌ನಲ್ಲಿ ಕಿಯಾರಾ ಅಡ್ವಾಣಿ (Kiara Advani)  ಸೆಕ್ಸ್‌ ಟಾಯ್ಸ್ ಎಂದು ಹುಡುಕುವವರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ, ಕಿಯಾರಾ ಈಗ ಸಾಂಪ್ರದಾಯಿಕ ಚಿತ್ರಗಳಲ್ಲಿ ನಟಿಸುತ್ತಿದ್ದರೂ, ತಮ್ಮ ಸೌಂದರ್ಯದಿಂದ ಅಂತರ್ಜಾಲ ಹುಡುಕಾಟದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

click me!

Recommended Stories