ಬಹಳ ಸಮಯದ ನಂತರ ಕುಟುಂಬದ ಜೊತೆ ಕಾಣಸಿಕೊಂಡ Sanjay Dutt

Published : Mar 26, 2022, 05:13 PM IST

ಬಾಲಿವುಡ್‌ ನಟ  ಸಂಜಯ್ ದತ್  (Sanjay Dutt) ಬಹಳ ಸಮಯದ ನಂತರ ತಮ್ಮ ಕುಟುಂಬದೊಂದಿಗೆ ಡಿನ್ನರ್‌ನಲ್ಲಿ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ, ಸಂಜಯ್ ಪ್ರಿಂಟೆಡ್ ಶರ್ಟ್ ಮತ್ತು ಕಪ್ಪು ಪ್ಯಾಂಟ್‌ನಲ್ಲಿ ಕಾಣಿಸಿಕೊಂಡರು. ಅದೇ ಸಮಯದಲ್ಲಿ, ಅವರ ಪತ್ನಿ ಮಾನ್ಯತಾ ದತ್ (Manyata Dutt)  ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡರು. ಬಹುನಿರೀಕ್ಷಿತ ಚಿತ್ರ ಕೆಜಿಎಫ್ 2 ನಲ್ಲಿ ಸಂಜಯ್ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ ಮಂಬೈನಲ್ಲಿ ಯಾವ ಸೆಲೆಬ್ರಿಟಿಗಳು ಎಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಅಪ್‌ಡೇಟ್ಸ್‌ ಇಲ್ಲಿದೆ.

PREV
18
ಬಹಳ ಸಮಯದ ನಂತರ  ಕುಟುಂಬದ ಜೊತೆ ಕಾಣಸಿಕೊಂಡ Sanjay Dutt

ಸಂಜಯ್ ದತ್ ತಮ್ಮ ಮುಂಬರುವ ಚಿತ್ರಗಳ ಚಿತ್ರೀಕರಣವನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ. ಸದ್ಯ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ನಿನ್ನೆ ರಾತ್ರಿ ಅವರು ಪತ್ನಿ, ಇಬ್ಬರು ಮಕ್ಕಳು ಮತ್ತು ಸಹೋದರಿ ಪ್ರಿಯಾ ದತ್ ಅವರೊಂದಿಗೆ ಊಟಕ್ಕೆ ಬಂದಿದ್ದರು. ಈ ವೇಳೆ ಇಡೀ ಕುಟುಂಬ ಕ್ಯಾಮರಾಮನ್ ನೋಡಿ ಪೋಸ್ ಕೊಟ್ಟಿತ್ತು.


 

28

ಛಾಯಾಗ್ರಾಹಕರನ್ನು ನೋಡಿ ಸಂಜಯ್ ದತ್ ಪುತ್ರಿ ಇಕ್ರಾ ದತ್ ನಾಚಿಕೆಪಡುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದು. ಪೋಟೋಗೆ ತಪ್ಪಿಸಿಕೊಂಡ ಸಂಜಯ್ ದತ್ ಪುತ್ರಿ ಅಮ್ಮ ಮಾನ್ಯತಾ ದತ್ ಅವರನ್ನು ಹಗ್‌ ಮಾಡಿದ್ದಾರೆ.

38

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಬ್ರಹ್ಮಾಸ್ತ್ರ ಚಿತ್ರದ ಶೂಟಿಂಗ್ ಮುಗಿಸಿ ಬನಾರಸ್ ನಿಂದ ವಾಪಸಾಗಿದ್ದಾರೆ. ಇಬ್ಬರೂ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಆಲಿಯಾ ಬಿಳಿ ಉಡುಗೆ ತೊಟ್ಟಿದ್ದರೆ, ರಣಬೀರ್ ಕಪ್ಪು ಶರ್ಟ್ ಮತ್ತು ಜೀನ್ಸ್‌ನಲ್ಲಿ ಕಾಣಿಸಿಕೊಂಡರು.

48

ಅಂಕಿತಾ ಲೋಖ್ಡೆ ತನ್ನ ಫ್ರೆಂಡ್ಸ್‌ ಎಂಜಾಯ್‌ ಮಾಡುತ್ತಿರುವುದು  ಕಂಡುಬಂದಿದೆ. ಈ ಸಮಯದಲ್ಲಿ, ಅವಳು ಶಾರಡ್‌  ಫ್ರಾಕ್‌ ಜೊತೆ ಉದ್ದವಾದ ಬೂಟುಗಳನ್ನು ಪೇರ್‌ ಮಾಡಿಕೊಂಡಿದ್ದರು. ತನ್ನ ಸ್ನೇಹಿತರೊಂದಿಗೆ ಕ್ಯಾಮರಾಮನ್‌ಗೆ ಪೋಸ್ ಕೂಡ ನೀಡಿದ್ದಾರೆ ಅಂಕಿತಾ.

58

ಶನಯಾ ಕಪೂರ್ ತನ್ನ ತಾಯಿ ಮಹೀಪ್ ಕಪೂರ್ ಜೊತೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಶಾನಯಾ ತುಂಬಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರು. ಧರ್ಮ ಪ್ರೊಡಕ್ಷನ್ಸ್‌ನ ಬೇಧಡಕ್ ಚಿತ್ರದ ಮೂಲಕ ಅವರು ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

68

ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ  ಕರಿಷ್ಮಾ ಕಪೂರ್ ಮೇಲಿನಿಂದ ಕೆಳಗೆ ವರೆಗೆ ಕವರ್‌ ಆಗಿದ್ದರು. ಅವರು ತನ್ನ ಮುಖವನ್ನು ಕ್ಯಾಪ್ ಮತ್ತು ಮಾಸ್ಕ್‌ನಿಂದ ಮುಚ್ಚಿದರು. ಅಷ್ಟೇ ಅಲ್ಲ, ಛಾಯಾಗ್ರಾಹಕರನ್ನು ಆವಾಯ್ಡ್‌ ಮಾಡುವುದು ಕಂಡುಬಂದಿದೆ.

78

ರಾಜ್‌ಕುಮಾರ್ ರಾವ್ ಅವರು ಪತ್ನಿ ಪತ್ರಲೇಖಾ ಅವರ ಜೊತೆ ಡಿನ್ನರ್ ಡೇಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಯಾಮರಾಮನ್‌ಗೆ ಜೋಡಿ ರೊಮ್ಯಾಂಟಿಕ್ ಪೋಸ್ ಕೊಟ್ಟಿದೆ. ಕೆಲ ತಿಂಗಳ ಹಿಂದೆ ರಾಜ್‌ಕುಮಾರ್-ಪತ್ರಲೇಖಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

88

ವಿಮಾನ ನಿಲ್ದಾಣದಲ್ಲಿ ಸ್ಪಾಟ್‌ ಆದ  ಕಂಗನಾ ರಣಾವತ್ ಗುಲಾಬಿ ಬಣ್ಣದ ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಕಳೆದ ರಾತ್ರಿ ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ಅವರು ರಾಂಪ್ ವಾಕ್ ಮಾಡಿದ್ದಾರೆ. ಈ ದಿನಗಳಲ್ಲಿ ಕಂಗನಾ ಏಕ್ತಾ ಕಪೂರ್ ಅವರ ರಿಯಾಲಿಟಿ ಶೋ ಲಾಕ್ ಅಪ್ ಅನ್ನು ಹೋಸ್ಟ್ ಮಾಡುತ್ತಿದ್ದಾರೆ. ಅದೇ ಸಮಯದಲ್ಲಿ, ಸೋಫಿ ಚೌಧರಿ ಕೂಡ ವಿಮಾನ ನಿಲ್ದಾಣದಲ್ಲಿ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡರು.

click me!

Recommended Stories