ತಾಯಿ, ಮೊದಲ ಪತ್ನಿಗೂ ಇತ್ತು ಕ್ಯಾನ್ಸರ್, ಈಗ ಸಂಜೂನನ್ನೂ ಬಿಡಲಿಲ್ಲ..!

Suvarna News   | Asianet News
Published : Aug 12, 2020, 05:58 PM ISTUpdated : Aug 13, 2020, 11:32 AM IST

ನಟ ಸಂಜಯ್ ದತ್ ಆರೋಗ್ಯದ ಬಗ್ಗೆ ಈ ದಿನಗಳಲ್ಲಿ ಚರ್ಚೆಯಾಗುತ್ತಿತ್ತು. ಈಗ ಅವರಿಗೆ ಮೂರನೇ ಹಂತದ ಲಂಗ್‌ ಕ್ಯಾನ್ಸರ್ ಇದೆ ಎಂಬ ಸುದ್ದಿ ಹೊರಬಂದಿದೆ. ಇತ್ತೀಚೆಗೆ, 61 ವರ್ಷದ ನಟ ವೈದ್ಯಕೀಯ ಚಿಕಿತ್ಸೆಗಾಗಿ ಕೆಲಸದಿಂದ ವಿರಾಮ ತೆಗೆದುಕೊಳ್ಳುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಈ  ಕಾಯಿಲೆ ಬಗ್ಗೆ ತಿಳಿದ ಕೂಡಲೇ, ಸಂಜಯ್ ದತ್ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ ಎಂದು ವರದಿಗಳು ಹೇಳುತ್ತಿವೆ.  

PREV
18
ತಾಯಿ, ಮೊದಲ ಪತ್ನಿಗೂ ಇತ್ತು ಕ್ಯಾನ್ಸರ್, ಈಗ ಸಂಜೂನನ್ನೂ ಬಿಡಲಿಲ್ಲ..!

'ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಸಂಜಯ್ ದತ್‌ಗೆ ಶ್ವಾಸಕೋಶದ ಕ್ಯಾನ್ಸರ್ ಎಂದು ಗುರುತಿಸಲಾಗಿದೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತೇನೆ' ಎಂದು ಜನಪ್ರಿಯ ಮನರಂಜನಾ ಪತ್ರಕರ್ತ ಕೋಮಲ್ ನಹ್ತಾ  ಟ್ವೀಟ್ ಮಾಡಿದ್ದಾರೆ. 

28

2-3 ದಿನಗಳ ಹಿಂದೆ ಸಂಜಯ್ ದತ್ ಉಸಿರಾಟದ ತೊಂದರೆ ಕಾರಣದಿಂದ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೋನಾ ರಿಪೋರ್ಟ್‌ ನೆಗೆಟಿವ್‌ ಬಂದಿದ್ದು  ಸಂಜಯ್ ಚೇತರಿಸಿಕೊಂಡು ಸೋಮವಾರ ಮನೆಗೆ ಮರಳಿದ್ದಾರೆ.

38

ಮಂಗಳವಾರ, ಮನೆಗೆ ಹಿಂದಿರುಗಿದ ಒಂದು ದಿನದ ನಂತರ, ಅವರು ದೊಡ್ಡ ನಿರ್ಧಾರವನ್ನು ತೆಗೆದುಕೊಂಡು   ಮಾಹಿತಿಯನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.  

48

ಆರೋಗ್ಯ ಕಾರಣಗಳಿಂದಾಗಿ ಸ್ವಲ್ಪ ಸಮಯದವರೆಗೆ ಕೆಲಸದಿಂದ ವಿರಾಮ ತೆಗೆದುಕೊಳ್ಳುತ್ತಿದ್ದಾರೆ ಎಂದು ಸಂಜಯ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದರು. 'ಹಲೋ ಗೆಳೆಯರೇ, ವೈದ್ಯಕೀಯ ಚಿಕಿತ್ಸೆಯಿಂದಾಗಿ ನಾನು ನನ್ನ ಕೆಲಸದಿಂದ ಸ್ವಲ್ಪ ಸಮಯ ವಿರಾಮ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಕುಟುಂಬ ಮತ್ತು ನನ್ನ ಸ್ನೇಹಿತರು ನನ್ನೊಂದಿಗಿದ್ದಾರೆ. ಯೋಚನೆ ಮಾಡಬೇಡಿ ಮತ್ತು ಅನಗತ್ಯವಾಗಿ ಯಾವುದನ್ನೂ ಯೋಚಿಸಬೇಡಿ ಎಂದು ನನ್ನ ಹಿತೈಷಿಗಳಲ್ಲಿ ಹೇಳಲು ಬಯಸುತ್ತೇನೆ. ನಿಮ್ಮ ಪ್ರೀತಿ ಮತ್ತು ಪ್ರಾರ್ಥನೆಯೊಂದಿಗೆ ನಾನು ಶೀಘ್ರದಲ್ಲೇ ಮರಳುತ್ತೇನೆ' ಎಂಬ ಮೇಸೆಜ್‌ ಪೋಸ್ಟ್‌ ಮಾಡಿದ್ದರು ಸಂಜು ಬಾಬಾ.

58

ಆಸ್ಪತ್ರೆಯಿಂದ ಸಹ ಆರೋಗ್ಯದ ಬಗ್ಗೆ ಸಂಜಯ್  ಟ್ವೀಟ್ ಮಾಡಿದ್ದಾರೆ. 'ನಾನು ಪ್ರಸ್ತುತ ವೈದ್ಯರ ಮೇಲ್ವಿಚಾರಣೆಯಲ್ಲಿದ್ದೇನೆ ಮತ್ತು ನನ್ನ ಕೋವಿಡ್ -19 ವರದಿ ನೆಗೆಟಿವ್ ಎಂದು ಎಲ್ಲರಿಗೂ ಹೇಳಲು ಬಯಸುತ್ತೇನೆ. ಲೀಲಾವತಿ ಆಸ್ಪತ್ರೆಯ ವೈದ್ಯರು, ದಾದಿಯರು ಮತ್ತು ಎಲ್ಲಾ ಸಿಬ್ಬಂದಿಗಳ ಸಹಾಯದಿಂದ ನಾನು ಒಂದು ಅಥವಾ ಎರಡು ದಿನಗಳಲ್ಲಿ ನನ್ನ ಮನೆಗೆ ತಲುಪುತ್ತೇನೆ. ಆಶೀರ್ವಾದ ಮತ್ತು ಶುಭಾಶಯಗಳಿಗಾಗಿ ಎಲ್ಲರಿಗೂ ಧನ್ಯವಾದಗಳು' ಎಂದು ಅವರು ಬರೆದಿದ್ದರು.

68

ಸಂಜಯ್ ದತ್ ಅವರ ತಾಯಿ ಖ್ಯಾತ ನಟಿ ನರ್ಗಿಸ್ ತಮ್ಮ 51 ನೇ ವಯಸ್ಸಿನಲ್ಲಿ ಕ್ಯಾನ್ಸರ್‌ನಿಂದ ನಿಧನರಾದರು. ಅವರಿಗೆ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಇತ್ತು. ಇದರ ನಂತರ, ಅವರು ಸ್ವಲ್ಪ ಸಮಯದವರೆಗೆ ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆದು ಭಾರತಕ್ಕೆ ಹಿಂದಿರುಗುವಾಗ, ಅವರ ಆರೋಗ್ಯವು ಮತ್ತಷ್ಟು ಹದಗೆಟ್ಟಿತು.

78

ನಂತರ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಅವರು ಮೇ 02, 1981 ರಂದು ಕೋಮಾಕ್ಕೆ ಹೋದರು ಮತ್ತು ಮರುದಿನ ಅಂದರೆ 03 ಮೇ 1981 ರಂದು ನಿಧನರಾದರು.

88

ಸಂಜಯ್ ದತ್ ಅವರ ಮೊದಲ ಪತ್ನಿ ರಿಚಾ ಶರ್ಮಾ ಕೂಡ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ. ಅವರು ಬ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿದ್ದರು. 1987 ರಲ್ಲಿ ನಟನನ್ನು ವಿವಾಹವಾದ ರಿಚಾಗೆ ಲಂಡನ್‌ನಲ್ಲಿ ದೀರ್ಘಕಾಲದವರೆಗೆ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿ 1996 ರಲ್ಲಿ  ನಿಧನರಾದರು.

click me!

Recommended Stories