ಸಿಗರೇಟ್ ಇಲ್ಲಾಂದ್ರೆ ಆಗೋದೇ ಇಲ್ಲ, ಇವರೇ ನೋಡಿ ಬಾಲಿವುಡ್‌ನ ಚೈನ್ ಸ್ಮೋಕರ್ಸ್

Suvarna News   | Asianet News
Published : Aug 12, 2020, 05:14 PM IST

ಧೂಮಪಾನ ಆರೋಗ್ಯಕ್ಕೆ ಹಾನಿಕಾರ. ಆದರೂ ಇದನ್ನು ಚಟವಾಗಿ ಅಂಟಿಸಿಕೊಂಡವರ ಸಂಖ್ಯೆಗೇನು ಕಮ್ಮಿಲ್ಲ. ಈ ಪಟ್ಟಿಯಲ್ಲಿ ಹಲವು ಸೆಲೆಬ್ರೆಟಿಗಳೂ ಇದ್ದಾರೆ. ಅವರಲ್ಲಿ ಕೆಲವರು ಸತತ ಪ್ರಯತ್ನದ ನಂತರ ಈ ಅಭ್ಯಾಸವನ್ನು ತ್ಯಜಿಸಿದ್ದಾರೆ. ಆದರೆ ಇನ್ನೂ ಕೆಲವು ಬಾಲಿವುಡ್‌ನ  ಚೈನ್ ಸ್ಮೋಕರ್‌ಗಳಿಗೆ ಧೂಮಪಾನವನ್ನು ತ್ಯಜಿಸಲು ಸಾಧ್ಯವಾಗುತ್ತಿಲ್ಲ. ಆವಾರ್ಯಾರು?  

PREV
17
ಸಿಗರೇಟ್ ಇಲ್ಲಾಂದ್ರೆ ಆಗೋದೇ ಇಲ್ಲ, ಇವರೇ ನೋಡಿ ಬಾಲಿವುಡ್‌ನ ಚೈನ್ ಸ್ಮೋಕರ್ಸ್

ಮಾಜಿ ಮಿಸ್ ಯೂನಿವರ್ಸ್ ಸುಷ್ಮಿತಾ ಸೇನ್ ಚೈನ್ ಸ್ಮೋಕರ್‌. ವರದಿಗಳ ಪ್ರಕಾರ, ಸುಷ್ಮಿತಾ ದೀರ್ಘಕಾಲದಿಂದ ಧೂಮಪಾನವನ್ನು ತ್ಯಜಿಸಲು ಪ್ರಯತ್ನಿಸುತ್ತಿದ್ದಾರೆ.

27

ಶಾರುಖ್ ಖಾನ್ ಕೆಲವು ಸಿನಿಮಾದಲ್ಲಿ ಕಾಣುವಂತೆ ನಿಜ ಜೀವನದಲ್ಲಿ  ಕೂಡ ಭಾರೀ ಧೂಮಪಾನಿ. ಅವರು ಸುಮಾರು 100 ಸಿಗರೇಟ್ ಸೇದುತ್ತಾರೆ ಹಾಗೂ ಆಹಾರವನ್ನು  ಸೇವಿಸಲು ಸಹ ಮರೆತಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಕಿಂಗ್‌ ಖಾನ್‌.

37

ರಣಬೀರ್ ಕಪೂರ್ ತನ್ನ 15 ನೇ ವಯಸ್ಸಿನಿಂದಲೇ ಸಿಗರೇಟ್‌ ಚಟ ಅಂಟಿಸಿಕೊಂಡಿದ್ದಾರೆ. ರಣಬೀರ್ ಶಾಟ್‌ಗಳ ನಡುವೆ ಸಿಗರೇಟ್ ಸೇದಲು ಬ್ರೇಕ್‌ ತೆಗೆದುಕೊಳ್ಳುವುದರಿಂದ ಅವರ ನಿರ್ದೇಶಕರು ಕಿರಿಕಿರಿಗೊಂಡಿದ್ದಾರೆ ಎಂದು ವರದಿಗಳು ಹೇಳುತ್ತವೆ.

47

ಹಿಂದೆ ಅಜಯ್ ದೇವ್‌ಗನ್ ಸಹ ಚೈನ್ ಸ್ಮೋಕರ್‌ ಆಗಿದ್ದರು. ಆದರೆ ಅವರು ತಮ್ಮ ಮಕ್ಕಳಾದ ಯುಗ್ ಮತ್ತು ನೈಸಾಗಾಗಿ ಆರೋಗ್ಯಕರ ಜೀವನವನ್ನು ನಡೆಸಲು ಧೂಮಪಾನವನ್ನು ತ್ಯಜಿಸಿದರು.

57

ಕಂಗನಾ ರಣಾವತ್‌ 19 ವರ್ಷದವಳಿದ್ದಾಗ ಧೂಮಪಾನವನ್ನು ಪ್ರಾರಂಭಿಸಿದರು ಎಂದು ಬಹಿರಂಗಪಡಿಸಿದರು. ನಂತರ, ಚೈನ್ ಸ್ಮೋಕರ್‌ ಆದ ಕಂಗನಾ ದಿನಕ್ಕೆ 10-12 ಸಿಗರೇಟ್ ಸೇದುತ್ತಿದ್ದರು.

67

ರಾಣಿ ಮುಖರ್ಜಿ ತಾನು ಚೈನ್ ಸ್ಮೋಕರ್‌ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದು ಧೂಮಪಾನವನ್ನು ತ್ಯಜಿಸುವುದು ಅಸಾಧ್ಯವೆಂದು ಸಹ ಬಹಿರಂಗಪಡಿಸಿದರು.

77

ಸಂಜಯ್ ದತ್ ಕೂಡ ಭಾರೀ ಧೂಮಪಾನಿ. ಜೈಲು ಶಿಕ್ಷೆಯ ಅವಧಿಯಲ್ಲಿ ಜೈಲಿನಲ್ಲಿ ಧೂಮಪಾನ ಮಾಡಲು ಸಹ ಅವರಿಗೆ ಅವಕಾಶ ನೀಡಲಾಯಿತು.

click me!

Recommended Stories