ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ತನ್ನ 35 ನೇ ಹುಟ್ಟುಹಬ್ಬದ ಸಂಭ್ರಮ (ಆಗಸ್ಟ್ 11) .
ಈ ನಟಿ ಬಹ್ರೇನ್‌ನಲ್ಲಿ ಹುಟ್ಟಿ ಶ್ರೀಲಂಕಾದಲ್ಲಿ ಬೆಳೆದಿದ್ದಾರೆ ಎಂದು ವರದಿಗಳು ತಿಳಿಸಿವೆ.
ನಟಿ ಬಹುಸಾಂಸ್ಕೃತಿಕ ಕುಟುಂಬದಿಂದ ಬಂದಿದ್ದು, ಅವರ ಕುಟುಂಬದ ಸದಸ್ಯರು ಶ್ರೀಲಂಕಾ, ಕೆನಡಾ ಮತ್ತು ಮಲೇಷ್ಯಾದಂತಹ ದೇಶಗಳಿಂದ ಬಂದವರು.
ಆಸ್ಟ್ರೇಲಿಯಾದಲ್ಲಿ ಮಾಸ್ ಕಮ್ಯುನಿಕೇಷನ್ ಪದವಿ ಪಡೆದ ಜಾಕ್ವೆಲಿನ್ ಲಂಕಾದಲ್ಲಿ ಟೆಲಿವಿಷನ್ ಚಾನೆಲ್‌ನಲ್ಲಿ ವರದಿಗಾರರಾಗಿ ಕೆಲಸ ಮಾಡಿದರು.
ರಿಪೋರ್ಟರ್ ಕೆರಿಯರ್ ನಂತರ ಮಾಡೆಲಿಂಗ್ ಪ್ರಾರಂಭಿಸಿದರು. ಕ್ರಮೇಣ ನಟನೆಯಲ್ಲಿ ತೊಡಗಿ ಬಾಲಿವುಡ್ ತಲುಪಿದರು
2006 ರಲ್ಲಿ ಮಿಸ್ ಶ್ರೀಲಂಕಾ ಯೂನಿವರ್ಸ್ ಕಿರೀಟವನ್ನು ಗೆದ್ದರು.
ಜಾಕಿಯ ಮೊದಲ ಸಿನಿಮಾ ಸುಜೋಯ್ ಘೋಷ್‌ರ ಅಲ್ಲಾದೀನ್. ರಿತೇಶ್ದೇಶ್ಮುಖ್ ಜೊತೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.
ಜಾಕ್ವೆಲಿನ್‌ರ ಫಸ್ಟ್ ಬಾಯ್‌ಫ್ರೆಂಡ್ ಶೇಖ್ ರಶೀದ್ ಬಿನ್ ಖಲೀಫಾ ಅಲ್ ಖಲೀಫಾ. ಅವರು ಬಹ್ರೇನಿ ರಾಜಮನೆತನದ ಸದಸ್ಯ ಮತ್ತು ಪೈಂಟರ್ ಆಗಿದ್ದಾರೆ.
ಫಿಟ್ನೆಸ್ ಪ್ರೇಮಿ ಜಾಕ್ವೆಲಿನ್ ಜಿಮ್ ಮತ್ತು ಮನೆ ಎರಡರಲ್ಲೂ ವರ್ಕೌಟ್ ಮಾಡುತ್ತಾರೆ.
ರೇಸ್ 3' ಮತ್ತು 'ಕಿಕ್' ಚಿತ್ರಗಳಲ್ಲಿ ಕೆಲಸ ಮಾಡಿದಶ್ರೀಲಂಕಾದ ಚೆಲುವೆಜಾಕ್ವೆಲಿನ್ ಫರ್ನಾಂಡೀಸ್.