ಬಾಲಿವುಡ್‌ನ ಪ್ರಖ್ಯಾತ ಸ್ಟಾರ್ ನಟ ಸಂಜಯ್ ದತ್ ವಿವಿಧ ಕಾರಣಗಳಿಂದ ಸುದ್ದಿಯಲ್ಲಿರುತ್ತಾರೆ. ಇದೀಗ ಅವರ ಮೂರನೇ ಪತ್ನಿ ಮಾನ್ಯತಾಗೆ ನೀಡಿದ್ದ ನೂರು ಕೋಟಿ ಬೆಳೆಯ ಫ್ಲ್ಟ್ಯಾಟ್ಸ್ ಮರಳಿಸಿದ್ದು ಸುದ್ದಿಯಾಗಿತ್ತು. ಇದೀಗ ಸಂಜಯ್ ದತ್ ಮಗಳು ತ್ರಿಶಲಾ ಇನ್‌ಸ್ಟ್ಗಾಗ್ರಾಮ್ ಪೋಸ್ಟ್‌ನೊಂದು ಸದ್ದು ಮಾಡುತ್ತಿದೆ.
undefined
ತನ್ನ ಎಕ್ಸ್ ಬಾಯ್‌ಫ್ರೆಂಡ್ ತನ್ನನ್ನು ಕಸದಂತೆ ನೋಡಿಕೊಂಡಿದ್ದನ್ನು ನೆನಪಿಸಿಕೊಂಡಿದ್ದಾರೆ. ವ್ಯಕ್ತಿಯೊಬ್ಬನೊಂದಿಗೆ ಸಂಬಂಧದಲ್ಲಿದ್ದಾಗ, ಆತ ನಡೆಯಿಸಿಕೊಂಡ ರೀತಿಗೆ ದುಃಖ ವ್ಯಕ್ತಪಡಿಸಿದ್ದಾರೆ.
undefined
ವೃತ್ತಿಯಲ್ಲಿ ಮನಃಶಾಸ್ತ್ರಜ್ಞೆ ಆಗಿರುವ ತ್ರಿಶಲಾ, ತಮ್ಮ ಆಸ್ಕ್ ಮಿ ಎನಿಥಿಂಗ್ ಸೆಷನ್‌ನಲ್ಲಿ ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ತಂದೆ, ಮಲತಾಯಿ, ಅವರ ಮಕ್ಕಳು...ಹೀಗೆ ಎಲ್ಲರ ಬಗ್ಗೆಯೂ ಹಲವು ವಿಷಯಗಳನ್ನು ಹಂಚಿಕೊಂಳ್ಳುವ ಈಕೆ ಇದೀಗ ಬಾಯ್‌ಫ್ರೆಂಡ್ ವರ್ತನೆ ಬಗ್ಗೆ ನೋವು ತೋಡಿಕೊಂಡಿದ್ದಾರೆ.
undefined
ಹಲವು ಕಾರಣಗಳಿಗಾಗಿ ಬಾಯ್‌ಫ್ರೆಂಡ್ ಜೊತೆ ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇರಲು ತ್ರಿಶಲಾ ನಿರ್ಧರಿಸಿದರು. ಮೊದ ಮೊದಲು ಎಲ್ಲವೂ ಸರಿಯೇ ಇತ್ತು. ಬರ ಬರುತ್ತಾ ಸಂಬಂಧ ಸಿಕ್ಕಾಪಟ್ಟೆ ಹದಗೆಟ್ಟಿತು ಎಂದು ಸಂಜಯ್ ಮಗಳು ರಿವೀಲ್ ಮಾಡಿದ್ದಾರೆ.
undefined
ಬಹಳ ಸ್ನೇಹಿತರಿದ್ದರಂತೆ ತ್ರಿಶಲಾಗೆ. ಬರ ಬರುತ್ತಾ ಎಲ್ಲರೊಂದಿಗೆ ಅನಿವಾರ್ಯವಾಗಿ ಸಂಪರ್ಕ ಕಡಿದುಕೊಳ್ಳಬೇಕಾಯಿತು. ಬಾಯ್‌ಫ್ರೆಂಡ್‌ಗೆ ಏನೋ ಪೊಸೆಸಿವ್‌ನೆಸ್, ಅನುಮಾನ. ರಗಳೆಯೇ ಬೇಡವೆಂದು ಎಲ್ಲಿಗೇ ಹೋದೂರೂ ಮೆಸೇಜ್ ಮಾಡುತ್ತಿದ್ದೆ. ಹೊರಟಾಗಲೂ ಮೆಸೇಜ್ ಮಾಡುತ್ತಿದ್ದೆ. ಆದರೂ, ಸಣ್ಣ ಪುಟ್ಟ ವಿಷಯಗಳು ಕಿರಿ ಕಿರಿ ಇದ್ದೇ ಇರುತ್ತಿತ್ತು.
undefined
'ಬಾಯ್‌ಫ್ರೆಂಡ್‌ನೊಂದಿಗಿದ್ದನಿಷ್ಠೆಯನ್ನು ಸಾಬೀತುಪಡಿಸಲು ಸ್ನೇಹಿತರನ್ನು ಭೇಟಿಯಾಗುವುದನ್ನು ನಿಲ್ಲಿಸಿದೆ. ಆದರೂಅವನು ಮಾತ್ರ ಅವನ ಜೀವನದಲ್ಲಿ ಎಲ್ಲವೂ ನಾರ್ಮಲ್ ಆಗಿಯೇ ಇರುವಂತೆ ನೋಡಿಕೊಂಡ.ಸ್ನೇಹಿತರೊಂದಿಗೆ ಹೊರಗೆ ಹೋಗುತ್ತಿದ್ದ. ಅಕಸ್ಮಾತ್ ನಾನು ಮನೆ ತಲುಪುವುದು ಸ್ವಲ್ಪ ತಡವಾದರೂ, ಚುಚ್ಚಿ ಚುಚ್ಚಿ ಮಾತನಾಡುತ್ತಿದ್ದ ಎಂದಿದ್ದಾಳೆ ತ್ರಿಶಲಾ.
undefined
ಬರ ಬರುತ್ತಾ ಸಂಬಂಧವನ್ನು ನಿಭಾಯಿಸುವುದು ದೊಡ್ಡ ತಲೆ ನೋವಾಯಿತು. ತನ್ನ ಮೇಲಿನ ವಿಶ್ವಾಸವೇ ಕುಂದ ತೊಡಗಿತು. ನಾನ್ಯಾಕೆ ತನ್ನ ಜೀವನದಲ್ಲಿ ಈ ಬಾಯ್‌ಫ್ರೆಂಡ್ ಇರಲು ಅವಕಾಶ ಮಾಡಿಕೊಟ್ಟೆ ಎಂಬುವುದು ಚುಚ್ಚಲು ಶುರುವಾಯಿತು. ಅಂದೇ ಬೇರೆಯಾಗಲು ಗಟ್ಟಿ ನಿರ್ಧಾರ ಮಾಡಿದೆ ಎನ್ನುತ್ತಾರೆ ಕೆಜಿಎಫ್ ನಟನ ಮಗಳು.
undefined
ಸಂಜಯ್ ದತ್ ಅವರ ಮೊದಲ ಪತ್ನಿ ರಿಚಾ ಶರ್ಮಾ ಅವರ ಪುತ್ರಿ ತ್ರಿಶಲಾ. ರಿಚಾ 1996ರಲ್ಲಿ ಕ್ಯಾನ್ಸರ್‌ನಿಂದ ತೀರಿಕೊಂಡಾಗ ಆಕೆಗಿನ್ನೂಕೇವಲ 8 ವರ್ಷ. ತಾಯಿಯ ಮರಣದ ನಂತರ ಚಿಕ್ಕಮ್ಮ ಅನ್ನಾಳೊಂದಿಗಿದ್ದಾರೆತ್ರಿಶಲಾ.
undefined