ಇರ್ಫಾನ್ ಖಾನ್ - ರಿಷಿ ಕಪೂರ್: ಕ್ಯಾನ್ಸರ್‌ಗೆ ಬಲಿಯಾದ ಸೆಲೆಬ್ರೆಟೀಸ್‌

First Published | Feb 6, 2021, 9:43 AM IST

ಕ್ಯಾನ್ಸರ್ ರೋಗವನ್ನು ಪತ್ತೆ ಹಚ್ಚುವುದರಿಂದ ಚಿಕಿತ್ಸೆಯವರೆಗೆ, ತುಂಬಾ ಕಷ್ಷ ಪ್ರಕ್ರಿಯೆ. ಕೆಲವರು ಇದರ ವಿರುದ್ಧ ಹೋರಾಡಿ ಜಯಗಳಿಸಿದ್ದಾರೆ. ಆದರೆ ಇನ್ನೂ ಕೆಲವರಿಗೆ ಸಾಧ್ಯವಾಗಲಿಲ್ಲ. ಚಿಕಿತ್ಸೆಯ ನಂತರವೂ ಕ್ಯಾನ್ಸರ್‌ ಕಾರಣದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಕೆಲವು ಪ್ರಸಿದ್ಧ ವ್ಯಕ್ತಿಗಳು ಈ ರೋಗಕ್ಕೆ ಬಲಿಯಾಗಿದ್ದಾರೆ. ಕಳೆದ ವರ್ಷ ಕೊನೆಯುಸಿರೆಳೆದ ರಿಷಿ ಕಪೂರ್ ಹಾಗೂ ಇರ್ಫಾನ್ ಖಾನ್ ಸೇರಿ ಅನೇಕರು ಈ ಪಟ್ಟಿಗೆ ಸೇರುತ್ತಾರೆ.

ಫ್ರೆಬವರಿ 5ನ್ನು ವಿಶ್ವ ಕ್ಯಾನ್ಸರ್ ದಿನವಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಕ್ಯಾನ್ಸರ್‌ಗೆ ಬಲಿಯಾದ ಸೆಲೆಬ್ರೆಟಿಗಳ ಪಟ್ಟಿ ಇಲ್ಲಿದೆ.
undefined
ರಿಷಿ ಕಪೂರ್:ಹಿರಿಯ ನಟ ರಿಷಿ ಕಪೂರ್ ಹಲವು ವರ್ಷಗಳಿಂದ ಕ್ಯಾನ್ಸರ್ ರೋಗದ ವಿರುದ್ಧ ಹೋರಾಟ ನಡೆಸಿದ ನಂತರ 2020ರಲ್ಲಿ ಪ್ರಾಣ ಕಳೆದುಕೊಂಡರು. ಬ್ಲೆಡ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರಿಷಿ ಏಪ್ರಿಲ್ 30, 2020ರಂದು ಕೊನೆಯುಸಿರೆಳೆದರು.
undefined
Tap to resize

ಫಿರೋಜ್ ಖಾನ್:ಶ್ವಾಸಕೋಶದ ಕ್ಯಾನ್ಸರ್‌ನಿಂದ ಫಿರೋಜ್ ಖಾನ್ತಮ್ಮ 69ನೇ ವಯಸ್ಸಿನಲ್ಲಿ ನಿಧನರಾದರು. ಅವರನ್ನು ಬೆಂಗಳೂರಿನಲ್ಲಿ ತಾಯಿಸಮಾಧಿಯ ಬಳಿಯೇ ಸಮಾಧಿ ಮಾಡಲಾಯಿತು.
undefined
ಇರ್ಫಾನ್ ಖಾನ್:ಕ್ಲಾಸಿಕ್ ನಟ 2020ರ ಏಪ್ರಿಲ್‌ನಲ್ಲಿ ನಿಧನರಾದರು. ನಟ ಎರಡು ವರ್ಷಗಳ ಕಾಲ ತುಂಬಾ ಅಪರೂಪದ ಕ್ಯಾನ್ಸರ್, ನ್ಯೂರೋಎಂಡೋಕ್ರೈನ್ ಟ್ಯೂಮರ್‌ನೊಂದಿಗೆ ಹೋರಾಡಿದರು.
undefined
ವಿನೋದ್ ಖನ್ನಾ:ವಿನೋದ್ ಖನ್ನಾ ಏಪ್ರಿಲ್ 27, 2017ರಂದು ಬ್ಲ್ಯಾಡರ್‌ ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದರು.
undefined
ನರ್ಗಿಸ್ ದತ್:ಪ್ಯಾನ್‌ಕ್ರಿಯೇಟಿಕ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟಿ ನರ್ಗಿಸ್ ದತ್ ಅವರ ಮಗ ಸಂಜಯ್ ದತ್‌ರ ಚೊಚ್ಚಲ ಚಿತ್ರದ ಬಿಡುಗಡೆಗೆ ಮೂರು ದಿನಗಳಿರುವಾಗ, 1981ರಲ್ಲಿ ನಿಧನರಾದರು.
undefined
ಬಾಬ್ ಮಾರ್ಲೆ:ಕೇವಲ 31 ವರ್ಷದ ಸೂಪರ್‌ಸ್ಟಾರ್ ಬಾಬ್ ಮಾರ್ಲೆ 1981 ರ ಮೇ 11 ರಂದು ಮೆಲನೋಮಾದಿಂದ ನಿಧನರಾದರು.
undefined
ಪೌಲ್‌ ನ್ಯೂಮ್ಯಾನ್‌:ತಮ್ಮ 83ನೇ ವಯಸ್ಸಿನಲ್ಲಿ ಪೌಲ್‌ ನ್ಯೂಮ್ಯಾನ್‌, ಸೆಪ್ಟೆಂಬರ್‌ 26 2008ರಂದು ನಿಧನರಾದರು. ಇವರು ಲಂಗ್‌ ಕ್ಯಾನ್ಸರ್‌ಗೆ ಬಲಿಯಾದರು.
undefined
ಲಿಂಡಾ ಮೆಕ್ಕರ್ಟ್ನಿ: (Linda McCartney)ಸಂಗೀತಗಾರ ಲಿಂಡಾ ಸ್ತನ ಕ್ಯಾನ್ಸರ್‌ನಿಂದ ಏಪ್ರಿಲ್ 17, 1998ರಂದು ನಿಧನರಾದರು. ಆಗ ಆಕೆಗೆ ಕೇವಲ 58 ವರ್ಷ.
undefined

Latest Videos

click me!