ರಂಗೀಲಾ ನಟಿ ಊರ್ಮಿಳಾ ಪ್ರೀತಿಯಲ್ಲಿ ಹುಚ್ಚರಾಗಿದ್ದ ರಾಮ್ ಗೋಪಾಲ್ ವರ್ಮಾ!

First Published | Feb 6, 2021, 9:55 AM IST

ಬಾಲಿವುಡ್‌ನಲ್ಲಿ 'ಚಮ್ಮ ಚಮ್ಮಾ ಗರ್ಲ್' ಎಂದು ಪ್ರಸಿದ್ಧಿಯಾದ ಊರ್ಮಿಳಾ ಮಾತೋಂಡ್ಕರ್ ಅವರಿಗೆ 47 ವರ್ಷ. ಫೆಬ್ರವರಿ 4,1974ರಂದು ಮುಂಬೈನಲ್ಲಿ ಜನಿಸಿದ ಉರ್ಮಿಳಾ ಬಾಲ ಕಲಾವಿದೆಯಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಪ್ರಮುಖ ನಟಿಯಾಗಿ ಊರ್ಮಿಳಾ ಅವರ ಮೊದಲ ಚಿತ್ರ 'ನರಸಿಂಹ', ರಾಮ್ ಗೋಪಾಲ್ ವರ್ಮಾರ 'ರಂಗೀಲಾ' ಮೂಲಕ ಎಲ್ಲರ ಗಮನ ಸೆಳೆದರು. ಒಂದು ಕಾಲದಲ್ಲಿ, ರಾಮ್ ಗೋಪಾಲ್ ಮತ್ತು ಉರ್ಮಿಳಾರ ಸಂಬಂಧದ ಸುದ್ದಿ ತುಂಬಾ ಚರ್ಚೆಯಾಗಿತ್ತು. ರಾಮ್‌ಪ್ರತಿ ಚಿತ್ರದಲ್ಲೂ ಊರ್ಮಿಳಾ ಇರುತ್ತಿದ್ದರು.

ರಂಗೀಲಾ ಸಿನಿಮಾಕ್ಕೆ ಮೊದಲು, ರಾಮ್‌ಗೋಪಾಲ್ ವರ್ಮಾ 1992ರ ತೆಲುಗು ಚಿತ್ರ ಆಂಥಮ್, ಶ್ರೋಹಿ 1993ರಲ್ಲಿ 'ಗಾಯಮ್' ಸಿನಿಮಾದಲ್ಲಿ ಉರ್ಮಿಳಾಗೆ ಅವಕಾಶ ನೀಡಿದರು. ಉರ್ಮಿಳಾ ಬಗ್ಗೆ RVGಗೆ ತುಂಬಾ ಹುಚ್ತಿತ್ತು. ಅವರು ತಮ್ಮ ಪ್ರತಿಯೊಂದೂ ಚಿತ್ರದಲ್ಲಿಯೂ ಊರ್ಮಿಳಾರನ್ನು ತೆಗೆದುಕೊಳ್ಳುತ್ತಿದ್ದರು.
undefined
ಮುಂಬೈನ ಅಂಧೇರಿಯಲ್ಲಿರುವ ತನ್ನ ಕಚೇರಿಯಲ್ಲಿ ಒಂದು ಕೊಠಡಿಗೆ 'ಊರ್ಮಿಳಾ ಮಾತೋಂಡ್ಕರ್' ಎಂದು ಹೆಸರಿಟ್ಟಿದ್ದರು. ಇದೇ ಸಾಕು, ಊರ್ಮಿಳಾ ಮೇಲಿದ್ದ RGV ವ್ಯಾಮೋಹಕ್ಕೆ ಸಾಕ್ಷಿ.ರಾಮು ಅವರ ಆಫೀಸ್‌ನ ಗ್ರೌಂಡ್‌ ಫ್ಲೋರ್‌ನಲ್ಲಿ 15 ಕೊಠಡಿಗಳಿದ್ದು, ಅವುಗಳನ್ನು ಎಡಿಟಿಂಗ್‌, ಪೋಸ್ಟ್ ಪ್ರೊಡಕ್ಷನ್, ಸೌಂಡ್ ಡಿಪಾರ್ಟ್ಮೆಂಟ್‌ಗಾಗಿ ಬಳಸಲಾಗುತ್ತದೆ.
undefined
Tap to resize

ಆರ್‌ವಿಜಿ ಅವರ ಚಲನಚಿತ್ರಗಳಲ್ಲಿ ಮಾತ್ರ ಹೆಚ್ಚಾಗಿ ಮಾಡಿದ್ದರಿಂದ ಉರ್ಮಿಳಾ ಇತರೆ ಅನೇಕ ನಿರ್ದೇಶಕರೊಂದಿಗೆ ಕೆಲಸ ಮಾಡಲು ನಿರಾಕರಿಸಿದರು. ಬಾಲಿವುಡ್‌ನಲ್ಲಿ RGV ಅನೇಕರೊಂದಿಗೆ ಬೆರೆಯದ ಕಾರಣ ಉರ್ಮಿಳಾಗೆ ಸಹಜವಾಗಿ ಆಫರ್ಸ್ ಕಡಿಮೆಯಾಯಿತು. ಅವರ ವೃತ್ತಿಜೀವನದಲ್ಲಿ ಯಶಸ್ಸು ಕಾಣದಿರಲು ಇದೇ ಮುಖ್ಯ ಕಾರಣ.
undefined
ಉರ್ಮಿಳಾರ ಸಲುವಾಗಿಯೇ ಚಿತ್ರವೊಂದಕ್ಕೆ ಮಾಧುರಿ ದೀಕ್ಷಿತ್ ಅವರನ್ನೂ ತೆಗಿದೆದ್ದರಂತೆ ರಾಮ್ ಗೋಪಾಲ್ ವರ್ಮಾ. ತಮ್ಮ ಪ್ರತಿಯೊಂದೂ ಸಿನಿಮಾಗೂ ಊರ್ಮಿಳಾ ಇರಬೇಕೆಂಬ ಹಠ ಪ್ರತಿಭಾನ್ವಿನತ ನಿರ್ದೇಶಕನ ತಲೆಗೇರಿತ್ತು.
undefined
ಕ್ರಮೇಣ ಊರ್ಮಿಳಾ, ರಾಮ್ ಗೋಪಾಲ್ ವರ್ಮಾ ನಡುವೆಯೂ ಹೊಂದಾಣಿಕೆ ದೂರವಾಯಿತು. ನಿಧಾನವಾಗಿ ವರ್ಮಾರಿಂದ ಊರ್ಮಿಳಾ ದೂರವಾದರು. ಆದರೆ, ಬೇರೆ ನಿರೇದಶಕರೊಂದಿಗೆ ಸೇರಲೂ ಆಗದೇ ಜೀವನವನ್ನೇ ಹಾಳು ಮಾಡಿಕೊಂಡರು.
undefined
ಮಾರ್ಚ್ 3, 2016 ರಂದು, ಊರ್ಮಿಳಾ 9 ವರ್ಷ ಕಿರಿಯ ಕಾಶ್ಮೀರಿ ಉದ್ಯಮಿ ಮೊಹ್ಸಿನ್ ಅಖ್ತರ್ ಮಿರ್ ಅವರನ್ನು ಮದುವೆಯೂ ಆಗಿದ್ದರು ಊರ್ಮಿಳಾ.
undefined
ಮೊಹ್ಸಿನ್ ಜೋಯಾ ಅಖ್ತರ್ ನಿರ್ದೇಶನದ ಲಕ್ ಬೈ ಚಾನ್ಸ್‌ನಲ್ಲಿ ಕೆಲಸ ಮಾಡಿದ್ದಾರೆ ಇದರಲ್ಲಿ, ಅವರು ಫರ್ಹಾನ್ ಅಖ್ತರ್ ಅವರೊಂದಿಗೆ ಮಾಡೆಲ್‌ ಆಗಿ ಕಾಣಿಸಿಕೊಂಡರು.
undefined
ಕಾಶ್ಮೀರದ ವ್ಯಾಪಾರ ಕುಟುಂಬದಿಂದ ಬಂದ ಮೊಹ್ಸಿನ್ ಮಾಡೆಲ್ ಆಗಬೇಕೆಂಬ ಕನಸು ಕಂಡಿದ್ದರು. ಸೌರಭ್ ಸೇನ್‌ಗುಪ್ತಾ ಅವರ ಇಟ್ಸ್ ಮ್ಯಾನ್ಸ್ ವರ್ಲ್ಡ್ 'ಚಕ್ದೇಇಂಡಿಯಾ' ಮತ್ತು 'ಬಿ.ಎ' ಪಾಸ್ ಚಿತ್ರದಲ್ಲಿ ಅವರು ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.
undefined
ಊರ್ಮಿಳಾ ಬಹಳ ಸಮಯದಿಂದ ಸಿನಿಮಾದಿಂದ ದೂರವಾಗಿದ್ದಾರೆ. ಅವರು ಕೊನೆಯ ಬಾರಿಗೆ 2018ರಲ್ಲಿ 'ಬ್ಲ್ಯಾಕ್ಮೇಲ್' ನಲ್ಲಿ ಐಟಂ ನಂಬರ್‌ 'ಬೆವಾಫಾ ಬ್ಯೂಟಿ'ಯಲ್ಲಿ ಕಾಣಿಸಿಕೊಂಡರು.
undefined
ಬೇಡೆ ಘರ್ ಕಿ ಬೇಟಿ, ಡಕಾಯಿಟ್, ಮಿರಾಕಲ್, ದ್ರೋಹಿ, ಕನೂನ್, ರಂಗೀಲಾ, ಜುಡೈ, ರಾಸಾ, ಸತ್ಯ, ಮಾಸ್ಟ್, ಜಂಗ್ಲೀ, ತಹಜೀಬ್, ಏಕ್ ಹಸೀನಾ ಥಿ, ಸ್ಪೀಡ್ ಮುಂತಾದ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ .
undefined
2019ರ ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು,ಇತ್ತೀಚೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಶಿವಸೇನೆಯನ್ನು ಜಾಯಿನ್‌ ಆಗಿದ್ದಾರೆ ರಂಗೀಲಾ ಬೆಡಗಿ ಊರ್ಮಿಳಾ.
undefined

Latest Videos

click me!