98 ಸಾವಿರ ಹರಳು, 166 ದಿನ; ಸಂಗೀತ ಸಮಾರಂಭಕ್ಕೆ ಕಿಯಾರಾಗಾಗಿ ತಯಾರಿಸಲಾಗಿತ್ತು ವಿಶೇಷ ಲೆಹಂಗಾ

Published : Feb 24, 2023, 03:22 PM IST

ಸಂಗೀತ ಸಮಾರಂಭಕ್ಕೆ ಕಿಯಾರಾ ಅಡ್ವಾನಿ ಧರಿಸಿದ್ದ ಲೆಹಂಗಾದ ವಿಶೇಷತೆ 

PREV
16
98 ಸಾವಿರ ಹರಳು, 166 ದಿನ; ಸಂಗೀತ ಸಮಾರಂಭಕ್ಕೆ ಕಿಯಾರಾಗಾಗಿ ತಯಾರಿಸಲಾಗಿತ್ತು ವಿಶೇಷ ಲೆಹಂಗಾ

ಸಿನಿಮಾತಾರೆಯರ ಮದುವೆ ನೋಡುವುದೇ ಅಭಿಮಾನಿಗಳಿಗೆ ಸಂಭ್ರಮ. ಹೇಗೆ ತಯಾರಾಗಿರುತ್ತಾರೆ, ಹೇಗೆ ಕಾಣಿಸುತ್ತಾರೆ, ಆಭರಣ, ಡ್ರೆಸ್ ಹೀಗೆ ಎಲ್ಲಾ ವಿಚಾರಗಳಲ್ಲೂ ಕುತೂಹಲ ಹೆಚ್ಚಾಗಿರುತ್ತದೆ. ಅದರಂತೆ ನಟಿಯರು ಸಹ ತಮ್ಮ ಮದುವೆ ಡ್ರೆಸ್ ಅನ್ನು ಅಷ್ಟೆ ಅದ್ದೂರಿಯಾಗಿ, ವಿಶೇಷವಾಗಿ ತಯಾರಿಸುತ್ತಾರೆ. ಬಟ್ಟೆಗೆ ಕೋಟಿಗಟ್ಟೆಲೇ ಖರ್ಚು ಮಾಡುತ್ತಾರೆ. 
 

26

ಇತ್ತೀಚಿಗಷ್ಟೆ ಹಸೆಮಣೆ ಏರಿದ ಆತಿಯಾ ಶೆಟ್ಟಿ ಮತ್ತು ಕೆ ಎಲ್ ರಾಹುಲ್ ಹಾಗೂ ಕಿಯಾರಾ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಜೋಡಿಯ ಮದುವೆ ಡ್ರೆಸ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಕಿಯಾರಾ ಮದುವೆಯಲ್ಲಿ ಸುಂದರವಾಗಿ ಕಂಗೊಳಿಸುತ್ತಿದ್ದರು. 

36

ಇತ್ತೀಚಿಗಷ್ಟೆ ಫೆಬ್ರವರಿ 7 ರಂದು ಕಿಯಾರಾ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಹಸೆಮಣೆ ಏರಿದ್ದರು. ಜೈಪುರದ ಜೈಸಲ್ಮೇರ್‌ನಲ್ಲಿ ಇಬ್ಬರೂ ಹಸೆಮಣೆ ಏರಿದರು. ರಾಯಲ್ ವೆಡ್ಡಿಂಗ್ ನ ಸುಂದರ ಫೋಟೋಗಳನ್ನು ಇಬ್ಬರೂ ಶೇರ್ ಮಾಡುತ್ತಿದ್ದಾರೆ. ಸಿದ್ ಕಿಯಾರಾ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಕಿಯಾರಾ ಜೋಡಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.  

46

ಮದುವೆ, ಹಳದಿ, ಸಂಗೀತ ಸಮಾಂರಂಭದ ಫೋಟೋಗಳನ್ನು ಕಿಯಾರಾ ಮತ್ತು ಸಿದ್ಧಾರ್ಥ್ ಶೇರ್ ಮಾಡುತ್ತಿದ್ದಾರೆ. ಕಿಯಾರಾ ಮದುವೆ ಡ್ರೆಸ್ ಅನ್ನು ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಗೊಳಿಸಿದ್ದಾರೆ. 

56

ಮದುಮಗ ಸಿದ್ಧಾರ್ಥ್ ಧರಿಸಿದ್ದ ಸೇರ್ವಾನಿ ಸುಂದರವಾಗಿತ್ತು. ವಿಭಿನ್ನವಾಗಿ ಡಿಸೈನ್ ಮಾಡಿಸಲಾಗಿತ್ತು. ಶೇರ್ವಾನಿ ಮೇಲೆ ಥ್ರಡ್ ವರ್ಕ್ ಮಾಡಲಾಗಿತ್ತು. ವೆಲ್ವೆಟ್ ಶೇರ್ವಾನಿಯಾಗಿದ್ದು ಅದರ ಮೇಲೆ ಅಮೂಲ್ಯ Swarovski ಹರಳುಗಳಿಂದ ಡಿಸೈನ್ ಮಾಡಿಸಲಾಗಿತ್ತು.

66


ಇನ್ನು ಕಿಯಾರಾ ಲೆಹಂಗಾ ಬಗ್ಗೆ ಡಿಸೈನಲ್ ಮನೀಶ್ ಮಲ್ಹೋತ್ರಾ ಮಾಹಿತಿ ನೀಡಿದ್ದಾರೆ. ಕಿಯಾರಾ ಸಂಗೀತ ಸಮಾರಂಭಕ್ಕೆ ಧರಿಸಿದ್ದ ಬಟ್ಟೆಯನ್ನು ಡಿಸೈನ್ ಮಾಡಲು ಬರೋಬ್ಬರಿ  166 ದಿನಗಳು ಬೇಕಾಗಿದೆ ಎಂದು ಹೇಳಿದ್ದಾರೆ. ಅಷ್ಟೆಯಲ್ಲದೇ ಈ ಲೆಹಂಗಾದಲ್ಲಿ ಬರೋಬ್ಬರಿ  98000 ಹೊಳೆಯುವ Swarovski ಹರಳುಗಳನ್ನು ಬಳಸಲಾಗಿದೆಯಂತೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories