Published : Feb 23, 2023, 05:09 PM ISTUpdated : Feb 23, 2023, 05:17 PM IST
ಭಾರತದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ನಿರ್ದೇಶಕ ಎಸ್‌ಎಸ್ ರಾಜಮೌಳಿ (SS Rajamouli), ರಾಮ್ ಚರಣ್ (Ram Charan) ಮತ್ತು ಜೂನಿಯರ್ ಎನ್‌ಟಿಆರ್ (Jr NTR) ಆರ್‌ಆರ್‌ಆರ್‌ನ (RRR) ಮನೆಮಾತಾಗಿದೆ. ಪ್ರಸ್ತುತ ಆವಾರ್ಡ್ ಕಾರ್ಯಕ್ರಮಕ್ಕಾಗಿ ಆಮೆರಿಕದಲ್ಲಿರುವ ರಾಮ್‌ಚರಣ್ ಅವರ ಫೋಟೋಗಳು ಸಖತ್ ವೈರಲ್ ಆಗಿವೆ. ನ್ಯೂಯಾರ್ಕ್‌ನಲ್ಲಿ ರಾಮ್‌ಚರಣ್ ಫ್ಯಾನ್ಸ್ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ.
95ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ತೆರಳಿರುವ ರಾಮ್ ಚರಣ್ ನ್ಯೂಯಾರ್ಕ್‌ನಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.
210
RRR ಸ್ಟಾರ್ ರಾಮ್ ಚರಣ್, ತಮ್ಮ ಅಭಿಮಾನಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಸಮಯದ ಫೋಟೋ ವೀಡಿಯೋಗಳು ಸಖತ್ ವೈರಲ್ ಆಗಿವೆ.
310
Ram Charan
ವೀಡಿಯೊದಲ್ಲಿ, ನ್ಯೂಯಾರ್ಕ್‌ನಲ್ಲಿ ರಾಮ್ ಚರಣ್ ತನ್ನ ಕಾರಿನಿಂದ ಇಳಿದ ತಕ್ಷಣ ಅಭಿಮಾನಿಗಳತ್ತ ಕೈ ಬೀಸುತ್ತಿರುವುದನ್ನು ಕಾಣಬಹುದು.
410
Ram Charan
ಜೊತೆಗೆ ಅವರು ತಮ್ಮ ಅಭಿಮಾನಿಗಳೊಂದಿಗೆ ಹಸ್ತಲಾಘವ ಮಾಡುತ್ತಿರುವ ಮತ್ತು ಸೆಲ್ಫಿ ತೆಗೆದು ಕೊಳ್ಳುತ್ತಿರುವ ಫೋಟೋಗಳು ಇಂಟರ್‌ನೆಟ್‌ನಲ್ಲಿ ಟ್ರೆಂಡ್ ಆಗಿವೆ.
510
Ram Charan
ಬೂದು ಬಣ್ಣದ ಪ್ಯಾಂಟ್-ಸೂಟ್‌ನಲ್ಲಿ ಬೀಜ್ ಟಿ-ಶರ್ಟ್ ಪೇರ್ ಮಾಡಿಕೊಂಡಿರುವ ಸೌತ್ ಸೂಪರ್‌ಸ್ಟಾರ್ ರಾಮ್ ಚರಣ್ ಸಖತ್ ಡ್ಯಾಶಿಂಗ್ ಆಗಿ ಕಾಣಿಸಿಕೊಂಡಿದ್ದಾರೆ.
610
Ram Charan
ಈ ಹಿಂದೆ, ರಾಮ್ ಚರಣ್ ಯುಎಸ್‌ಗೆ ತೆರಳುವ ಸಮಯದಲ್ಲಿ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು ಮತ್ತು ಅವರು ಬರಿಗಾಲಿನಲ್ಲಿದ್ದರು. ಅಯ್ಯಪ್ಪ ಸ್ವಾಮಿ ಭಕ್ತರಾಗಿರುವ ರಾಮ್ ಅವರು ಉಪವಾಸದ ದಿನಗಳಲ್ಲಿ ಬರಿಗಾಲಿನಲ್ಲಿರುವ ಆಚರಣೆಯನ್ನು ಅನುಸರಿಸುತ್ತಾರೆ.
710
Ram Charan
ಮಾರ್ಚ್ 12 ರಂದು ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿರುವ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಮ್ ಚರಣ್ ಯುಎಸ್‌ನಲ್ಲಿದ್ದಾರೆ.
810
Ram Charan
RRR ಸಿನಿಮಾದ ನಾಟು ನಾಟು ಹಾಡು ಈ ವರ್ಷದ ಪ್ರಶಸ್ತಿ ಪ್ರದರ್ಶನದಲ್ಲಿ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ.
910
ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಗೆದ್ದು ಸುದ್ದಿಯಲ್ಲಿರುವ ಆರ್ಆರ್ಆರ್ ಚಿತ್ರದ ತಂಡ ಈಗ ಜನಪ್ರಿಯ ಚಾಟ್ ಶೋ ಗುಡ್ ಮಾರ್ನಿಂಗ್ ಅಮೆರಿಕದಲ್ಲಿ ಕಾಣಿಸಿಕೊಳ್ಳಲಿದೆ.
1010
ವರದಿಗಳ ಪ್ರಕಾರ, ರಾಮ್ ಚರಣ್ ಇಂದು (ಫೆಬ್ರವರಿ 23) ಗುಡ್ ಮಾರ್ನಿಂಗ್ ಅಮೆರಿಕದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾರತದ ಸಮಯದಲ್ಲಿ ಫೆ.23ರ ಸಂಜೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮವನ್ನು ಎಬಿಸಿಯಲ್ಲಿ (ABC) ಪ್ರಸಾರ ಮಾಡಲಾಗುತ್ತದೆ.