ಮೈನೆ ಪ್ಯಾರ್ ಕಿಯಾ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಭಾಗ್ಯಶ್ರೀ 23 ಫೆಬ್ರವರಿ 1969 ರಂದು ಮರಾಠಿ ರಾಯಲ್ ಫ್ಯಾಮಿಲಿ ಜನಸಿದರು
Bhagyashree
ಮಹಾರಾಷ್ಟ್ರದ ಸಾಂಗ್ಲಿಯ ರಾಜ ಮನೆತನದ ಭಾಗ್ಯಶ್ರೀ ಅವರ ತಂದೆ ವಿಜಯ್ ಸಿಂಗ್ ರಾವ್ ಮಾಧವರಾವ್ ಪಟವರ್ಧನ್ ಸಾಂಗ್ಲಿಯ ರಾಜರಾಗಿದ್ದರು. ವಿಜಯ್ ಸಿಂಗ್ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದು, ಅವರಲ್ಲಿ ಭಾಗ್ಯಶ್ರೀ ಹಿರಿಯರು.
Bhagyashree
ಭಾಗ್ಯಶ್ರೀ ಅವರು ಅಮೋಲ್ ಪಾಲೇಕರ್ ಅವರ ಕಚ್ಚಿ ಧೂಪ್ ಧಾರಾವಾಹಿಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಮೈನೆ ಪ್ಯಾರ್ ಕಿಯಾ ಚಿತ್ರದ ಮೂಲಕ ರಾತ್ರೋರಾತ್ರಿ ಫೇಮಸ್ ಆದರು.
ಮೈನೆ ಪ್ಯಾರ್ ಕಿಯಾ ಚಿತ್ರದಲ್ಲಿ ಭಾಗ್ಯಶ್ರೀ ಮತ್ತು ಸಲ್ಮಾನ್ ಕೆಮಿಸ್ಟ್ರಿ ಸಖತ್ ಸದ್ದು ಮಾಡಿತ್ತು. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಭಾಗ್ಯಶ್ರೀಗೆ ಕಿಸ್ ಮಾಡಬೇಕಾದ ದೃಶ್ಯವೂ ಇತ್ತು, ಆದರೆ ನಟಿ ಅದನ್ನು ನಿರಾಕರಿಸಿದ್ದಾಗಿ ಹೇಳಿದ್ದಾರೆ.
Bhagyashree
ಮೊದಲ ಚಿತ್ರದ ನಂತರವೇ 1990ರಲ್ಲಿ ಉದ್ಯಮಿ ಹಿಮಾಲಯ ದಾಸಾನಿ ಅವರನ್ನು ಭಾಗ್ಯಶ್ರೀ ವಿವಾಹವಾದರು. ಮದುವೆಯ ನಂತರವೂ ಅವರಿಗೆ ಕೆಲವು ಚಿತ್ರಗಳ ಆಫರ್‌ಗಳು ಬಂದವು, ಅದನ್ನು ನಟಿ ತಿರಸ್ಕರಿಸಿದರು.
Bhagyashree
ನಂತರ ಒಂದೆರಡು ಚಿತ್ರಗಳಲ್ಲಿ ನಟಿಸಿದರೂ ಭಾಗ್ಯಶ್ರೀಗೆ ಆ ಮಟ್ಟಿಗಿನ ಫೇಮ್ ತಂದು ಕೊಡಲಿಲ್ಲ. ಆದರೆ, ಗಂಡ, ಮಕ್ಕಳು ಅಂತ ಸಂಸಾರದಲ್ಲಿ ಬ್ಯುಸಿಯಾದರೂ ತಮ್ಮ ಸೌಂದರ್ಯ ಹಾಗೂ ಫಿಟ್‌ನೆಸ್ ಕಡೆ ಭಾಗ್ಯಶ್ರೀ ಸದಾ ಗಮನ ಹರಿಸುತ್ತಾರೆ.
ಮದುವೆಯ ನಂತರ ಸಿನಿಮಾದಿಂದ ದೂರ ಉಳಿದು ಫ್ಯಾಮಿಲಿ ಕಡೆ ಗಮನ ಹರಿಸಿದ್ದ ಭಾಗ್ಯಶ್ರೀ 54ನೇ ವಯಸ್ಸಿನಲ್ಲೂ ಸಖತ್ ಫಿಟ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯ ಆಗಿರುವ ಇವರು ಆಗಾಗ ಫೋಟೋಗಳು , ವೀಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.