Puneeth Rajkumar Death: ಪುನೀತ್ ಅಗಲಿಕೆ ನನಗೆ ವೈಯಕ್ತಿಕ ನಷ್ಟ: ಹನ್ಸಿಕಾ ಮೊಟ್ವಾನಿ

Published : Nov 02, 2021, 10:25 AM ISTUpdated : Nov 02, 2021, 06:49 PM IST

ಸ್ಯಾಂಡಲ್‌ವುಡ್(Sandalwood) ನಟ(Actor) ಪುನೀತ್ ರಾಜ್‌ಕುಮಾರ್‌ನನ್ನು(Puneeth Rajkumar) ನೆನಪಿಸಿಕೊಂಡ ಹನ್ಸಿಕಾ(Hansika) ಅಪ್ಪು ಸಾವು ನನಗೆ ವೈಯಕ್ತಿಕ ನಷ್ಟ ಎಂದ ಕಾಲಿವುಡ್(Kollywood) ನಟಿ

PREV
17
Puneeth Rajkumar Death: ಪುನೀತ್ ಅಗಲಿಕೆ ನನಗೆ ವೈಯಕ್ತಿಕ ನಷ್ಟ: ಹನ್ಸಿಕಾ ಮೊಟ್ವಾನಿ

ಕಾಲಿವುಡ್(Kollywood) ನಟಿ ಹನ್ಸಿಕಾ ಮೋಟ್ವಾನಿ(Hansika Motwani) ಅವರು ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಬಿಂದಾಸ್ (2008) ಸಿನಿಮಾದಲ್ಲಿ ನಟಿಸಿದ್ದರು. ಇದು ಅವರ ಮೊದಲ ಕನ್ನಡ ಸಿನಿಮಾ. ಸೂಪರ್‌ಸ್ಟಾರ್‌ನ ಅಕಾಲಿಕ ಮರಣದಿಂದ ಆಘಾತಕ್ಕೊಳಗಾದ ಹನ್ಸಿಕಾ ಅಪ್ಪು ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

27

ಪುನೀತ್ ಇನ್ನಿಲ್ಲ ಎಂದು ನಂಬುವುದಕ್ಕೆ ನನಗೆ ಇನ್ನೂ ಸಾಧ್ಯವಾಗುತ್ತುಲ್ಲ. ಇದು ಉದ್ಯಮಕ್ಕೆ ಮತ್ತು ವೈಯಕ್ತಿಕವಾಗಿ ನನಗೆ ದೊಡ್ಡ ನಷ್ಟ. ಏಕೆಂದರೆ ಅವರು ನನ್ ಸ್ನೇಹಿತರಾಗಿದ್ದರು. ಅವರು ಕೇವಲ 46 ವರ್ಷ ವಯಸ್ಸಿನವರಾಗಿದ್ದರು ಎನ್ನುವುದು ಇನ್ನೂ ದೊಡ್ಡ ದುರಂತ ಎಂದಿದ್ದಾರೆ ನಟಿ.

37

ನಟಿ ಪುನೀತ್ ಜೊತೆ ಶೂಟಿಂಗ್ ಮಾಡಿದ ಸಮಯವನ್ನು ನೆನಪಿಸಿಕೊಂಡು ನನಗೆ 19 ವರ್ಷ. ಅವರು ಎಷ್ಟು ಸಭ್ಯ, ವಿನಮ್ರರಾಗಿದ್ದರು ಎಂದು ನನಗೆ ಇಂದು ನೆನಪಿದೆ. ನಾನು ಹೊಸಬಳಾಗಿದ್ದೆ. ಉದ್ಯಮದ ಬಗ್ಗೆ ತಿಳಿದಿರಲಿಲ್ಲ. ಅವರು ಸೂಪರ್‌ಸ್ಟಾರ್ ಆಗಿದ್ದರೂ, ಅವರು ತುಂಬಾ ಚೆನ್ನಾಗಿ ಆತ್ಮೀಯತೆಯಿಂದ ಸ್ವಾಗತಿಸುತ್ತಿದ್ದರು. ನನಗೆ ಆರಾಮದಾಯಕವಾಗಿರುವಂತೆ ನೋಡಿಕೊಳ್ಳುತ್ತಿದ್ದರು ಎಂದಿದ್ದಾರೆ.

47

ಹವಾದಲ್ಲಿ (2003) ಬಾಲ ಕಲಾವಿದೆಯಾಗಿ ತನ್ನ ಚೊಚ್ಚಲ ಸಿನಿಮಾ ಮೂಲಕ ಗುರುತಿಸಲ್ಪಟ್ಟ ನಟಿ ಹಲವು ಚಲನಚಿತ್ರ ಉದ್ಯಮಗಳಲ್ಲಿ ಕೆಲಸ ಮಾಡುವುದರಿಂದ ಆಗಾಗ ಪುನೀತ್‌ನನ್ನು ಭೇಟಿಯಾಗುತ್ತಿರಲಿಲ್ಲ ಎಂದು ಹೇಳುತ್ತಾರೆ. ಆದರೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಂಪರ್ಕದಲ್ಲಿದ್ದರು ಎಂದಿದ್ದಾರೆ.

57

ನಾವು ಭೇಟಿಯಾದಾಗಲೆಲ್ಲಾ, ನಾವು ಯಾವಾಗಲೂ ನಾವು ಎಲ್ಲಿ ನಿಲ್ಲಿಸಿದ್ದೆವೋ ಅಲ್ಲಿಂದ ಆರಂಭಿಸುತ್ತಿದ್ದೆವು. ನಾನು ಅವರನ್ನು ಕೊನೆಯ ಬಾರಿ ಭೇಟಿಯಾಗಿದ್ದು ಅವಾರ್ಡ್ ಸಮಾರಂಭದಲ್ಲಿ. ನಿಮ್ಮ ವೃತ್ತಿಜೀವನವನ್ನು ನೀವು ರೂಪಿಸಿದ ರೀತಿಯ ಬಗ್ಗೆ ನನಗೆ ತುಂಬಾ ಸಂತೋಷವಿದೆ ಎಂದು ಅವರು ಹೇಳಿದ್ದರು ಎಂದಿದ್ದಾರೆ ಹನ್ಸಿಕಾ.

67

ಪುನೀತ್ ರಾಜ್‌ಕುಮಾರ್ ನಿಧನದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಚಿತ್ರಗಳ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ. ಕನ್ನಡ ಚಿತ್ರೋದ್ಯಮ ಸ್ಥಗಿತಗೊಂಡಿದೆ. ಅವರ ಕುಟುಂಬದಲ್ಲಿ ನಾನು ಯಾರನ್ನೂ ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ ನಟಿ.

ಅಪ್ಪು ಅಲ್ಪಾಯುಷಿ ಅನ್ನೋದು ಅಣ್ಣಾವ್ರಿಗೆ ಮೊದಲೇ ಗೊತ್ತಿತ್ತಾ!

77

ಅವರು ತಮ್ಮ ಕೆಲಸದ ಬಗ್ಗೆ ತುಂಬಾ ಉತ್ಸುಕರಾಗಿದ್ದರು. ಯಾವಾಗಲೂ ನನ್ನನ್ನು ಪ್ರೇರೇಪಿಸುತ್ತಿದ್ದರು. ಕಡಿಮೆ ಮಾತನಾಡುತ್ತಿದ್ದರು ಮತ್ತು ಹೆಚ್ಚು ನಗುತ್ತಿದ್ದರು. ಅವರು ಅಭಿಮಾನಿಗಳು ಮತ್ತು ಅವರು ಸಂಪರ್ಕಕ್ಕೆ ಬಂದ ಯಾರನ್ನೇ ಆದರೂ ಅವರು ಉತ್ತಮವಾಗಿ ನಡೆಸಿಕೊಳ್ಳುತ್ತಾರೆ ಎಂದಿದ್ದಾರೆ ನಟಿ.

Read more Photos on
click me!

Recommended Stories