ತಮ್ಮ ಮದುವೆ ಬಗ್ಗೆ ಕತ್ರಿನಾ ಮೌನ ವಹಿಸಲು ಈ ನಟ ಕಾರಣವಂತೆ!

Suvarna News   | Asianet News
Published : Nov 01, 2021, 08:37 PM IST

ಕತ್ರಿನಾ ಕೈಪ್‌ (Katrina Kaif) ವಿಕ್ಕಿ ಕೌಶಲ್ (Vicky kaushal) ಜೊತೆ ಮದುವೆಯ (Wedding) ಸುದ್ದಿ  ಬಹಳ ದಿನಗಳಿಂದ ಹರಿದಾಡುತ್ತಿದೆ. ಇಬ್ಬರೂ ಬಹಳ ಸಮಯದಿಂದ ಪರಸ್ಪರ ಡೇಟಿಂಗ್ (Dating) ನಡೆಸುತ್ತಿದ್ದಾರೆ ಮತ್ತು ವರದಿಗಳ ಪ್ರಕಾರ ಈ ಕಪಲ್‌ ಇದೇ ಡಿಸೆಂಬರ್‌ನಲ್ಲಿ ಮದುವೆಯಾಗಲಿದ್ದಾರೆ. ಇವರಿಬ್ಬರೂ ರಾಜಸ್ಥಾನದಲ್ಲಿ ಮದುವೆಯಾಗಲಿದ್ದು, ಅದಕ್ಕಾಗಿ ಸಕಲ ಸಿದ್ಧತೆ ನಡೆದಿದೆ ಎಂದು ವರದಿಯಾಗಿದೆ. ಆದರೆ, ಇದುವರೆಗೂ ಕತ್ರಿನಾ ಅಥವಾ ವಿಕ್ಕಿ ಅವರ ಮದುವೆಯ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ, ಈ ಬಗ್ಗೆ ಅಭಿಮಾನಿಗಳು ಸಾಕಷ್ಟು ಆಶ್ಚರ್ಯ ಪಡುತ್ತಿದ್ದಾರೆ. ಈ ಮಧ್ಯೆ ಒಂದು ಮಾಹಿತಿ ಹೊರಬಿದ್ದಿದ್ದೆ ಕತ್ರಿನಾ ತನ್ನ ಮದುವೆಯನ್ನು ಏಕೆ ಘೋಷಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಬಹಿರಂಗವಾಗಿದೆ. ಮತ್ತು ಇದಕ್ಕೆ ಕಾರಣ ಅಕ್ಷಯ್ ಕುಮಾರ್ (Akshay Kuamr) ಎಂದು ಹೇಳಲಾಗುತ್ತಿದೆ. ಪೂರ್ಣ ಮಾಹಿತಿಗಾಗಿ ಕೆಳಗೆ ಓದಿ. 

PREV
18
ತಮ್ಮ ಮದುವೆ ಬಗ್ಗೆ ಕತ್ರಿನಾ ಮೌನ ವಹಿಸಲು ಈ ನಟ ಕಾರಣವಂತೆ!

ಬಾಲಿವುಡ್ ಲೈಫ್ ವರದಿಯ ಪ್ರಕಾರ, ಕತ್ರಿನಾ ಕೈಫ್ ಈ ದಿನಗಳಲ್ಲಿ ತನ್ನ ಮುಂಬರುವ ಚಿತ್ರ ಸೂರ್ಯವಂಶಿಯ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಚಿತ್ರ ದೀಪಾವಳಿಯಂದು ಬಿಡುಗಡೆಯಾಗುತ್ತಿದೆ. ಸೂರ್ಯವಂಶಿ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮುಖ್ಯ ಭೂಮಿಕೆಯಲ್ಲಿದ್ದಾರೆ ಮತ್ತು ಅದರಲ್ಲಿ ಅವರು ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ.

28

ಚಿತ್ರದ ಬಹುತೇಕ ದೃಶ್ಯಗಳಲ್ಲಿ ಅಕ್ಷಯ್ ಕುಮಾರ್ ಇದ್ದಾರೆ. ಇದರಿಂದಾಗಿ ಚಿತ್ರದ ನಿರ್ಮಾಪಕರು ಪ್ರಚಾರದಲ್ಲಿ ಅಕ್ಷಯ್‌ ಕುಮಾರ್‌ ಇರಬೇಕೆಂದು ಬಯಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅಕ್ಷಯ್ ಜೊತೆಗೆ ಅಜಯ್ ದೇವಗನ್ ಮತ್ತು ರಣವೀರ್ ಸಿಂಗ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

38

ಸೂರ್ಯವಂಶಿ ಬಿಡುಗಡೆಗೆ ಮುನ್ನ ಕತ್ರಿನಾ ಕೈಫ್ ತನ್ನ ಮದುವೆಯ ಬಗ್ಗೆ ಮೌನ ಮುರಿದರೆ, ಮಾಧ್ಯಮದ ಗಮನವು ಚಿತ್ರದಿಂದ ಮತ್ತು ಅಕ್ಷಯ್ ಕುಮಾರ್ ಅವರಿಂದ ದೂರ ಸರಿಯುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ತಯಾರಕರು ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು. ನಂತರ ಜನರು ಅಕ್ಷಯ್ ಕುಮಾರ್‌ಗಿಂತ ಕತ್ರಿನಾ ಬಗ್ಗೆ ಹೆಚ್ಚು ಮಾತನಾಡುತ್ತಾರೆ ಮತ್ತು ತಯಾರಕರು ಅಂತಹ ರಿಸ್ಕ್‌ ತೆಗೆದುಕೊಳ್ಳಲು ಬಯಸುವುದಿಲ್ಲ ಎಂದು ವರದಿಗಳು ಹೇಳುತ್ತಿವೆ. 

48

ಕತ್ರಿನಾ-ವಿಕ್ಕಿ ವಿವಾಹವಾಗಲಿದ್ದಾರೆ ಹೇಳಲಾಗುತ್ತಿರುವ ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾ ಅರಮನೆಯು ಸುಮಾರು 700 ವರ್ಷಗಳಷ್ಟು ಹಳೆಯದು. ಡಿಸೆಂಬರ್ 7 ರಿಂದ 9 ರವರೆಗೆ ಈ ಕೋಟೆಯಲ್ಲಿ ಕ್ಯಾಟ್-ವಿಕ್ಕಿಯ ವಿವಾಹ ಕಾರ್ಯಕ್ರಮಗಳು ನಡೆಯಲಿವೆ ಎಂದು ವರದಿಗಳು ಹೇಳಿವೆ.

58

ಸುದ್ದಿ ಪ್ರಕಾರ, ಈ ಮದುವೆಯಲ್ಲಿ ಇಬ್ಬರ ಕುಟುಂಬ ಸದಸ್ಯರು ಮತ್ತು ಕೆಲವು ವಿಶೇಷ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರೆ. ಆದರೆ, ಇದುವರೆಗೂ ಎರಡೂ ಕಡೆಯಿಂದ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. 

68

ಅದೇ ಸಮಯದಲ್ಲಿ, ಇತ್ತೀಚೆಗೆ, ಸರ್ದಾರ್ ಉಧಮ್ ಸಿಂಗ್ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ, ಕತ್ರಿನಾ ಜೊತೆಗಿನ ನಿಶ್ಚಿತಾರ್ಥದ ಸುದ್ದಿಯ ಬಗ್ಗೆ ವಿಕ್ಕಿ ಕೌಶಲ್ ಅವರನ್ನು ಕೇಳಿದಾಗ, ನಿಮ್ಮ ಸ್ನೇಹಿತರು ಈ ಸುದ್ದಿಯನ್ನು ಹರಡಿದ್ದಾರೆ. ಸಮಯ ಬಂದಾಗ ನಾನು ಕೂಡ ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳುತ್ತೇನೆ ಎಂದು ಮಿಡೀಯಾಕ್ಕೆ ಹೇಳಿದ್ದರು.  

78

ಇತ್ತೀಚೆಗಷ್ಟೇ ಸರ್ದಾರ್ ಉಧಮ್ ಸಿಂಗ್ ಸ್ಕ್ರೀನಿಂಗ್ ನಡೆದಿದ್ದು, ಕತ್ರಿನಾ ಕೈಫ್ ಕೂಡ ಅದನ್ನು ನೋಡಲು ಆಗಮಿಸಿದ್ದರು. ಚಿತ್ರ ಪ್ರದರ್ಶನದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಜೋಡಿ ಪರಸ್ಪರ ತಬ್ಬಿಕೊಳ್ಳುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲ ಕತ್ರಿನಾ ಸಿನಿಮಾ ನೋಡಿ ವಿಕ್ಕಿಯನ್ನು ಹೊಗಳಿದ್ದಾರೆ.


 

88

ಕತ್ರಿನಾ ಕೈಫ್ ರೋಹಿತ್ ಶೆಟ್ಟಿ ಅವರ ಸೂರ್ಯವಂಶಿ ಚಿತ್ರದಲ್ಲಿ ಅಕ್ಷಯ್ ಕುಮಾರ್ ಎದುರು ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಅವರು ಇಶಾನ್ ಖಟ್ಟರ್ ಮತ್ತು ಸಿದ್ಧಾಂತ್ ಚತುರ್ವೇದಿ ಅವರೊಂದಿಗೆ ಫೋನ್ ಭೂತ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟೈಗರ್ 3 ಚಿತ್ರದಲ್ಲಿ ಸಲ್ಮಾನ್ ಜೊತೆ ಕ್ಯಾಟ್ ಕೂಡ ಕೆಲಸ ಮಾಡುತ್ತಿದ್ದಾರೆ. ಅದೇ ಸಮಯದಲ್ಲಿ, ವಿಕ್ಕಿ ಕೌಶಲ್ ಕೂಡ ಅನೇಕ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

Read more Photos on
click me!

Recommended Stories