ಹಿಮಾಲಯದ ತಪ್ಪಲಿನಲ್ಲಿ ಸಂಪೂರ್ಣ ಬೆತ್ತಲಾದ ತುಪಾಕಿ ನಟ : ಆಧ್ಮಾತ್ಮದ ಮಾತು: ಫೋಟೋಸ್ ವೈರಲ್

Published : Dec 10, 2023, 01:25 PM ISTUpdated : Dec 11, 2023, 09:51 AM IST

ನಟ ಮಾಡೆಲ್, ಮಾರ್ಷಲ್ ಆರ್ಟ್ಸ್‌ ಪಟು ವಿದ್ಯುತ್ ಜಮವಾಲ್ ಪ್ರಕೃತಿಯ ಮಧ್ಯೆ ಸಂಪೂರ್ಣ ಬೆತ್ತಲಾಗಿ ಅದರ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿವೆ. 

PREV
111
ಹಿಮಾಲಯದ ತಪ್ಪಲಿನಲ್ಲಿ ಸಂಪೂರ್ಣ ಬೆತ್ತಲಾದ ತುಪಾಕಿ ನಟ : ಆಧ್ಮಾತ್ಮದ ಮಾತು: ಫೋಟೋಸ್ ವೈರಲ್

ಟ್ವಿಟ್ಟರ್‌ನಲ್ಲಿ ಸ್ವತಃ ವಿದ್ಯುತ್ ಜಮ್ಮವಾಲ್ ತಮ್ಮ ಬೆತ್ತಲೆ ಫೋಟೋಗಳನ್ನು ಶೇರ್ ಮಾಡಿದ್ದು, ಹಿಮಾಲಯದ ತಪ್ಪಲಿನಲ್ಲಿ ಮೈ ಮೇಲೆ ತುಂಡು ಬಟ್ಟೆಯೂ ಇಲ್ಲದೇ ಯೋಗ ಹಾಗೂ ಅಡುಗೆ ಮಾಡುವುದನ್ನು ಕಾಣಬಹುದಾಗಿದೆ.

211

ಇದೊಂದು ಆಧ್ಮಾತ್ಮದ ಪ್ರಯಾಣವಾಗಿದ್ದು ಕಳೆದ 14 ವರ್ಷಗಳಿಂದಲೂ ಈ ರೀತಿ ಮಾಡುತ್ತಿರುವುದಾಗಿ ನಟ ಹೇಳಿಕೊಂಡಿದ್ದಾರೆ. ಪ್ರತಿ ವರ್ಷವೂ 7 ರಿಂದ 10 ದಿನಗಳ ಕಾಲ ಪ್ರಕೃತಿಯ ಮಧ್ಯೆ ಒಬ್ಬಂಟಿಯಾಗಿ ಬೆತ್ತಲಾಗಿ ತಾನು ಕಾಲ ಕಳೆಯುವುದಾಗಿ ವಿದ್ಯುತ್ ಜಮಾವಲ್ ಹೇಳಿಕೊಂಡಿದ್ದಾರೆ.

311

ನಟನ ಈ ಪೋಸ್ಟ್ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಈ ಪ್ರಕ್ರಿಯೆ ಈಗ ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ನಟ ಹೇಳಿಕೊಂಡಿದ್ದಾರೆ. ಈ ಮೂಲಕ ನಟ ಆಧ್ಯಾತ್ಮದತ್ತ ವಾಲುತ್ತಿದ್ದಾರೆಯೇ ಎಂಬ ಬಗ್ಗೆ ಅವರ ಅಭಿಮಾನಿಗಳು ಕುತೂಹಲದಿಂದ ಪ್ರಶ್ನೆ ಮಾಡುತ್ತಿದ್ದಾರೆ. 

411


ನಟನ ಈ ಪೋಸ್ಟ್ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಈ ಪ್ರಕ್ರಿಯೆ ಈಗ ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ನಟ ಹೇಳಿಕೊಂಡಿದ್ದಾರೆ. ಈ ಮೂಲಕ ನಟ ಆಧ್ಯಾತ್ಮದತ್ತ ವಾಲುತ್ತಿದ್ದಾರೆಯೇ ಎಂಬ ಬಗ್ಗೆ ಅವರ ಅಭಿಮಾನಿಗಳು ಕುತೂಹಲದಿಂದ ಪ್ರಶ್ನೆ ಮಾಡುತ್ತಿದ್ದಾರೆ. 

511

ಒಟ್ಟು ಮೂರು ಫೋಟೋಗಳನ್ನು ಜಮಾವಲ್ ಪೋಸ್ಟ್ ಮಾಡಿದ್ದು, ಒಂದರಲ್ಲಿ ನದಿಯ ಪಕ್ಕದಲ್ಲಿ ನಟ ಕುಳಿತಿರುವ ದೃಶ್ಯವಿದೆ. ಹಾಗೆಯೇ ಎರಡನೇ ಫೋಟೋದಲ್ಲಿ ಮರದ ಕೆಳಗೆ ಕಲ್ಲುಗಳ ಜೋಡಿಸಿ ಅಡುಗೆ ಮಾಡುತ್ತಿದ್ದರೆ, ಮೂರನೇ ಫೋಟೋದಲ್ಲಿ ನೀರಿನ ಮಧ್ಯೆ ಸೂರ್ಯ ನಮಸ್ಕಾರ ಮಾಡುತ್ತಿರುವ ದೃಶ್ಯವಿದೆ. ಈ ಎಲ್ಲಾ ಫೋಟೋಗಳಲ್ಲಿ ಸಣ್ಣ ಬಟ್ಟೆಯ ತುಣುಕು ಜಮಾವಲ್ ಮೇಲಿಲ್ಲ. 

611

ಐಷಾರಾಮಿ ಜೀವನದಿಂದ ಅರಣ್ಯಕ್ಕೆ ಬರುತ್ತಿರುವಾಗ ನಾನು ಒಂಟಿತನದಲ್ಲೂ ಖುಷಿ ಕಂಡೆ ಹಾಗೂ ನಾನು ಯಾರು ಹಾಗೂ ನಾನು ಯಾರಲ್ಲ ಎಂಬುದನ್ನು ತಿಳಿದುಕೊಳ್ಳುವ ಪ್ರಾಮುಖ್ಯತೆಯನ್ನು ಅರಿತುಕೊಳ್ಳುವುದನ್ನು ಆನಂದಿಸುತ್ತಿದ್ದೇನೆ. ಇದು ಆಧ್ಯಾತ್ಮದೆಡೆಗಿನ ಮೊದಲ ಹಂತವಾಗಿದ್ದು, ಇದು ಪ್ರಕೃತಿ ಒದಗಿಸಿದ ಐಷಾರಾಮಿ ಜೀವನ ಎಂದು ವಿದ್ಯುತ್ ಬರೆದುಕೊಂಡಿದ್ದಾರೆ.

711

ನಾನು ನನ್ನ ಆರಾಮ ವಲಯದ ಹೊರಗೆಯೂ ನಾನು ತುಂಬಾ ಆರಾಮದಾಯಕವಾಗಿದ್ದೇನೆ. ನಾನು ಪ್ರಕೃತಿಯ ಸ್ವಾಭಾವಿಕ ಸಂಗೀತಾಕ್ಕೆ ಟ್ಯೂನ್ ಆಗುತ್ತಿದ್ದೇನೆ. ಸ್ಯಾಟಲೈಟ್ ಆಂಟೆನಾವೂ ಸಂತೋಷ ಮತ್ತು ಪ್ರೀತಿಯ ಕಂಪನಗಳನ್ನು ಹೊರಸೂಸುತ್ತಿರುವಂತೆ ನಾನು ಕಲ್ಪಿಸಿಕೊಳ್ಳುತ್ತೇನೆ.

811

ನಾನು ಕರುಣೆಯ ಆವರ್ತನದಲ್ಲಿ ಕಂಪಿಸುತ್ತೇನೆ. ನಾನು ನಿರ್ಧಾರದ ಆವರ್ತನದಲ್ಲಿ ಕಂಪಿಸುತ್ತೇನೆ. ನಾನು ಸಾಧನೆಯ ಆವರ್ತನದಲ್ಲಿ ಕಂಪಿಸುತ್ತೇನೆ. ನಾನು ಕ್ರಿಯೆಯ ಆವರ್ತನದಲ್ಲಿ ಕಂಪಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ ವಿದ್ಯುತ್ ಜಮಾವಾಲ್.

911
Vidyut Jammwal

ಇಲ್ಲಿ ನಾನು ನನ್ನನ್ನು ಸುತ್ತುವರಿಯಲು ಬಯಸುವ ಶಕ್ತಿಯನ್ನು ಸೃಷ್ಟಿಸುತ್ತೇನೆ ಮತ್ತು ಮನೆಗೆ ಹಿಂತಿರುಗುತ್ತೇನೆ, ಇದು ನನ್ನ ಜೀವನದಲ್ಲಿ ಹೊಸ ಅಧ್ಯಾಯವನ್ನು ಅನುಭವಿಸಲು ಸಿದ್ಧವಾಗಿದೆ ಮರುಜನ್ಮ, ಈ ಏಕಾಂತವು ಮನಸ್ಸಿನ ಊಹೆಗೆ ಸಿಗದ್ದು, ಆದರೆ ಅರಿವಿನಲ್ಲಿ ಮಾತ್ರ ಅನುಭವಕ್ಕೆ ಬರುತ್ತದೆ ಎಂಬುದನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ ಎಂದು ನಟ ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಆಧ್ಯಾತ್ಮ ಜರ್ನಿ ಬಗ್ಗೆ ವಿವರಿಸಿದ್ದಾರೆ. 

1011
Vidyut Jammwal

ಈ ಫೋಟೋಗಳನ್ನು ಸ್ಥಳೀಯ ಕುರಿಗಾಹಿ ಮೊಹರ್ ಸಿಂಗ್ ತೆಗೆದಿದ್ದು ಎಂದು ಅವರು ವಿವರಿಸಿದ್ದಾರೆ. ವಿದ್ಯುತ್ ಜಮಾವಾಲ್ ನಟನೆಯ ಕ್ರ್ಯಾಕ್ ಸಿನಿಮಾ ಮುಂದಿನ ವರ್ಷ ಫೆಬ್ರವರಿ 23 ರಂದು ಥಿಯೇಟರ್‌ಗಳಲ್ಲಿ ರಿಲೀಸ್ ಆಗಲಿದೆ. 

1111

ಇನ್ನು ವಿದ್ಯುತ್ ಜಮಾವಾಲ್ ಸಿನಿಮಾ ಕೆರಿಯರ್ ಬಗ್ಗೆ ಹೇಳುವುದಾದರೆ ಹಲವು ಸಿನಿಮಾಗಳಲ್ಲಿ ವಿಲನ್ ಪಾತ್ರ ನಿರ್ವಹಿಸಿ ಭೇಷ್ ಅನಿಸಿಕೊಂಡಿದ್ದಾರೆ ಈ ನಟ ಕಮಾಂಡೋ, ಪೋರ್ಸ್, ತೆಲುಗು ಸಿನಿಮಾಗಳಾದ ಶಕ್ತಿ ಊಸರವಳ್ಳಿ, ತಮಿಳಿನ ಬಿಲ್ಲಾ2 , ತುಪಾಕಿ, ಮುಂತಾದ ಸಿನಿಮಾಗಳಲ್ಲಿ ಖಳ ನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ ಈ ಯುವನಟ. 

click me!

Recommended Stories