'ನಾಯಕ ಕುಳ್ಳನಾಗಿದ್ದರೆ, ಅದು ಅವನ ಸಮಸ್ಯೆ, ನನ್ನ ತಪ್ಪಲ್ಲ'.. ಈ ನಟಿಯ ಸೆನ್ಸೇಷನಲ್ ಕಮೆಂಟ್ಸ್ ಯಾರ ಬಗ್ಗೆ?

Published : Jul 18, 2026, 12:51 PM IST

ಸಿನಿಮಾ ಲೋಕ ಅಂದಮೇಲೆ ಅಲ್ಲಿ ಬಣ್ಣ, ಬೆಳಕು, ಗ್ಲಾಮರ್ ಎಲ್ಲವೂ ಅತಿಯಾಗಿಯೇ ಇರುತ್ತದೆ. ತೆರೆಯ ಮೇಲೆ ಮಿಂಚುವ ನಟಿಯರನ್ನು ನೋಡಿ ನಾವು "ಎಂತಹ ಸುಂದರ ಜೀವನ ಇವರದ್ದು" ಎಂದು ಅಂದುಕೊಳ್ಳುತ್ತೇವೆ. ಆದರೆ, ಈ ಸುಂದರ ಮುಖಗಳ ಹಿಂದೆ ಅದೆಷ್ಟು ನೋವು, ಅವಮಾನ ಮತ್ತು ಕೀಳರಿಮೆ ಅಡಗಿರುತ್ತದೆ?

PREV
16

ಬಣ್ಣದ ಲೋಕದ ಕಪ್ಪು ಚುಕ್ಕೆ: ಬಿಳಿ ಬಣ್ಣಕ್ಕಾಗಿ ಮುಖಕ್ಕೆ ನಾಲ್ಕು ಲೇಯರ್ ಪೇಂಟ್! ಸಮೀರಾ ರೆಡ್ಡಿ ಬಿಚ್ಚಿಟ್ಟ ಬೆಚ್ಚಿಬೀಳಿಸುವ ಸತ್ಯಗಳು

ಸಿನಿಮಾ ಲೋಕ ಅಂದಮೇಲೆ ಅಲ್ಲಿ ಬಣ್ಣ, ಬೆಳಕು, ಗ್ಲಾಮರ್ ಎಲ್ಲವೂ ಅತಿಯಾಗಿಯೇ ಇರುತ್ತದೆ. ತೆರೆಯ ಮೇಲೆ ಮಿಂಚುವ ನಟಿಯರನ್ನು ನೋಡಿ ನಾವು "ಎಂತಹ ಸುಂದರ ಜೀವನ ಇವರದ್ದು" ಎಂದು ಅಂದುಕೊಳ್ಳುತ್ತೇವೆ. ಆದರೆ, ಈ ಸುಂದರ ಮುಖಗಳ ಹಿಂದೆ ಅದೆಷ್ಟು ನೋವು, ಅವಮಾನ ಮತ್ತು ಕೀಳರಿಮೆ ಅಡಗಿರುತ್ತದೆ ಎಂಬುದು ಯಾರಿಗೂ ತಿಳಿಯದ ವಿಚಾರ. ದಶಕಗಳ ಕಾಲ ಚಿತ್ರರಂಗದಲ್ಲಿ ಮಿಂಚಿದ ನಟಿ ಸಮೀರಾ ರೆಡ್ಡಿ (Sameera Reddy), ಇತ್ತೀಚೆಗೆ ತಮ್ಮ ವೃತ್ತಿಜೀವನದ ಆರಂಭದ ಆ ಕರಾಳ ದಿನಗಳ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಅವರ ಮಾತುಗಳು ಕೇಳಿದರೆ, ಗ್ಲಾಮರ್ ಪ್ರಪಂಚ ಎಷ್ಟು ಕ್ರೂರವಾಗಿದೆ ಎಂಬುದು ಅರಿವಾಗುತ್ತದೆ.

26

ಬಣ್ಣಕ್ಕಾಗಿ ನಡೆಯುತ್ತಿತ್ತು ಸರ್ಕಸ್!

2002ರಲ್ಲಿ 'ಮೈನೆ ದಿಲ್ ತುಜ್ಕೋ ದಿಯಾ' ಚಿತ್ರದ ಮೂಲಕ ಸಮೀರಾ ಬಾಲಿವುಡ್‌ಗೆ ಎಂಟ್ರಿ ಕೊಟ್ಟಾಗ, ಅವರಿಗೆ ಎದುರಾದ ಮೊದಲ ಸವಾಲು ಅವರ ನೈಸರ್ಗಿಕ ಬಣ್ಣ! ಸಮೀರಾ ಅವರು ಸ್ವಲ್ಪ ಶ್ಯಾಮಲ ವರ್ಣದವರು (Dusky skin tone). ಆದರೆ ಅಂದಿನ ಚಿತ್ರರಂಗಕ್ಕೆ ಬೇಕಾಗಿದ್ದು 'ಹಾಲಿನಂತಹ ಬಿಳಿ' ಬಣ್ಣ. ಸಮೀರಾ ಹೇಳುವಂತೆ, "ಪ್ರತಿ ದಿನ ಚಿತ್ರೀಕರಣಕ್ಕೂ ಮುನ್ನ ನನ್ನ ಮುಖಕ್ಕೆ ಮೂರರಿಂದ ನಾಲ್ಕು ಲೇಯರ್‌ಗಳಷ್ಟು ಬಿಳಿ ಬಣ್ಣದ ಮೇಕಪ್ ಹಚ್ಚಲಾಗುತ್ತಿತ್ತು. ಅದು ಎಷ್ಟು ಅಸಹಜವಾಗಿರುತ್ತಿತ್ತೆಂದರೆ, ನನ್ನ ಮುಖ ಒಮ್ಮೊಮ್ಮೆ ಬೂದು ಬಣ್ಣಕ್ಕೆ ತಿರುಗುತ್ತಿತ್ತು. ಮುಖದ ಬಣ್ಣಕ್ಕೆ ಮ್ಯಾಚ್ ಮಾಡಲು ನನ್ನ ಇಡೀ ದೇಹಕ್ಕೆ ವಿಶೇಷ ಪೇಂಟ್ ಹಚ್ಚುತ್ತಿದ್ದರು!" ಅಂದರೆ, ಒಬ್ಬ ನಟಿಯ ಪ್ರತಿಭೆಗಿಂತ ಅವಳ ಚರ್ಮದ ಬಣ್ಣವೇ ಅಲ್ಲಿ ಮುಖ್ಯವಾಗಿತ್ತು.

36

ಕೃತಕ ಸೌಂದರ್ಯದ ಸೆರೆಮನೆಯಲ್ಲಿ ಸಮೀರಾ:

ಕೇವಲ ಬಣ್ಣವಷ್ಟೇ ಅಲ್ಲ, ಬಾಡಿ ಶೇಮಿಂಗ್ ಕೂಡ ಸಮೀರಾರನ್ನು ಕಾಡಿತ್ತು. 20ರ ಹರೆಯದ ಆ ಸುಂದರ ವಯಸ್ಸಿನಲ್ಲಿ ಅವರು ತನ್ನನ್ನು ತಾನು ಕನ್ನಡಿಯ ಮುಂದೆ ನಿಂತು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. "ಜನರು ನನ್ನನ್ನು ದಪ್ಪ ಎನ್ನುತ್ತಿದ್ದರು, ನನ್ನ ಕಣ್ಣುಗಳು ಆಕರ್ಷಕವಾಗಿಲ್ಲ ಎನ್ನುತ್ತಿದ್ದರು. ಇದರಿಂದಾಗಿ ನಾನು ಯಾವಾಗಲೂ ಕೃತಕ ವಸ್ತುಗಳ ಮೊರೆ ಹೋಗುತ್ತಿದ್ದೆ. ನಾನು ಪ್ಯಾಡೆಡ್ ಬ್ರಾ, ಹಿಪ್ ಪ್ಯಾಡ್‌ಗಳನ್ನು ಧರಿಸುತ್ತಿದ್ದೆ. ಕಣ್ಣಿನ ಬಣ್ಣ ಬದಲಿಸಲು ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಬಳಸುತ್ತಿದ್ದೆ. ನಾನು ನಾನಾಗಿರಲು ಅವರು ಬಿಡಲೇ ಇಲ್ಲ" ಎಂದು ಅವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

46

ಎತ್ತರವೇ ಶಾಪವಾಯಿತೇ? ಎನ್‌ಟಿಆರ್ ಪ್ರಸ್ತಾಪ!

ಸಮೀರಾ ಅವರ ಮತ್ತೊಂದು ದೊಡ್ಡ ಸಮಸ್ಯೆ ಎಂದರೆ ಅವರ 'ಹೈಟ್'. ಬಾಲಿವುಡ್ ಮತ್ತು ಟಾಲಿವುಡ್‌ನ ಹಲವು ನಾಯಕರಿಗಿಂತ ಸಮೀರಾ ಎತ್ತರವಿದ್ದರು. "ನನ್ನ ನಾಯಕ ಕುಳ್ಳಗಿದ್ದ ಕಾರಣ, ನಾನು ಸದಾ ಬಾಗಿಕೊಂಡು ನಡೆಯಬೇಕಿತ್ತು. ನನ್ನ ಎತ್ತರವನ್ನು ಮರೆಮಾಚಲು ತುಂಬಾ ಸರ್ಕಸ್ ಮಾಡಬೇಕಿತ್ತು" ಎಂದಿದ್ದಾರೆ ಸಮೀರಾ. ಈ ಮಾತು ಕೇಳಿದ ಕೂಡಲೇ ನೆಟ್ಟಿಗರು ಟಾಲಿವುಡ್ ಯಂಗ್ ಟೈಗರ್ ಎನ್‌ಟಿಆರ್ ಅವರತ್ತ ಬೆರಳು ತೋರಿಸುತ್ತಿದ್ದಾರೆ. ಸಮೀರಾ ಅವರು ಎನ್‌ಟಿಆರ್ ಜೊತೆ 'ಅಶೋಕ್' ಮತ್ತು 'ನರಸಿಂಹುಡು' ಚಿತ್ರಗಳಲ್ಲಿ ನಟಿಸಿದ್ದರು. ಆ ಸಮಯದಲ್ಲಿ ಎನ್‌ಟಿಆರ್ ಅವರಿಗಿಂತ ಸಮೀರಾ ಎತ್ತರ ಕಾಣುತ್ತಿದ್ದರು. ಹೀಗಾಗಿ ಸಮೀರಾ ಅವರ ಈ 'ಶಾರ್ಟ್ ಹೀರೋ' ಕಾಮೆಂಟ್ ನೇರವಾಗಿ ಎನ್‌ಟಿಆರ್ ಅವರಿಗೆ ತಟ್ಟಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ.

56

40ರ ಹರೆಯದಲ್ಲಿ ಸಿಕ್ಕ ಸ್ವಾತಂತ್ರ್ಯ:

ಅಂದಿನ ಆ ಕೀಳರಿಮೆ, ಟೀಕೆಗಳು ಸಮೀರಾರನ್ನು ಕುಗ್ಗಿಸದೇ ಬದಲಾಗಿ ಗಟ್ಟಿಗೊಳಿಸಿದವು. "ನಾನು 40 ವರ್ಷ ತಲುಪಿದ ಮೇಲೆ ನನ್ನನ್ನು ನಾನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಕಲಿತೆ. ನಾಯಕ ಕುಳ್ಳಗಿದ್ದರೆ ಅದು ಅವನ ಸಮಸ್ಯೆ, ನನ್ನದಲ್ಲ ಎಂಬ ಸತ್ಯ ನನಗೆ ತಡವಾಗಿ ಅರ್ಥವಾಯಿತು" ಎಂದು ಅವರು ಈಗ ನಗುತ್ತಾ ಹೇಳುತ್ತಾರೆ.

66

ಇಂದು ಸಮೀರಾ ರೆಡ್ಡಿ ಸೋಶಿಯಲ್ ಮೀಡಿಯಾದಲ್ಲಿ 'ಬಾಡಿ ಪಾಸಿಟಿವಿಟಿ' ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ತಮ್ಮ ಬಿಳಿ ಕೂದಲು, ನೆರಿಗೆ ಬಿದ್ದ ಚರ್ಮ ಮತ್ತು ಸಹಜ ಮೈಬಣ್ಣವನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಾ, "ನಾನು ಹೇಗಿದ್ದೇನೋ ಹಾಗೆಯೇ ಸುಂದರ" ಎಂದು ಸಾರುತ್ತಿದ್ದಾರೆ. ಸಮೀರಾ ಅವರ ಈ ಪಯಣ ಪ್ರತಿಯೊಬ್ಬ ಮಹಿಳೆಗೂ ಒಂದು ಸ್ಫೂರ್ತಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories