Weight Loss Journey: ಪ್ರೆಗ್ನೆಂಸಿ ನಂತರ 102 ಕೆಜಿ ಆಗಿದ್ದ ನಟಿ ಸಮೀರಾ ರೆಡ್ಡಿ!

First Published Dec 14, 2021, 7:56 PM IST

ನಟಿ ಸಮೀರಾ ರೆಡ್ಡಿಗೆ (Sameera Reddy) 41 ವರ್ಷ.  ಡಿಸೆಂಬರ್ 14, 1980 ರಂದು ಆಂಧ್ರ ಪ್ರದೇಶದ ರಾಜಮಂಡ್ರಿಯಲ್ಲಿ ಜನಿಸಿದ ಸಮೀರಾ ಅವರ ವೃತ್ತಿ ಜೀವನ ಹೆಚ್ಚು ವಿಶೇಷವಾಗಿರಲಿಲ್ಲ. ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿದ ನಂತರ ಅವರು ನಟನಾ ವೃತ್ತಿ ಜೀವನಕ್ಕೆ ವಿದಾಯ ಹೇಳಿದರು. ಅವರು 2002ರ ಮೈನೆ ದಿಲ್ ತುಜ್ಕೋ ದಿಯಾ (Maine Dil Tujhko Diya) ಚಲನಚಿತ್ರದೊಂದಿಗೆ ತಮ್ಮ ವೃತ್ತಿ ಜೀವನವನ್ನು(Career) ಪ್ರಾರಂಭಿಸಿದರು. ಇದರ ನಂತರ ಅವರು ಇನ್ನೂ ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿದರು, ಆದರೆ ಅವರಿಗೆ ಹೆಚ್ಚಿನ ಯಶಸ್ಸು ಸಿಗಲಿಲ್ಲ. ಸಮೀರಾ ಕೊನೆಯದಾಗಿ 2013ರ ಕನ್ನಡ ಚಲನಚಿತ್ರ ವರದನಾಯಕನಲ್ಲಿ ಕಾಣಿಸಿಕೊಂಡಿದ್ದರು. ಚಿತ್ರರಂಗದಲ್ಲಿ ಯಶಸ್ಸು ಕಾಣದ ಸಮೀರಾ 2014ರಲ್ಲಿ ಉದ್ಯಮಿಯನ್ನು ಮದುವೆಯಾಗಿ ಸೆಟಲ್‌ ಆದರು. ಸಮೀರಾ ಈಗ ಎರಡು ಮಕ್ಕಳ ತಾಯಿ ವಾಸ್ತವವಾಗಿ, ಮೊದಲ ಬಾರಿಗೆ ತಾಯಿಯಾದ ನಂತರ, ಆಕೆಯ ತೂಕವು 102 ಕೆ.ಜಿಗೆ ತಲುಪಿತು. ಸಮೀರಾ ರೆಡ್ಡಿ ಜೀವನಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಕೆಳಗೆ ಓದಿ. 

ಚಿತ್ರಗಳು ಯಶಸ್ವಿಯಾಗದಿದ್ದಾಗ ಸಮೀರಾ ರೆಡ್ಡಿ ಮದುವೆಯಾಗಲು ನಿರ್ಧರಿಸಿದರು. ಅವರು ಎರಡೂವರೆ ವರ್ಷಗಳ ಡೇಟಿಂಗ್ ನಂತರ 2014 ರಲ್ಲಿ ಉದ್ಯಮಿ ಅಕ್ಷಯ್ ವರ್ದೆ ಅವರನ್ನು ವಿವಾಹವಾದರು. ಸ್ವಲ್ಪ ಸಮಯದವರೆಗೆ
ಕ್ರಿಕೆಟಿಗ ಇಶಾಂತ್ ಶರ್ಮಾ ಜೊತೆಗೆ ಸಮೀರಾ ಅವರ ಹೆಸರು ಕೆಳಿಬಂದಿತ್ತು.

ಪತಿ ಅಕ್ಷಯ್ ಮೋಟಾರ್ ಸೈಕಲ್ ಬ್ಯುಸಿನೆಸ್‌ ಮಾಡುತ್ತಾರೆ ಮತ್ತು  ಸಮೀರಾ  ಬೈಕ್‌ಗಳನ್ನು ತುಂಬಾ ಇಷ್ಟಪಡುತ್ತಾರೆ. ಆ ಕಾರಣದಿಂದ  ಅಕ್ಷಯ್ ಮದುವೆಯ ದಿನ ಕುದುರೆ ಅಥವಾ ಕಾರಿನಲ್ಲಿ ಬರಲಿಲ್ಲ, ಮೋಟಾರ್ ಸೈಕಲ್ ಮೇಲೆ ಬಂದರು.

ಮದುವೆಯ ನಂತರ, ಸಮೀರಾ ಮೇ 2015 ರಂದು ಮಗ ಹನ್ಸ್‌ಗೆ ಜನ್ಮ ನೀಡಿದಳು. ಮಗನ ಜನನದ ನಂತರ, ಅವರ ತೂಕ 102 ಕೆಜಿ ತಲುಪಿತ್ತು. 'ಸೆಕ್ಸಿ ಸ್ಯಾಮ್‌ ಆಗಿದ್ದ ನಾನು  ನಂತರ ದಪ್ಪವಾದೆ. ನನ್ನ ತೂಕವು 32 ಕೆಜಿಗೆ ಏರಿತು ಮತ್ತು ನನ್ನನ್ನು ಗುರುತಿಸಲು ಸಹ ಸಾಧ್ಯವಾಗಲಿಲ್ಲ. ನಾನು ಮನೆಯಿಂದ ಹೊರಗೆ ಹೋಗುವಾಗ ಜನ ಇದು  ಸಮೀರಾ ರೆಡ್ಡಿ ನಾ? ಎಂದು ಹೇಳುತ್ತಿದ್ದರು' ಎಂದು ಸಮೀರಾ ಸಂದರ್ಶನವೊಂದರಲ್ಲಿ ಹೇಳಿದ್ದರು. 

ಪ್ರೆಗ್ನೆನ್ಸಿ ನಂತರ ತೂಕ ಹೆಚ್ಚಾದ ಕಾರಣ ಸಮೀರಾ ರೆಡ್ಡಿ ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ದರು. ಇದಕ್ಕೆ ಟ್ರೋಲರ್‌ಗಳಿಗೆ ಉತ್ತರಿಸಿದ ಅವರು, ಗರ್ಭಧಾರಣೆಯ ನಂತರ ವೇಗವಾಗಿ ತೂಕ ಇಳಿಸಿಕೊಳ್ಳುವ ಕರೀನಾ ಕಪೂರ್ ಎಲ್ಲರೂ ಆಗಲು ಸಾಧ್ಯವಿಲ್ಲ.  ನನಗೆ Alopecia Areata ಎಂಬ ಕಾಯಿಲೆ ಬಂದಿತು.  ಆದರೆ, ಮಗ ಹುಟ್ಟಿದ 6 ತಿಂಗಳ ನಂತರ ಸರಿಯಾದೆ' ಎಂದು ಹೇಳಿದ್ದಾರೆ. 

ಈಗ ಸಮೀರಾ ತನ್ನ ಫಿಟ್ನೆಸ್ ಬಗ್ಗೆ ಸಾಕಷ್ಟು ಜಾಗೃತಳಾಗಿದ್ದಾರೆ. ಜಿಮ್‌ನ ಹೊರತಾಗಿ, ಅವರು ಈಜುವುದನ್ನು ನ್ಯಾಚುರಲ್‌ ವರ್ಕೌಟ್‌ ಎಂದು ಪರಿಗಣಿಸುತ್ತಾರೆ ಮತ್ತು ಇದು ಅವರ ಫಿಟ್‌ನೆಸ್‌ನ ದೊಡ್ಡ ರಹಸ್ಯವಾಗಿದೆ. ಈಜು ಇಡೀ ದೇಹಕ್ಕೆ ವ್ಯಾಯಾಮ ನೀಡುತ್ತದೆ.ಶೇಪ್‌ನಲ್ಲಿರಲು ಮತ್ತು ತೂಕವನ್ನು ನಿಯಂತ್ರಿಸಲು ಇದು ಅತ್ಯುತ್ತಮ ಮಾರ್ಗವಾಗಿದೆ  ಎಂದು ಅವರು ನಂಬುತ್ತಾರೆ. 

ಸಮೀರಾ ರೆಡ್ಡಿ ಈಗ ಸಿನಿಮಾದಿಂದ ಅಂತರ ಕಾಯ್ದುಕೊಂಡು ಸಮಾಜ ಸೇವಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಅವರು NGO ಕ್ರಯೋನ್ಸ್ ಮತ್ತು ಡ್ರೀಮ್ಸ್ ಹೋಮ್ಸ್ ಜೊತೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಂಸ್ಥೆಯು ನಿರಾಶ್ರಿತ ಮಕ್ಕಳಿಗೆ ಮನೆ ಮತ್ತು ಭದ್ರತೆಯನ್ನು ಒದಗಿಸಲು ಕೆಲಸ ಮಾಡುತ್ತದೆ.

ಅಂದಹಾಗೆ, ಸಮೀರಾ ತನ್ನ ಅತ್ತೆಯೊಂದಿಗೆ ಯೂಟ್ಯೂಬ್ ಚಾನೆಲ್ ಅನ್ನು ಸಹ ನಡೆಸುತ್ತಿದ್ದಾರೆ. ಇದು ಅಡುಗೆ ಚಾನೆಲ್. ಈ ಕುರಿತು ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಲಾಕ್‌ಡೌನ್ ಸಮಯದಲ್ಲಿ, ಅವರು ಅನೇಕ ವೀಡಿಯೊಗಳನ್ನು ಮಾಡಿದರು, ಅದು ತುಂಬಾ ವೈರಲ್ ಸಹ ಆಯಿತು.

ಸಮೀರಾ ತಮ್ಮ 11 ವರ್ಷಗಳ ವೃತ್ತಿಜೀವನದಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಇವುಗಳಲ್ಲಿ ಮುಸಾಫಿರ್, ಡರ್ನಾ ಮನ ಹೈ, ಪ್ಲಾನ್, ಟ್ಯಾಕ್ಸಿ ನಂ. 9211, ಮ್ಯಾಪ್, ಫೂಲ್ ಅಂಡ್ ಫೈನಲ್, ಒನ್ ಟು ಥ್ರೀ, ಕಾಲಪುರುಷ, ದೇ ದಾನದನ್, ರೆಡ್ ಅಲರ್ಟ್ ಮತ್ತು ಚಕ್ರವ್ಯೂಹ ಮುಂತಾದ ಸಿನಿಮಾಗಳು ಸೇರಿವೆ.

click me!