ಇದು ಪ್ರೊಡಕ್ಷನ್ ಹೌಸ್ ಅಲ್ಲ, ಆಫೀಸ್: ತಡವಾಗಿ ಬಂದ ನಟಿ ಅನನ್ಯಾಗೆ ಛೀಮಾರಿ ಹಾಕಿದ NCB ಆಫೀಸರ್

First Published | Oct 23, 2021, 5:42 PM IST
  • NCB ಕಚೇರಿಗೆ ತಡವಾಗಿ ಬಂದ ಬಾಲಿವುಡ್ ನಟಿ ಅನನ್ಯಾ ಪಾಂಡೆ
  • ತಡವಾಗಿ ಬರೋಕ್ಕೆ ಇದು ಪ್ರೊಡಕ್ಷನ್ ಹೌಸ್ ಅಲ್ಲ ಎಂದ ಆಫೀಸರ್

ಮುಂಬೈ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಸುತ್ತಿನ ವಿಚಾರಣೆಗೆ ಕರೆದಿದ್ದ ನಟಿ ಅನನ್ಯ ಪಾಂಡೆ ಮೂರು ಗಂಟೆ ತಡವಾಗಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಕಚೇರಿಗೆ ತಲುಪಿದ್ದಾರೆ. NCB ಝೋನಲ್ ಡೈರೆಕ್ಟರ್ ಸಮೀರ್ ವಾಂಖೆಡೆ ಅವರು ತಡವಾಗಿ ಬಂದಿದ್ದಕ್ಕಾಗಿ ನಟಿಗೆ ಛೀಮಾರಿ ಹಾಕಿದ್ದಾರೆ.

ನಟಿಯನ್ನು ಮುಂಬೈ ಡ್ರಗ್ಸ್ ಕೇಸ್ ಸಂಬಂಧ 'ಸೆಂಟ್ರಲ್ ಏಜೆನ್ಸಿ'ಯಿಂದ ವಿಚಾರಣೆಗೆ ಕರೆಸಲಾಗಿದೆ. ನಟಿಯನ್ನು ವಿಚಾರಣೆಗೆ ಕರೆಸಲಾಗಿದೆ, ಇದು 'ಪ್ರೊಡಕ್ಷನ್ ಹೌಸ್' ಅಲ್ಲ ಎಂದು ನೆನಪಿಸಿದ್ದಾರೆ ಸಮೀರ್.

Tap to resize

ಅನನ್ಯಾ ಅವರನ್ನು ಎನ್‌ಸಿಬಿ ಅಧಿಕಾರಿಗಳು 4 ಗಂಟೆಗಳ ಕಾಲ ನಿರಂತರವಾಗಿ ಗ್ರಿಲ್ ಮಾಡಿದ್ದಾರೆ. ಅಕ್ಟೋಬರ್ 25 ರಂದು ಆಕೆಯನ್ನು ಮತ್ತೆ ವಿಚಾರಣೆಗೆ ಕರೆಯಲಾಗಿದೆ ಎಂದು ಹೇಳಲಾಗಿದೆ.

ವಿಚಾರಣೆಯ ಸಮಯದಲ್ಲಿ ಅನನ್ಯಾ ಆರ್ಯನ್ ಖಾನ್‌ಗೆ ನಿಷಿದ್ಧ ಮಾದಕವಸ್ತುಗಳನ್ನು ಸಂಗ್ರಹಿಸುವಲ್ಲಿ ಅಥವಾ ಪಡೆಯುವಲ್ಲಿ ಮತ್ತು ಶಂಕಿತ ಪೆಡ್ಲರ್‌ಗಳ ಸಂಬಂಧದದಲ್ಲಿ ನಟಿಯ ಪಾತ್ರದ ಬಗ್ಗೆ ಪ್ರಶ್ನಿಸಲಾಯಿತು.

ಎನ್‌ಸಿಬಿ ಮೂಲಗಳ ಪ್ರಕಾರ, 2018-19ನೇ ಸಾಲಿನಲ್ಲಿ, ಅನನ್ಯ ಕೆಲವು ಡ್ರಗ್ ಪೆಡ್ಲರ್‌ಗಳ ವಿವರಗಳನ್ನು ಆರ್ಯನ್‌ಗೆ ನೀಡಿದ್ದರು ಎನ್ನಲಾಗಿದೆ. ಆದರೆ ನಟಿ ಅದನ್ನು ನಿರಾಕರಿಸಿದ್ದಾರೆ.

ಈ ಮಾಹಿತಿಯು ಅನನ್ಯಾ ಅವರೊಂದಿಗಿನ ಆರ್ಯನ್ ಅವರ ವಾಟ್ಸಾಪ್ ಚಾಟ್‌ಗಳಿಂದ ಪಡೆಯಲಾಗಿದೆ ಎಂದು ವರದಿಯಾಗಿದೆ. ನಟಿ ಎನ್‌ಸಿಬಿಗೆ ಸಹಕರಿಸುತ್ತಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ.

ಆಕೆ ಎಂದಿಗೂ ಡ್ರಗ್ಸ್ ಸೇವಿಸಿಲ್ಲ ಅಥವಾ ಸರಬರಾಜು ಮಾಡಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಹಿಂದೆ, ಮುಂಬೈನ ಕ್ರೂಸ್ ಡ್ರಗ್ಸ್ ತನಿಖೆಯ ಕುರಿತು ಮಾಧ್ಯಮಗಳೊಂದಿಗೆ ಸಂವಾದ ನಡೆಸುತ್ತಿದ್ದಾಗ, ಎನ್ಸಿಬಿ ಅಧಿಕಾರಿಯೊಬ್ಬರು, ತನಿಖೆ ನಡೆಯುತ್ತಿದೆ. ಎನ್‌ಸಿಬಿ ಅಧಿಕಾರಿಗಳು ವಿಚಾರಣೆಗಾಗಿ ವ್ಯಕ್ತಿ ಅಥವಾ ಸ್ಥಳಕ್ಕೆ ಭೇಟಿ ನೀಡಿದಾಗ ಆ ವ್ಯಕ್ತಿ ಅಪರಾಧಿ ಅಥವಾ ತನಿಖೆಗೆ ಒಳಗಾಗಿದ್ದಾನೆ ಎಂದರ್ಥವಲ್ಲ. ಹಲವಾರು ಕಾರ್ಯವಿಧಾನಗಳನ್ನು ಅನುಸರಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದರು.

ಪ್ರಸ್ತುತ ಆರ್ಥರ್ ರೋಡ್ ಜೈಲಿನಲ್ಲಿರುವ ಸ್ಟಾರ್ ಕಿಡ್ ಆರ್ಯನ್ ಖಾನ್ ಅಕ್ಟೋಬರ್ 20 ರಂದು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ವಿಶೇಷ ನ್ಯಾಯಾಲಯವು ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಅಕ್ಟೋಬರ್ 26 ರಂದು ಹೈಕೋರ್ಟ್ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಲಿದೆ.

Latest Videos

click me!