ಅಮಿತಾಭ್ ಮನೆ ಬಾಡಿಗೆದಾರರಾದ ಕೃತಿ ಸನೋನ್

Published : Oct 23, 2021, 05:01 PM ISTUpdated : Oct 23, 2021, 05:06 PM IST

ಬಾಲಿವುಡ್ ನಟಿ ಕೃತಿ ಸನೋನ್ (Kriti Sanon)ಅವರು ಶೀಘ್ರದಲ್ಲೇ   ಹಮ್ ದೋ ಹಮಾರೆ ದೋ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೃತಿ 'ಮಿಮಿ' ಸಿನಿಮಾದ ಯಶಸ್ಸಿನ ನಂತರ  ಮರ್ಸಿಡಿಸ್ ಬೆಂಝ್  GLS 600 SUV ಕಾರನ್ನು ಖರೀದಿಸಿರುವುದಲ್ಲದೆ ಹೊಸ ಮನೆಗೆ ಸಹ  ಹೋಗಲಿದ್ದಾರೆ.  ವರದಿಗಳ ಪ್ರಕಾರ ಕೃತಿ ಅಂಧೇರಿಯ್ಲಲಿ  ಹೊಸ ಅಪಾರ್ಟ್ಮೆಂಟ್ ಬಾಡಿಗೆ ತೆಗೆದು ಕೊಂಡಿದ್ದಾರೆ. ಪ್ರಮುಖ ವಿಷಯವೆಂದರೆ ಈ ಮನೆ ಅಮಿತಾಭ್ ಬಚ್ಚನ್ (Amitabh Bachchan) ಅವರದ್ದಾಗಿದೆ. ಆದಾಗ್ಯೂ, ಕೃತಿ ಒಬ್ಬರೇ  ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ನಟಿಯಲ್ಲ. ಇನ್ನೂ ಅನೇಕ ಬಾಲಿವಡ್‌ ನಟಿಯರು ಬಾಡಿಗೆ ಮನೆಯಲ್ಲಿದ್ದಾರೆ. ಅವರು ಯಾರಾರು ನೋಡೋಣ.

PREV
19
ಅಮಿತಾಭ್ ಮನೆ ಬಾಡಿಗೆದಾರರಾದ ಕೃತಿ ಸನೋನ್

ಕೃತಿ ಸನೋನ್: ವರದಿಯ ಪ್ರಕಾರ ಕೃತಿ ಸನೋನ್ ಹೊಸ ಮನೆಯನ್ನು ಬಾಡಿಗೆಗೆ ತೆಗೆದು ಕೊಂಡಿದ್ದಾರೆ ಮತ್ತು ಆ ಮನೆ ಅಂಧೇರಿಯಲ್ಲಿದೆ. ಇದು ಅಮಿತಾಬ್‌ ಬಚ್ಚನ್‌ ಅವರಿಗೆ ಸೇರಿದ ಡ್ಯುಪ್ಲೆಕ್ಸ್ ಅಪಾರ್ಟ್ಮೆಂಟ್ ಆಗಿದೆ. ಮೊದಲ ನೋಟದಲ್ಲೇ ಕೃತಿ ಮನೆಯನ್ನು ಇಷ್ಟ ಪಟ್ಟಿದ್ದಾರೆ ಮತ್ತು  ಶಿಫ್ಟ್‌ ಆಗಲಿದ್ದಾರೆ. 

29

ಕತ್ರಿನಾ ಕೈಫ್: ಬಾಲಿವುಡ್‌ನಲ್ಲಿ  2003 ರಿಂದಲೂ ಸಕ್ರಿಯವಾಗಿರುವ ನಟಿ  ಕತ್ರಿನಾ ಕೈಫ್‌ ಭಾರತದಲ್ಲಿ ಸ್ವಂತ ಮನೆ ಹೊಂದಿಲ್ಲ. ಅವರು ಇನ್ನೂ ಮುಂಬೈನಲ್ಲಿ  ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರು ಮುಂಬೈನ ಅಂಧೇರಿ ವೆಸ್ಟ್‌ನಲ್ಲಿರುವ ಮೌರ್ಯ ಹೌಸ್‌ನಲ್ಲಿ ಸಹೋದರಿ ಇಸಾಬೆಲ್ ಜೊತೆ  ವಾಸಿಸುತ್ತಿದ್ದಾರೆ. ಕತ್ರೀನಾ ಆರಂಭಿಕ ದಿನಗಳಲ್ಲಿ  ಬಂದ್ರಾದ  ಗುಲ್ದೇವ್‌ ಸಾಗರ್‌ದಲ್ಲಿದ್ದರು. 2014 ರಲ್ಲಿ ಅವರು ಆಗಿನ ಬಾಯ್‌ ಫ್ರೆಂಡ್‌ ರಣಬೀರ್‌ ಕಪೂರ್‌ ಜೊತೆ ಕಾರ್ಟರ್ ರೋಡ್ ಸಿಲ್ವರ್ ಸ್ಯಾಂಡ್ ಅಪಾರ್ಟ್ಮೆಂಟ್‌ಗೆ ಶಿಫ್ಟ್ ಆಗಿದ್ದರು ಆದರೆ ಇಬ್ಬರೂ ಬೇರೆಯಾದ ನಂತರ 2016ರಲ್ಲಿ ಅಂಧೇರಿಯಲ್ಲಿರುವ ಮನೆಗೆ  ತೆರಳಿದರು.

 

39

ಜಾಕ್ವೆಲಿನ್ ಫರ್ನಾಂಡಿಸ್: ಸಾಲ್ಮಾನ್‌ ಖಾನ್‌ ಅವರ ಕಿಕ್‌ ಸಿನಿಮಾದ ಕೋ ಸ್ಟಾರ್‌  ಜಾಕ್ವೆಲಿನ್ ಫರ್ನಾಂಡಿಸ್‌  ಬಾಲಿವುಡ್‌ಗೆ ಎಂಟ್ರಿ ನೀಡಿ  12 ವರ್ಷಗಳಾಗಿವೆ, ಆದರೆ ಅವರು ಇನ್ನೂ  ತಮ್ಮ ಸ್ವಂತ ಮನೆ ಹೊಂದಿಲ್ಲ ಮತ್ತು ಅವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಾರೆ.  ಕೆಲವು ತಿಂಗಳ ಹಿಂದೆ, ಜಾಕ್ವೆಲಿನ್,  ಜುಹುವಿನಲ್ಲಿರುವ ಪ್ರಿಯಾಂಕ ಚೋಪ್ರಾ ಅವರ ಅಪಾರ್ಟ್‌ಮೆಂಟ್‌ 'ಕರ್ಮಯೋಗ'ದ ಬಾಡಿಗೆದಾರರಾಗಿದ್ದಾರೆ. ವರದಿಗಳ ಪ್ರಕಾರ, ಜಾಕ್ವೆಲಿನ್ ಅವರ ಮನೆ ಬಾಡಿಗೆ ಪ್ರತಿ ತಿಂಗಳಿಗೆ ರೂ 6.78 ಲಕ್ಷ

49

ಅದಿತಿ ರಾವ್ ಹೈದರಿ: ಸಂಜಯ್‌ ಲೀಲಾ ಬನ್ಸಾಲಿ ಅವರ ಪದ್ಮಾವತ್‌ ಸಿನಿಮಾದಲ್ಲಿ ಕೆಲಸ ಮಾಡಿರುವ ಅದಿತಿ ರಾವ್‌ ಹೈದರಿ ಹಲವು ವರ್ಷಗಳಿಂದ ಬಾಲಿವುಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅದಿತಿ ಅವರ  ಕುಟುಂಬ ವಾಸಿಸುತ್ತಿರುವ ಹೈದರಾಬಾದ್‌ನಲ್ಲಿ ಸ್ವಂತ ಮನೆ ಹೊಂದಿದ್ದಾರೆ ಮತ್ತು ಪ್ರಸ್ತುತ ಮುಂಬೈನ ಅಂಧೇರಿಯಲ್ಲಿ ಬಾಡಿಗೆ ಮನೆಯಲ್ಲಿದ್ದಾರೆ.

59

ಇಲಿಯಾನಾ  ಡಿ ಕ್ರೂಜ್: ಅಕ್ಷಯ್ ಕುಮಾರ್‌  ಅವರ  'ರುಸ್ತುಮ್' ಸಿನಿಮಾ ಫೇಮ್‌ನ ಇಲಿಯಾನಾ ಡಿ ಕ್ರುಜ್ ಬರ್ಫಿ ಸಿನಿಮಾದ ಮೂಲಕ ಬಾಲಿವುಡ್ ಪಾದಾರ್ಪಣೆ ಮಾಡಿದರು.  ಮೂಲತಃ ಗೋವಾದ ನಿವಾಸಿಯಾಗಿರುವ ಇಲಿಯಾನಾ  ಈಗ ಮುಂಬೈ ಅಂಧೇರಿಯಲ್ಲಿರುವ ಒಂದು ಬಾಡಿಗೆ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ.
 

69

ಹುಮಾ ಕುರೇಶಿ: ಬಾಲಿವುಡ್‌ನ ಗ್ಲಾಮರ್ಸ್‌   ನಟಿಯರಲ್ಲಿ ಒಬ್ಬರಾದ ಹುಮಾ  ಕುರೇಶಿ  ದೆಡ್‌ ಇಶ್ಕಿಯಾ 2 ಮತ್ತು ಗ್ಯಾಂಗ್ಸ್ ಆಫ್ ವಾಸೆಪುರ್‌-1 ಸಿನಿಮಾದಲ್ಲಿನ  ತನ್ನ ನಟನೆಯ ಮೂಲಕ  ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಸ್ತುತ,  ಕುರೇಶಿ ಅವರ ಸಹೋದರ ಸಕೀಬ್‌   ಸಲೀಮ್  ಜೊತೆ ಮುಂಬೈನ ಅಂಧೇರಿಯಲ್ಲಿ  5 BHK ಅಪಾರ್ಟ್ಮೆಂಟ್  ಒಂದರಲ್ಲಿ ಬಾಡಿಗೆಗೆ ಇದ್ದಾರೆ.
 

79

ರಿಚಾ ಚಡ್ಡಾ: ನಟಿ ರಿಚಾ ಚಧಾ ಗ್ಯಾಂಗ್ಸ್  ಅಫ್‌ ವಾಸೆಪುರ್‌, ಫುಕ್ರೆ, ಮಸನ್, ಕ್ಯಾಬರೆ, ಸರಬ್ಜಿತ್ ಮತ್ತು ಮೇ ಔರ್‌ ಚಾರ್ಲಿ ಮುಂತಾದ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಇವರು  ಕಳೆದ ಹಲವು ವರ್ಷಗಳಿಂದ ವೆರ್ಸೋವಾ ಬಾಡಿಗೆಯ ಅಪಾರ್ಟ್ಮೆಂಟ್ ವಾಸಿಸುತ್ತಿದ್ದಾರೆ.  ಇವರು ಬಾಲಿವುಡ್‌ಗೆ ಪಾದರ್ಪಾಣೆ ಮಾಡಿ 12 ವರ್ಷಗಳಾಗಿವೆ.

89

ಪರಿಣೀತಿ ಚೋಪ್ರಾ: ಪ್ರಿಯಾಂಕ ಚೋಪ್ರ ತಂಗಿ ಪರಿಣೀತಿ ಚೋಪ್ರಾ ಸಹ ಮುಂಬೈ ಬಾಡಿಗೆ ಮನೆಯಲ್ಲಿ ವಾಸಿಸುತ್ತಾರೆ "ಲೇಡೀಸ್ ವರ್ಸ್‌ಸ್‌ ರಿಕಿ ಬೇಲ್‌ ಮೂಲಕ ಕೆರಿಯರ್‌ ಶುರುಮಾಡಿದ ಪರಿಣೀತಿ ಚೋಪ್ರಾ ಮುಂಬೈನ ಸಬ್‌ಅರ್ಬನ್‌ ಏರಿಯಾದಲ್ಲಿ ಬಾಡಿಗೆ ಮನೆಯಲ್ಲಿದ್ದಾರೆ. ಬಾಲಿವುಡ್‌ ಪ್ರವೇಶೀಸಿ  10 ವರ್ಷಗಳ ಕಳೆದು ಚೋಪ್ರಾ  ಇಲ್ಲಿಯವರೆಗೆ ಅವರು ಸ್ವಂತ ಮನೆ ಮಾಡಿಲ್ಲ

99

ಚಿತ್ರಾಂಗದಾ ಸಿಂಗ್‌: ನಟಿ ಚಿತ್ರಾಂಗದಾ ಸಿಂಗ್‌ ಸಹ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.  2010 ರಿಂದ ಬಾಡಿಗೆ ಮನೆಯಲ್ಲಿರುವ ಚಿತ್ರಾಂಗದಾ  ಅಂಧೇರಿಯಲ್ಲಿ ಹೊಸ ಮನೆಯನ್ನು ಖರೀದಿಸಿದ್ದಾರೆ ಮತ್ತು ಶೀಘ್ರದಲ್ಲೇ ಅಲ್ಲಿಗೆ ಶಿಫ್ಟ್ ಆಗಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ.ಚಿತ್ರಾಂಗದ  ಗಾಲ್ಫ್ ಆಟಗಾರ ಜ್ಯೋತಿ ರಾಂಧವ ವಿವಾಹವಾಗಿದ್ದರು ಮತ್ತು  2013 ರಲ್ಲಿ ಈ ಜೋಡಿ ಬೇರೆಯಾದರು.

click me!

Recommended Stories