ತಂದೆಯಲ್ಲಿ ಕ್ಷಮೆ ಕೇಳಿದ ಆರ್ಯನ್‌: ಮಗನ ನೋಡಿ ಕಣ್ಣೀರಿಟ್ಟ ಕಿಂಗ್‌ ಖಾನ್‌!

First Published | Oct 23, 2021, 4:35 PM IST

ಅಕ್ಟೋಬರ್ 2 ರಂದು ಕ್ರೂಸ್ ಡ್ರಗ್ಸ್ ಪಾರ್ಟಿ (Drug Party)ಪ್ರಕರಣದಲ್ಲಿ ಆರೆಸಟ್‌ ಆಗಿರುವ  ಶಾರುಖ್ ಖಾನ್ (Shah Rukh Khan) ಪುತ್ರ ಆರ್ಯನ್ ಖಾನ್ (Aryan Khan)  ಅಕ್ಟೋಬರ್ 8 ರಿಂದ ಆರ್ಯನ್ ಮುಂಬೈನ ಆರ್ಥರ್ ರೋಡ್‌ ಜೈಲಿನಲ್ಲಿದ್ದಾನೆ. ಶಾರುಖ್ ತನ್ನ ಮಗನನ್ನು ಆರ್ಥರ್ ರೋಡ್ ಜೈಲಿನಲ್ಲಿ  ಭೇಟಿಯಾದರು. ಇಬ್ಬರೂ ಸುಮಾರು 20 ನಿಮಿಷಗಳ ಕಾಲ ಮಾತಾನಾಡಿದ್ದಾರೆ ಹಾಗೂ ಆರ್ಯನ್‌ ಈ ಸಮಯದಲ್ಲಿ ತಂದೆಯ ಬಳಿ ಕ್ಷಮೆ ಕೇಳಿದ್ದಾನೆ ಮತ್ತು ಇಬ್ಬರೂ ಕಣ್ಣೀರಿಟ್ಟಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಇದರ ಬಗ್ಗೆ ಪೂರ್ಣ ವಿವರಕ್ಕಾಗಿ ಮುಂದೆ ಓದಿ. 

ಶಾರುಖ್‌ ಖಾನ್ ತನ್ನ ಮಗ ಆರ್ಯನ್ ಜೊತೆ ಸುಮಾರು 20 ನಿಮಿಷಗಳ ಕಾಲ ಇಂಟರ್‌ಕಾಮ್ ಮೂಲಕ ಜೈಲಿನ ಮೀಟಿಂಗ್ ಹಾಲ್‌ನಲ್ಲಿ ಮಾತನಾಡಿದ್ದಾರೆ ಎಂದು ವರದಿಗಳು ಹೇಳಿವೆ. COVID-19 ಸಾಂಕ್ರಾಮಿಕ ಪ್ರೋಟೋಕಾಲ್‌ನಿಂದ, ಜೈಲಿನಲ್ಲಿ ಫಿಸಿಕಲ್‌ ಮೀಟಿಂಗ್‌ಗೆ ಅನುಮತಿಸಲಾಗಲಿಲ್ಲ. 

ವರದಿಗಳ ಪ್ರಕಾರ, ಇಬ್ಬರೂ ಸುಮಾರು 20 ನಿಮಿಷಗಳ ಕಾಲ ಭೇಟಿಯಾದರು. ಸಂಭಾಷಣೆಯ ಸಮಯದಲ್ಲಿ, ಇಬ್ಬರ ನಡುವೆ ಗಾಜಿನ ಗೋಡೆ ಇತ್ತು. ಇಬ್ಬರು ಇಂಟರ್‌ಕಾಮ್‌ನಲ್ಲಿ ಮಾತನಾಡಿದ್ದಾರೆ. ಈ ಸಭೆಯಲ್ಲಿ ಜೈಲು ಅಧಿಕಾರಿಗಳು ಕೂಡ ಹಾಜರಿದ್ದರು.

Tap to resize

ಈ ಹಿಂದೆ ಶಾರುಖ್ ಮತ್ತು ಅವರ ಪತ್ನಿ ಗೌರಿ ಖಾನ್  ಮಗ ಆರ್ಯನ್ ಜೊತೆ ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದರು. ಈ ದಿನಗಳಲ್ಲಿ ಇಬ್ಬರೂ ಮಗನ ಕಾರಣ ಚಿಂತಿತರಾಗಿದ್ದಾರೆ ಮತ್ತು ಅವನ ಆರೋಗ್ಯದ ಕುರಿತು ಜೈಲಿನ ಅಧಿಕಾರಿಗಳಿಂದ ನಿರಂತರವಾಗಿ ಮಾಹಿತಿ ಪಡೆಯುತ್ತಲೇ ಇರುವುದು ತಿಳಿದು ಬಂದಿದೆ.

ಇದುವರೆಗೆ ಆರ್ಯನ್‌ ಜಾಮೀನು ಮೂರನೇ ಬಾರಿಗೆ ತಿರಸ್ಕರಿಸಲ್ಪಟ್ಟಿದೆ ಮತ್ತು ಈಗ NCB ಅಧಿಕಾರಿಗಳು ಕೆಲವು ದಾಖಲೆಗಳಿಗೆ ಸಂಬಂಧಿಸಿದಂತೆ ಶಾರುಖ್‌ ಖಾನ್‌ ಅವರ ಮನೆ ಮನ್ನತ್‌ಗೆ ಭೇಟಿ ನೀಡಿದರು. ಅಕ್ಟೋಬರ್ 2ರಂದು  ಆರ್ಯನ್ ಖಾನ್ ನನ್ನು ಬಂಧಿಸಿದ ನಂತರ ಶಾರುಖ್ ಖಾನ್  ತನ್ನ ಮಗನನ್ನು ಭೇಟಿಯಾಗಿದ್ದು ಇದೇ ಮೊದಲು. 

ಅಕ್ಟೋಬರ್‌ 21 ರಂದು, ಶಾರುಖ್ ಖಾನ್ ತನ್ನ ಮಗನನ್ನು ಭೇಟಿಯಾಗಲು ಮುಂಬೈನ ಆರ್ಥರ್ ರೋಡ್ ಜೈಲಿಗೆ ಪ್ರವೇಶಿಸುವ ಮತ್ತು ಹೊರ ಹೋಗುವ ಸಮಯದ ಹಲವು ಫೋಟೊಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Peepingmoon.com ನಲ್ಲಿ ಪ್ರಕಟವಾದ ವರದಿಯಲ್ಲಿ, SRK ಮತ್ತು ಆರ್ಯನ್ ಕೌಂಟರ್ ನಂಬರ್ 12 ರಲ್ಲಿ ಪರಸ್ಪರ ಎದರುಬದರು ಕುಳಿತಿದ್ದರು ಮತ್ತು ಅವರ ನಡುವೆ ಗ್ಲಾಸ್‌ ಪಾರ್ಟೇಶನ್‌ ಇತ್ತು. ಅವರ ಸಭೆಯಲ್ಲಿ ಕೆಲವು ಜೈಲು ಅಧಿಕಾರಿಗಳು ಮಾತ್ರ ಹಾಜರಿದ್ದರು ಮತ್ತು  ಅವರಿಬ್ಬರು ಕೆಲವು ನಿಮಿಷಗಳ ಕಾಲ ಪರಸ್ಪರ ಮಾತನಾಡಲಿಲ್ಲ ಎಂದು ಹೇಳಲಾಗಿದೆ.  

ನಂತರ, ಶಾರುಖ್‌ಗೆ ಮಗನ ನೋಡಿ ಅಳು ತಡೆಯಲು ಸಾಧ್ಯವಾಗಲಿಲ್ಲ ಮತ್ತು ಆರ್ಯನ್ ಕೂಡ ಅಳಲು ಪ್ರಾರಂಭಿಸಿದನು. ಆರ್ಯನ್ ತನ್ನ ತಂದೆಗೆ, 'ನನ್ನನ್ನು ಕ್ಷಮಿಸಿ' ಎಂದು ಹೇಳಿದನು ಮತ್ತು 'ನಾನು ನಿನ್ನನ್ನು ನಂಬುತ್ತೇನೆ ... ಕ್ಷಮಿಸು' ಎಂದು ಶಾರುಖ್‌ ಮಗನಿಗೆ ಹೇಳಿದರು ಎಂದು ವರದಿಯಾಗಿದೆ. 

ನಂತರ ಶಾರುಖ್‌ ಮಗನಿಗೆ ಏನನ್ನಾದರೂ ತಿಂದಿದ್ದೀಯಾ ಎಂದು ಕೇಳಿದರು. ಅದಕ್ಕೆ ಆರ್ಯನ್ ಇಲ್ಲ ಎಂದು ಉತ್ತರಿಸಿದನು. ಜೈಲರ್‌ಗಳಲ್ಲಿ ತಿನ್ನಲು ಏನಾದರೂ ನೀಡಬಹುದೇ ಎಂದು ಕೇಳಿಕೊಂಡಾಗ ನ್ಯಾಯಾಲಯದ ಅನುಮತಿಯಿಲ್ಲದೆ ಹೊರಗಿನ ಆಹಾರವನ್ನು ಅನುಮತಿಸಲಾಗುವುದಿಲ್ಲ ಎಂದು ಶಾರುಖ್‌ಗೆ ಜೈಲರ್ ಹೇಳಿದರು ಎನ್ನಲಾಗಿದೆ.
 

ಹೊರಡುವ ಮುನ್ನ ಶಾರುಖ್  ಇತರ ಕೈದಿಗಳಿಗೆ ಆರ್ಯನನ್ನು ನೋಡಿಕೊಳ್ಳುವಂತೆ ವಿನಂತಿಸಿದರು ಮತ್ತು ನಟ ಆರ್ಯನ್ ಖಾನ್ ಜೊತೆ ಬಂಧಿತರಾದ ಇತರ ಕೈದಿಗಳ ಕುಟುಂಬ ಸದಸ್ಯರನ್ನು ಕೂಡ ಭೇಟಿಯಾಗಿದ್ದಾರೆ ಎಂದು ಹೇಳಲಾಗಿದೆ.

Latest Videos

click me!