ಟಾಲಿವುಡ್‌ನ ಕ್ಯೂಟ್ ಕಪಲ್ ವಿಚ್ಛೇದನೆ ಭಾರೀ ಸುದ್ದಿಯಾಗುತ್ತಿದೆ. ಎಷ್ಟೇ ಮಾತುಕತೆ ನಂತರವೂ ಇಬ್ಬರ ನಡುವೆ ಹೊಂದಾಣಿಕೆ ಬರುತ್ತಿಲ್ಲ. ಹಾಗಾಗಿ ವಿಚ್ಛೇದನೆ ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾಗಿದೆ. ಸಮಂತಾ ಹಾಗೂ ನಾಗಚೈತನ್ಯ ಬೇರೆಯಾಗುವುದು ಬಹುತೇಕ ಖಚಿತವಾಗುತ್ತಿದೆ
ಸಮಂತಾ ಹಾಗೂ ನಾಗಚೈತನ್ಯ ಸಡನ್ನಾಗಿ ಮದುವೆಯಾದವರಲ್ಲ. ಸುಮಾರು 10 ವರ್ಷಗಳ ಪ್ರೀತಿ ಮದುವೆಯಲ್ಲಿ ಕೊನೆಯಾಗಿತ್ತು. 2017ರಲ್ಲಿ ಅದ್ಧೂರಿಯಾಗಿ ಕ್ರಿಶ್ಚಿಯನ್ ಸಂಪ್ರದಾಯ ಹಾಗೂ ಹಿಂದೂ ಸಂಪ್ರದಾಯದಂತೆ ಸತಿಪತಿಗಳಾಗಿದ್ದರು ಸ್ಯಾಮ್-ನಾಗ್
ಆದರೆ ಈಗಾಗಲೇ ಇವರಿಬ್ಬರು ವಿಚ್ಛೇದನೆ ಚರ್ಚೆ ಜೋರಾಗಿದ್ದು ಈಗಾಗಲೇ ನಾಗ ಚೈತನ್ಯ ತಮ್ಮ ಮನೆ ಬಿಟ್ಟು ತಂದೆ ಹಾಗೂ ಚಿಕ್ಕಮ್ಮನ ಜೊತೆ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಇಷ್ಟೇ ಅಲ್ಲದೆ ಸಮಂತಾ ಅವರೂ ಮನೆ ಬದಲಾಯಿಸಲಿದ್ದಾರೆ ಎನ್ನಲಾಗಿದೆ
ಫ್ಯಾಮಿಲಿ ಮ್ಯಾನ್ 2 ವೆಬ್ ಸಿರೀಸ್ ಮೂಲಕ ಬಾಲಿವುಡ್‌ನಲ್ಲಿಯೂ ಸದ್ದು ಮಾಡಿದ ಸಮಂತಾ ಬಾಲಿವುಡ್‌ಗೆ ನಿಧಾನವಾಗಿ ಎಂಟ್ರಿ ಕೊಡುತ್ತಿದ್ದಾರೆ. ಮೊದಲ ವೆಬ್ ಸಿರೀಸ್‌ನಲ್ಲಿ ಸಖತ್ ಫೇಮಸ್ ಆಗಿರೋದು ಪ್ಲಸ್ ಪಾಯಿಂಟ್
ಅಮೀರ್ ಖಾನ್ ಇತ್ತೀಚೆಗೆ ನಾಗ ಚೈತನ್ಯ ನಟಿಸಿದ ಲವ್ ಸ್ಟೋರಿ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿ ಹಾರೈಸಿದ್ದರು. ಅಂತೂ ಸ್ಟಾರ್ ಕಪಲ್ ಸಕ್ಸಸ್ ಹಾದಿಯಲ್ಲಿರುವಾಗಲೇ ಬ್ರೇಕಪ್ ಮಾಡಿಕೊಳ್ಳುತ್ತಿದ್ದಾರೆ
ಮೂಲಗಳ ಪ್ರಕಾರ ವಿಚ್ಛೇದನವು ಖಂಡಿತವಾಗಿಯೂ ದಂಪತಿಯ ನಿರ್ಧಾರ ಮಾಡಿಯಾಗಿದೆ. ಆದರೆ ಪ್ರಕ್ರಿಯೆಗಳು ಪೂರ್ಣವಾಗದ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸುತ್ತಿಲ್ಲ ಎಂದೂ ಹೇಳಲಾಗುತ್ತಿದೆ.
ಎರಡು ಮೂರು ತಿಂಗಳಲ್ಲಿ ವಿಚ್ಛೇದನೆ ಪ್ರಕ್ರಿಯೆಗಳು ಫೈನಲ್ ಆಗುವ ಸಾಧ್ಯತೆ ಇದೆ. ಹೀಗೇನಾದರೂ ಇವರ ಡಿವೋರ್ಸ್ ಫೈನಲ್ ಆದರೆ ಸಮಂತಾ ಜೀವನಾಂಶದಲ್ಲಿ 50 ಕೋಟಿ ರೂ ಪಡೆಯಲಿದ್ದಾರೆ ಎನ್ನಲಾಗಿದೆ