7 ತಿಂಗಳ ಬಳಿಕ ಸಮಂತಾ ಕಮ್ ಬ್ಯಾಕ್: ಹೆಲ್ತ್‌ ಪಾಡ್‌ಕಾಸ್ಟ್‌ ಮೂಲಕ ಕೆಲಸಕ್ಕೆ ವಾಪಸ್ಸಾಗುತ್ತಿರುವ ನಟಿ

Published : Feb 12, 2024, 05:42 PM IST

ದಕ್ಷಿಣ ಭಾರತದ ಜನಪ್ರಿಯ  ನಟಿ ಸಮಂತಾ ರುತ್ ಪ್ರಭು (Samantha Ruth Prabhu) 7 ತಿಂಗಳ ನಂತರ ಕೆಲಸಕ್ಕೆ ಮರಳುತ್ತಿದ್ದಾರೆ. ಈ ವಿಷಯವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಆದರೆ, ಈ ಬಾರಿ ಅವರು ಚಿತ್ರದ ಮೂಲಕ ಹಿಂತಿರುಗುತ್ತಿಲ್ಲ. ಹಾಗಾದರೆ ಸಮಂತಾ ಅವರ ಹೊಸ ಪ್ರಯತ್ನ ಯಾವುದು?

PREV
110
7 ತಿಂಗಳ ಬಳಿಕ ಸಮಂತಾ ಕಮ್ ಬ್ಯಾಕ್: ಹೆಲ್ತ್‌ ಪಾಡ್‌ಕಾಸ್ಟ್‌ ಮೂಲಕ ಕೆಲಸಕ್ಕೆ ವಾಪಸ್ಸಾಗುತ್ತಿರುವ ನಟಿ

ದಕ್ಷಿಣದ ನಟಿ ಸಮಂತಾ ರುತ್‌ ಪ್ರಭು 2022 ರಲ್ಲಿ ತಮ್ಮ ಅನಾರೋಗ್ಯವನ್ನು ಬಹಿರಂಗಪಡಿಸಿದ್ದರು ಮತ್ತು ಸುಮಾರು ಒಂದು ವರ್ಷದ ನಂತರ ಕೆಲಸದಿಂದ ವಿರಾಮ ತೆಗೆದುಕೊಂಡರು. 

210

ಆಕೆ ಆಟೋಇಮ್ಯೂನ್ ಕಾಯಿಲೆಯಾದ  ಮಯೋಸಿಟಿಸ್‌ನಿಂದ ಬಳಲುತ್ತಿರುವುದಾಗಿ ಹೇಳಿದ್ದರು ಮತ್ತು ಚಿಕಿತ್ಸೆಯ ಕಾರಣ ಸಂಪೂರ್ಣವಾಗಿ ಚಿತ್ರರಂಗದಿಂದ ದೂರ ಉಳಿದಿದ್ದರು.  
 

310

ಈಗ 36 ವರ್ಷದ ಸಮಂತಾ ರುತ್ ಪ್ರಭು ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು ತಾವು ಕೆಲಸಕ್ಕೆ ಮರುಳುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ.

410

'ಅಂತಿಮವಾಗಿ ನಾನು ಕೆಲಸಕ್ಕೆ ಮರಳುತ್ತಿದ್ದೇನೆ. ಇದರ ಹೊರತಾಗಿ, ಈ ಮಧ್ಯೆ ನಾನು ಸಂಪೂರ್ಣವಾಗಿ ಕೆಲಸವಿಲ್ಲದೇ ಇದ್ದೆ. ಆದರೆ ನಾನು ಪ್ರೆಂಡ್‌ ಜೊತೆ ಒಂದು ಮೋಜಿನ ಕೆಲಸ  ಮಾಡುತ್ತಿದ್ದೇನೆ.  ಇದು ಆರೋಗ್ಯ ಪಾಡ್‌ಕ್ಯಾಸ್ಟ್ ಆಗಿದೆ' ಎಂದು ಸಮಂತಾ ಹೇಳಿದ್ದಾರೆ.
 

510

'ಇದು ತೀರಾ ಅನಿರೀಕ್ಷಿತವಾಗಿದೆ. ಆದರೆ ಇದು ನನಗೆ ನಿಜವಾಗಿಯೂ ಇಷ್ಟವಾದ ಸಂಗತಿಯಾಗಿದೆ. ನಾನು ತುಂಬಾ ಉತ್ಸಾಹದಿಂದ ಇರುವ ವಿಷಯ. ಇದು ನಿಮ್ಮಲ್ಲಿ ಕೆಲವರಿಗೆ ಅತ್ಯಂತ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ. ನಾನು ಅದರ ತಯಾರಿಕೆಯನ್ನು ಆನಂದಿಸಿದೆ' ಎಂದು ಸಮಂತಾ ಮತ್ತಷ್ಟು  ಬರೆದುಕೊಂಡಿದ್ದಾರೆ.
 

610

ಅವರ ಆರೋಗ್ಯದ ಪಾಡ್‌ಕ್ಯಾಸ್ಟ್ ಮುಂದಿನ ವಾರ ಬಿಡುಗಡೆಯಾಗಲಿದೆ ಎಂದು ಸಮಂತಾ ರುತ್‌ ಪ್ರಭು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

 

710

2022 ರಲ್ಲಿ ಅವರ 'ಯಶೋದಾ' ಚಿತ್ರ ಬಿಡುಗಡೆಯಾಗುವ ಮೊದಲು, ಅವರು ಮಯೋಸಿಟಿಸ್‌ನಿಂದ ಬಳಲುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದರು. 

810

ಜುಲೈ 2023 ರಲ್ಲಿ ಅಮೆಜಾನ್ ಪ್ರೈಮ್ ವೀಡಿಯೊದ ವೆಬ್ ಸರಣಿ 'ಸಿಟಾಡೆಲ್' ನ ಭಾರತೀಯ ಅಧ್ಯಾಯಕ್ಕಾಗಿ ಕೊನೆಯ ಬಾರಿಗೆ ಚಿತ್ರೀಕರಿಸಿದರು ಮತ್ತು ನಂತರ ಅವರು  ಸಂಪೂರ್ಣವಾಗಿ ತಮ್ಮ ಆರೋಗ್ಯದ ಕಡೆ ಗಮನ ಹರಿಸಿದರು 

910

ಕೆಲವು ವರದಿಗಳಲ್ಲಿ, ನಟಿ ರೋಗದ ಚಿಕಿತ್ಸೆಗಾಗಿ 25 ಕೋಟಿ ರೂ ಸಾಲವನ್ನು ಪಡೆದಿದ್ದಾರೆ ಎಂದು ಹೇಳಲಾಗಿದೆ. ಆದರೆ ಅವರು ಈ ವರದಿಗಳನ್ನು ನಿರಾಕರಿಸಿದರು ಮತ್ತು ಅವರು ಕಡಿಮೆ ಮೊತ್ತಕ್ಕೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೇಳಿದರು.

1010

ವಿಜಯ್ ದೇವರಕೊಂಡ ಅವರ ನಾಯಕನಾಗಿದ್ದ 'ಕುಶಿ' ಚಿತ್ರದಲ್ಲಿ  ಸಮಂತಾ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡರು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೋತಿತು.

Read more Photos on
click me!

Recommended Stories