ನಟ ಅಕ್ಷಯ್ ಕುಮಾರ್ ಒಡೆತನದಲ್ಲಿದ್ದ ಮನೆ ಖರೀದಿಸಿದ 24 ಹರೆಯದ ಸೋಷಿಯಲ್ ಮೀಡಿಯಾ ಪ್ರಭಾವಿ ಯುವತಿ!

Published : Feb 12, 2024, 05:13 PM IST

ಇಂದಿನ ಕಾಲದಲ್ಲಿ ಸ್ವಂತ ಮನೆ ಖರೀದಿ ಮಾಡುವುದೆಂದರೆ ದೊಡ್ಡ ವಿಷಯ  ಎಂದು ಪರಿಗಣಿಸಲಾಗಿದೆ. ನಮ್ಮಲ್ಲಿ ಹೆಚ್ಚಿನವರು  ಮೆ ತೆಗೆದುಕೊಳ್ಳುವ ಕನಸು ಕಾಣುತ್ತಿರುತ್ತಾರೆ. ಇತ್ತೀಚೆಗೆ 21 ವರ್ಷದ ನಟಿ ಅನುಷ್ಕಾ ಸೇನ್ ಮುಂಬೈನಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ. ಇದರ ಬೆನ್ನಲ್ಲೇ ಜನಪ್ರಿಯ ಸೋಷಿಯಲ್ ಮೀಡಿಯಾದ ಪ್ರಭಾವಿ ಮಹಿಳೆ ತನ್ನ 24 ಹರೆಯದಲ್ಲಿ ತನ್ನ ಸ್ವಂತ ಮನೆಯನ್ನು ಖರೀದಿ ಮಾಡಿದ್ದಾರೆ.

PREV
16
ನಟ ಅಕ್ಷಯ್ ಕುಮಾರ್ ಒಡೆತನದಲ್ಲಿದ್ದ ಮನೆ ಖರೀದಿಸಿದ 24 ಹರೆಯದ ಸೋಷಿಯಲ್ ಮೀಡಿಯಾ ಪ್ರಭಾವಿ ಯುವತಿ!

ಆಕೆ ಬೇರಾರು ಅಲ್ಲ ಚಾಂದನಿ ಭಾಬ್ದಾ. ಈಕೆ 24 ಹರೆಯದಲ್ಲಿ ಪ್ರಭಾವಿ ಯುವತಿ ಎನಿಸಿಕೊಂಡಿದ್ದಾಳೆ.  Instagram ನಲ್ಲಿ ತನ್ನ ಮಿಮಿಕ್ರಿ ವೀಡಿಯೊಗಳಿಗೆ ಜನಪ್ರಿಯತೆ ಪಡೆದಿದ್ದು. ಅಕ್ಷಯ್ ಕುಮಾರ್ ಒಡೆತನದಲ್ಲಿದ್ದ ಮನೆಯನ್ನು ಈಕೆ ಖರೀದಿಸಿದ್ದಾಳೆ.  

26

ಚಾಂದನಿ ಭಾಬ್ಡಾ ಜನಪ್ರಿಯ ಸಾಮಾಜಿಕ ಮಾಧ್ಯಮದ ಮೂಲಕ ಕಂಟೆಂಟ್ ಕ್ರಿಯೇಟರ್ ಆಗಿದ್ದು  ತನ್ನ ಮಿಮಿಕ್ರಿ ವೀಡಿಯೊಗಳೊಂದಿಗೆ ಖ್ಯಾತಿ ಗಳಿಸಿಸಿದ್ದಾಳೆ. ಆಲಿಯಾ ಭಟ್ ಅವರ ಧ್ವನಿಯಲ್ಲಿ ಪಿಜ್ಜಾವನ್ನು ಆರ್ಡರ್ ಮಾಡಿದ ವೀಡಿಯೊ ಮಿಮಿಕ್ ಮಾಡಿದ ನಂತರ ಆಕೆಯ ಖ್ಯಾತಿ ಮತ್ತಷ್ಟು ಹೆಚ್ಚಿತು ಮಾತ್ರವಲ್ಲ  ಆಲಿಯಾ ಭಟ್ ಅವರೊಂದಿಗೆ ವಿಶೇಷ ಸಂಬಂಧವನ್ನು ಇಟ್ಟುಕೊಂಡಿದ್ದಾಳೆ.

36

ಆಲಿಯಾ ಭಟ್ ಮಿಮಿಕ್‌ ಮಾಡಿದ ವಿಡಿಯೋದಲ್ಲಿನ ಅನಿಸಿಕೆಗಳು ಎಷ್ಟು ಆನ್-ಪಾಯಿಂಟ್ ಆಗಿದ್ದವು ಎಂದರೆ ಆರ್ಡರ್ ತೆಗೆದುಕೊಳ್ಳುವ ವ್ಯಕ್ತಿಯು ಕರೆ ಸಮಯದಲ್ಲಿ ಸಾಕಷ್ಟು ಉದ್ವೇಗಗೊಂಡರು. ಇನ್‌ಸ್ಟಾಗ್ರಾಮ್‌ನಲ್ಲಿ ಈ ವೀಡಿಯೊ ಸಖತ್‌ ವೈರಲ್‌ ಆಯ್ತು.  ಮಾತ್ರವಲ್ಲ ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿಯೂ  ವೈರಲ್‌ ಆಯ್ತು. ಚಾಂದನಿ ಭಾಬ್ದಾ ಆಗಾಗ್ಗೆ ತಮ್ಮ ವೀಡಿಯೊಗಳಲ್ಲಿ ಆಲಿಯಾ ಭಟ್ ಅವರನ್ನು ಅನುಕರಿಸುತ್ತಾರೆ ಮತ್ತು ದೈನಂದಿನ ವ್ಲಾಗ್‌ ಮಾಡಿ ಕೂಡ ಡಿಜಿಟಲ್ ಕ್ಷೇತ್ರದಲ್ಲಿ ತನ್ನದೇ ಸ್ಥಾನ ಪಡೆದಿದ್ದಾರೆ. 

46

ತನಗೆ ಮಿಮಿಕ್ರಿ ಕಲ್ಪನೆ ಹೇಗೆ ಬಂದಿತು ಎಂಬುದರ ಕುರಿತು  ಮಾತನಾಡಿರುವ ಚಾಂದನಿ ಭಾಬ್ದಾ,  “ನನಗೆ ಮಿಮಿಕ್ರಿ ಸ್ವಾಭಾವಿಕವಾಗಿ  ಬಂತು,  ಆರಂಭದಲ್ಲಿ, ಮಿಮಿಕ್ರಿ ಸಾಕಷ್ಟು ಟೀಕೆಗೆ ಒಳಗಾಯಿತು ಏಕೆಂದರೆ ಅದು ಕೆಟ್ಟ ರೀತಿಯ ನಡವಳಿಕೆ ಎಂದು ಪರಿಗಣಿಸಲ್ಪಟ್ಟಿತು ಏಕೆಂದರೆ ಅದು ಹೆಚ್ಚಾಗಿ ಜನರನ್ನು ಗೇಲಿ ಮಾಡುವಂತ್ತಿತ್ತು. ಅದಕ್ಕಾಗಿ ನಾನು ಶಾಲೆಯಲ್ಲಿ ಸಾಕಷ್ಟು ಹಿಂಸೆಗೆ ಕೂಡ ಒಳಗಾಗುತ್ತಿದ್ದೆ. ನಾನು ಶಿಕ್ಷಕರನ್ನು ಅನುಕರಿಸಿದ ಕಾರಣ ನಾನು ಖಿನ್ನತೆಗೆ ಒಳಗಾಗಿದ್ದೆ ಮತ್ತು ಅದು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿತು. ಆದರೆ ನನ್ನ ಮೇಲೆ ನನಗೆ ನಂಬಿಕೆ ಇತ್ತು, ಅದು ನನಗೆ ತುಂಬಾ ಸಹಾಯ ಮಾಡಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದರು.

56

ಮುಂಬೈನಲ್ಲಿ ತನ್ನ ಹೊಸ ಮನೆಯನ್ನು ಖರೀದಿ ಮಾಡಿದ ಕೆಲವು ಚಿತ್ರಗಳನ್ನು   ಅವರು ಇತ್ತೀಚೆಗೆ ತಮ್ಮ Instagram ನಲ್ಲಿ ಹಂಚಿಕೊಂಡಿದ್ದಾರೆ.  ಗೃಹ ಪರ್ವೇಶ ಸಮಾರಂಭದ ಉದ್ದಕ್ಕೂ  ರೋಮಾಂಚಕ ಕೆಂಪು ಚುನರಿಯಿಂದ ಪೂರಕವಾದ ಸೊಗಸಾದ ಗುಲಾಬಿ ಬಣ್ಣದ ಸೀರೆಯನ್ನು ಧರಿಸಿದ್ದಳು.  
 

66

 24 ವರ್ಷಕ್ಕಿಂತ ಮೊದಲು EMI ಮೂಲಕ ತನ್ನ ಕನಸಿನ ಮನೆಯನ್ನು ಖರೀದಿಸಿದ ಸಾಧನೆಯನ್ನು ಹೇಳಿಕೊಳ್ಳುತ್ತಾ.   25 ವರ್ಷದ ಒಳಗೆ ಮನೆಯನ್ನು ಖರೀದಿಸುವುದು ನನ್ನ ಕನಸಾಗಿತ್ತು.  ಚಾಂದನಿ ಖರೀದಿಸಿದ ಮನೆ ಈ ಹಿಂದೆ ಅಕ್ಷಯ್ ಕುಮಾರ್ ಅವರ ಒಡೆತನದಲ್ಲಿತ್ತು. ಇದು ಮುಂಬೈನ ಅಂಧೇರಿಯಲ್ಲಿದೆ.

Read more Photos on
click me!

Recommended Stories