ಸಾವಿನ ನಾಟಕವಾಡಿದ ಪೂನಂಗೆ ಮತ್ತೊಂದು ಶಾಕ್, 100 ಕೋಟಿ ರೂ ಡಿಫಮೇಶನ್ ಕೇಸ್ ದಾಖಲು!

First Published | Feb 11, 2024, 11:21 PM IST

ಗರ್ಭಕಂಠ ಕ್ಯಾನ್ಸರ್ ಪ್ರಚಾರದ ಹೆಸರಿನಲ್ಲಿ ಸಾವಿನ ನಾಟಕವಾಡಿದ್ದ ವಿವಾದಿತ ಮಾಡೆಲ್ ಪೂನಂ ಪಾಂಡೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದೆ. ಈಗಾಗಲೇ ದೂರುಗಳು ದಾಖಲಾಗಿದೆ. ಇದೀಗ ಪೂನಂ ಪಾಂಡೆ ವಿರುದ್ಧ ಬರೋಬ್ಬರಿ 100 ಕೋಟಿ ರೂಪಾಯಿ ಮೊತ್ತದ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಾಗಿದೆ.
 

ವಿವಾದಿತ ನಟಿ ಕಮ್ ಮಾಡೆಲ್ ಪೂನಂ ಪಾಂಡೆ ಇತ್ತೀಚೆಗೆ ಸಾವಿನ ನಾಟಕವಾಡಿ ಭಾರಿ ಸದ್ದು ಮಾಡಿದ್ದಳು. ಗರ್ಭಕಂಠ ಕ್ಯಾನ್ಸರ್‌ನಿಂದ ಪೂನಂ ಪಾಂಡೆ ಮೃತಪಟ್ಟಿದ್ದಾಳೆ ಅನ್ನೋ ಸುದ್ದಿ ಕೋಲಾಹಲವನ್ನೇ ಸಷ್ಟಿಸಿತ್ತು.
 

ದೇಶಾದ್ಯಂತ ಪೂನಂ ಪಾಂಡೆ ಸಾವಿನ ಸುದ್ದಿ ಸಂಚಲನ ಸೃಷ್ಟಿಸಿದ್ದ ಬೆನ್ನಲ್ಲೇ ತಾನು ಸತ್ತಿಲ್ಲ, ಗರ್ಭಕಂಠ ಕ್ಯಾನ್ಸರ್ ಕುರಿತ ಜಾಗೃತಿ ಮೂಡಿಸಲು ಸಾವಿನ ನಾಟಕ ಮಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಳು. 
 

Latest Videos


ಆದರೆ ಪೂನಂ ಪಾಂಡೆ ಅತೀರೇಖದ ಜಾಗೃತಿ ಆಕ್ರೋಶಕ್ಕೆ ಕಾರಣವಾಗಿತ್ತು. ಪೂನಂ ವಿರುದ್ಧ ದೂರು ಕೂಡ ದಾಖಲಾಗಿದೆ. ಇದೀಗ ಪೂನಂ ಪಾಂಡೆ ಹಾಗೂ ಪೂನಂ ಪತಿ ವಿರುದ್ದ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.

ಫೈಜನ್ ಅನ್ಸಾರಿ ಅನ್ನೋ  ವ್ಯಕ್ತಿ ಕಾನ್ಪುರ ಪೊಲೀಸ್ ಕಮಿಷನರ್ ಬಳಿ ಪೂನಂ ಪಾಂಡೆ ವಿರುದ್ಧ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದ್ದಾರೆ. ಪೂನಂ ಪಾಂಡೆ ಹಾಗೂ ಪತಿ ವಿರುದ್ಧ ಕಾನ್ಪುರ ಕೋರ್ಟ್ ಅರೆಸ್ಟ್ ವಾರೆಂಟ್  ಹೊರಡಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

ಪೂನಂ ಪಾಂಡೆ ಹಾಗೂ ಆಕೆಯ ಪತಿ ಜಾಗೃತಿ ಹೆಸರಿನಲ್ಲಿ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡಿದ್ದಾಳೆ. ಪೂನಂ ಪಾಂಡೆಯ ನಡೆಯಿಂದ ದೇಶದ ಸೆಲೆಬ್ರೆಟಿಗಳು, ಮಾಡೆಲ್, ಬಾಲಿವುಡ್ ಮೇಲಿನ ನಂಬಿಕೆ ಕಳೆದುಕೊಳ್ಳುವಂತಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪೂನಂ ಪಾಂಡೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಗರ್ಭಕಂಠ ಕ್ಯಾನ್ಸರ್‌ನಿಂದ ಪೊನಂ ನಿಧನರಾಗಿದ್ದಾರೆ ಎಂಬ ಪೋಸ್ಟ್ ಹಾಕಲಾಗಿತ್ತು. ಆಕೆಯ ಮ್ಯಾನೇಜರ್ ಪೋಸ್ಟ್ ಮಾಡಿರುವ ರೀತಿಯಲ್ಲಿ ಮಾಹಿತಿ ನೀಡಲಾಗಿತ್ತು.

ಆಕ್ರೋಶ ಹೆಚ್ಚಾಗುತ್ತಿದ್ದಂತೆ ಪೂನಂ ಪಾಂಡೆ ವಿಡಿಯೋ ಮೂಲಕ ನಾನು ಜೀವಂತವಾಗಿದ್ದೇನೆ. ಗರ್ಭಕಂಠದ ಕ್ಯಾನ್ಸರ್‌ನಿಂದ ನಾನು ಸಾವನ್ನಪ್ಪಿಲ್ಲ. ಜಾಗೃತಿ ಮೂಡಿಸಲು ಹೀಗೆ ಮಾಡಿದ್ದೇನೆ ಎಂದಿದ್ದಳು.
 

ಟೀಕೆ, ಆಕ್ರೋಶಗಳು ಹೆಚ್ಚಾಗಿತ್ತು. ಇದರ ಬೆನ್ನಲ್ಲೇ ಸುಳ್ಳು ಸುದ್ದಿ ಹಬ್ಬಿಸಿ ಆತಂಕ ಸೃಷ್ಟಿಸಿದ್ದಕ್ಕೆ ಕ್ಷಮೆಯಾಚಿಸಿದ್ದರು. ಇದೀಗ ಪೂನಂ ವಿರುದ್ದ ಒಂದರ ಮೇಲೊಂದರಂತೆ ದೂರು ದಾಖಲಾಗುತ್ತಿದೆ. 

click me!