ಸೌತ್ ಇಂಡಿಯನ್ ನಟಿ ಸಮಂತಾ ರುತ್ ಪ್ರಭು ಮದುವೆ ಮುರಿದು ಬಿದ್ದು 4 ವರ್ಷ ಆಗಿದೆ. ಆದ್ರೆ ಈಗ ಅವರ ವಿಚ್ಛೇದನ ಮತ್ತೆ ಚರ್ಚೆಯಲ್ಲಿದೆ.
ಇತ್ತೀಚೆಗೆ ಧನಶ್ರೀ ವರ್ಮಾ ಮತ್ತು ಕ್ರಿಕೆಟಿಗ ಯಜುವೇಂದ್ರ ಚಹಲ್ ವಿಚ್ಛೇದನ ಆಯ್ತು. ಚಹಲ್ 4.5 ಕೋಟಿ ರೂಪಾಯಿ ಜೀವನಾಂಶ ನೀಡಿದ್ದಾರೆ.
ಧನಶ್ರೀ ವರ್ಮಾ ಮತ್ತು ಯಜುವೇಂದ್ರ ಚಹಲ್ ಅವರ ವಿಚ್ಛೇದನ ಸುದ್ದಿಯ ನಡುವೆ ಸಮಂತಾ ವಿಚ್ಛೇದನ ಮತ್ತೆ ಟಾಕ್ ಆಫ್ ದ ಟೌನ್ ಆಗಿದೆ.
ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ 2017 ರಲ್ಲಿ ಮದುವೆಯಾದರು. ಆದ್ರೆ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಮನಸ್ತಾಪ ಶುರುವಾಯ್ತು.
ವಿಚ್ಛೇದನದ ಸಮಯದಲ್ಲಿ ನಾಗ ಚೈತನ್ಯ 200 ಕೋಟಿ ರೂಪಾಯಿ ಜೀವನಾಂಶ ನೀಡಲು ಮುಂದಾದ್ರು. ಆದ್ರೆ ಸಮಂತಾ ರುಥ್ ಪ್ರಭು ಬೇಡ ಅಂದ್ರು.
ಸಮಂತಾ ಯಾವುದೇ ಆರ್ಥಿಕ ಸಹಾಯ ಬೇಡ ಅಂದಿದ್ರು. ಅವರು ತಮ್ಮ ಕೆಲಸದ ಮೇಲೆ ಗಮನ ಕೊಡಬೇಕು ಎಂದು ಹೇಳಿದ್ದರು. ನಾನು ಅಕ್ಕಿನೇನಿ ಕುಟುಂಬದಿಂದ ಯಾವುದೇ ಹಣ ಪಡೆದಿಲ್ಲ ಎಂದು ಹೇಳಿದ್ದಾರೆ.
ನಾಗ ಚೈತನ್ಯ ಡಿಸೆಂಬರ್ 2024 ರಲ್ಲಿ ಶೋಭಿತಾ ಧುಲಿಪಾಲ ಜೊತೆ ಮದುವೆ ಆದ್ರು. ಸಮಂತಾ ರಾಜ್ ನಿಡಿಮೋರು ಜೊತೆ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.
ಸಮಂತಾ ರುತ್ ಪ್ರಭು ಕೊನೆಯದಾಗಿ 2023 ರಲ್ಲಿ ಖುಷಿ ಸಿನಿಮಾದಲ್ಲಿ ಕಾಣಿಸಿಕೊಂಡರು. ಅವರ ಮುಂದಿನ ಸಿನಿಮಾ ಮಾ ಇಂಟಿ ಬಂಗರಂ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ
Mahmad Rafik