ಭಯದಿಂದ ಈ ಸಂಬಂಧ ಮುಂದುವರೆಸಲು ಆಗಲ್ಲ: ನಟಿ ಅನುಷ್ಕಾ ಶೆಟ್ಟಿ ಶಾಕಿಂಗ್ ಹೇಳಿಕೆ
ಇಷ್ಟು ದಿನ ಮದುವೆ ಆಗದೆ ಇರಲು ಕಾರಣವೇನು? ಅನುಷ್ಕಾ ಶೆಟ್ಟಿ ಮಾತುಗಳನ್ನು ಕೇಳಿ ಜನರು ಎಲ್ಲಿಂದ ಎಲ್ಲಿಗೋ ಲಿಂಕ್ ಮಾಡಿಕೊಳ್ಳುತ್ತಿದ್ದಾರೆ.
ಇಷ್ಟು ದಿನ ಮದುವೆ ಆಗದೆ ಇರಲು ಕಾರಣವೇನು? ಅನುಷ್ಕಾ ಶೆಟ್ಟಿ ಮಾತುಗಳನ್ನು ಕೇಳಿ ಜನರು ಎಲ್ಲಿಂದ ಎಲ್ಲಿಗೋ ಲಿಂಕ್ ಮಾಡಿಕೊಳ್ಳುತ್ತಿದ್ದಾರೆ.
ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಖತ್ ಹೆಸರು ಮಾಡಿರುವ ನಟಿ ಅಂದ್ರೆ ಅನುಷ್ಕಾ ಶೆಟ್ಟಿ. ಪಾತ್ರಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡು ಸಿನಿಮಾ ಹಿಟ್ ಮಾಡಿಸುತ್ತಾರೆ.
ಸಿಕ್ಕಾಪಟ್ಟೆ ಫ್ಯಾನ್ ಹೊಂದಿರುವ ನಟಿ ಯಾಕೆ ಮದುವೆ ಮಾಡಿಕೊಳ್ಳುತ್ತಿಲ್ಲ? ಯಾರೂ ಬಾಯ್‌ಫ್ರೆಂಡ್ ಇಲ್ವಾ? ಅನುಷ್ಕಾ ಫ್ಯಾಮಿಲಿಯಲ್ಲಿ ಏನೂ ಹೇಳುತ್ತಿಲ್ವಾ ಅನ್ನೋದು ನೆಟ್ಟಿಗರು ಪ್ರಶ್ನೆ.
'ಈ ಭೂಮಿ ಮೇಲೆ ಭಯದಿಂದ ನಡೆಸಿಕೊಂಡು ಹೋಗುವ ಯಾವುದೇ ಸಂಬಂಧಗಳ ಮೇಲೆ ನನಗೆ ನಂಬಿಕೆ ಇಲ್ಲ. ಅದು ರಿಲೇಶನ್‌ಶಿಪ್ ಇರಲಿ ಅಥವಾ ಪೋಷಕರೆ ಆಗಿರಲಿ'
ಪೋಷಕರಿಗಿಂತ ನಾನು ಹೆಚ್ಚಾಗಿ ದೇವರನ್ನು ನಂಬುತ್ತೀನಿ. ನಾನು ದೇವರನ್ನು ನನ್ನ ಫ್ರೆಂಡ್ ರೀತಿಯಲ್ಲಿ ನೋಡುತ್ತೀನಿ. ಎಷ್ಟರ ಮಟ್ಟಕ್ಕೆ ಸ್ನೇಹ ಅನ್ನೋದು ನೋವು ಯೋಚನೆ ಮಾಡಿರುವುದಿಲ್ಲ.
ಒಬ್ಬ ಸ್ನೇಹಿತೆಯನ್ನು ತಬ್ಬಿಕೊಂಡು, ಸದಾ ಮಾತನಾಡಿಕೊಂಡು ಕೋಪ ಬಂದ್ರೆ ಕೋಪ ಮಾಡಿಕೊಳ್ಳುವಷ್ಟು ಕ್ಲೋಸ್ ಅನ್ನೋ ರೀತಿಯಲ್ಲಿ ದೇವರ ಜೊತೆಯಾಗಿದ್ದೀನಿ.
ಸದ್ಯಕ್ಕೆ ಯಾವುದೇ ಸಂಬಂಧಗಳ ಬಗ್ಗೆ ನಾನು ಯೋಚನೆ ಮಾಡುತ್ತಿಲ್ಲ ಯಾವುದೂ ನನ್ನ ತಲೆಯಲ್ಲಿ ಓಡುತ್ತಿಲ್ಲ ನಾನು ಖುಷಿಯಾಗಿ ನೆಮ್ಮದಿಯಾಗಿದ್ದೀನಿ ಎಂದು ಅನುಷಾ ಶೆಟ್ಟಿ ಹೇಳಿದ್ದಾರೆ.