ಕಂಗನಾ ಈದ್ ಲುಕ್‌ಗೆ ಕಾಮೆಂಟ್ ಮಾಡಿದ ಸಮಂತಾ; ಪೋಸ್ಟ್ ವೈರಲ್

Published : Apr 23, 2023, 03:18 PM IST

ಕಂಗನಾ ಈದ್ ಲುಕ್‌ಗೆ ವೈರಲ್ ಆಗಿದೆ. ಸೌತ್ ಸ್ಟಾರ್ ಸಮಂತಾ ಕೂಡ  ಕಾಮೆಂಟ್ ಮಾಡಿದ್ದಾರೆ. 

PREV
17
ಕಂಗನಾ ಈದ್ ಲುಕ್‌ಗೆ ಕಾಮೆಂಟ್ ಮಾಡಿದ ಸಮಂತಾ; ಪೋಸ್ಟ್ ವೈರಲ್

ನಟಿ ಕಂಗನಾ ರಣಾವತ್ ಹೊಸ ಫೋಟೋಶೂಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಈದ್ ವಿಶೇಷವಾಗಿ ಕಂಗನಾ ಹೊಸ ಫೋಟೋಶೂಟ್ ಮಾಡಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
 

27

ಕಂಗನಾ ತನ್ನ ಮನೆಯೊಳಗೆ ಕ್ಯಾಮೆರಾಗೆ ವಿಭಿನ್ನ ಪೋಸ್‌ಗಳನ್ನು ನೀಡಿದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ರಾಯಲ್ ಲುಕ್‌ನಲ್ಲಿ ಮಿಂಚಿರುವ ಕಂಗನಾ ಫೋಟೋಗಳು ವೈರಲ್ ಆಗಿವೆ. ಫೋಟೋ ಶೇರ್ ಮಾಡಿ, ಪ್ರತಿಹಬ್ಬವೂ ಸ್ಮರಣೆಯಾಗಿದೆ. ಅದನ್ನು ಇಷ್ಟಪಡಿ, ಅನುಭವಿಸಿ' ಎಂದು ಬರೆದುಕೊಂಡಿದ್ದಾರೆ. 

37

ಕಂಗನಾ ಲುಕ್‌ಗೆ ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಗಳ ಜೊತೆಗೆ ಸಿನಿಮಾ ಗಣ್ಯರು ಸಹ ಪ್ರತಿಕ್ರಿಯೆ ನೀಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

47

ವಿಶೇಷ ಎಂದರೆ ಕಂಗನಾ ರಾಯಲ್ ಲುಕ್‌ಗೆ ಸೌತ್ ಸುಂದರಿ ಸಮಂತಾ ರುತ್ ಪ್ರಭು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಕಂಗನಾ ಪೋಸ್ಟ್‌ಗೆ ಕಾಮೆಂಟ್ ಮಾಡಿರುವಸಮಂತಾ ವಾವ್...ಎಂದು ಬರೆದು ಹಾರ್ಟ್ ಇಮೋಜಿ ಇರಿಸಿದ್ದಾರೆ.  
 

57

ಕಂಗನಾ ಪೋಸ್ಟ್‌ಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರು ವಹೀದಾ ರೆಹಮಾನ್ ಅವರ ವೈಬ್‌ಗಳನ್ನು ನೀಡುತ್ತಿವೆ' ಎಂದು ಹೇಳುತ್ತಿದ್ದಾರೆ. ರೆಟ್ರೋ ಲುಕ್ ಎನ್ನುತ್ತಿದ್ದಾರೆ. 

67

ಕಂಗನಾ ಮತ್ತು ಸಮಂತಾ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಮಾತುಕತೆ ನಡೆಸುತ್ತಾರೆ. ಹುಟ್ಟುಹಬ್ಬದ ಸಮಯದಲ್ಲೂ ಇಬ್ಬರೂ ಒಬ್ಬರಿಗೊಬ್ಬರು ವಿಶ್ ಮಾಡಿಕೊಳ್ಳುತ್ತಾರೆ. ಆಗಾಗ ಪೋಸ್ಟ್‌ಗಳಿಗೂ ಒಬ್ಬರಿಗೊಬ್ಬರು ಕಾಮೆಂಟ್ ಮಾಡುತ್ತಿರುತ್ತಾರೆ. 

77

ಕಂಗನಾ ಸದ್ಯ ತೇಜಸ್ ಮತ್ತು ಮಣಿಕರ್ಣಿಕಾ ರಿಟರ್ನ್ಸ್, ಎಮರ್ಜೆನ್ಸಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ಸಮಂತಾ ಕೊನೆಯದಾಗಿ ಶಾಕುಂತಲಂ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಸಿಟಾಡೆಲ್ ಹಿಂದಿ ವರ್ಷನ್‌ನಲ್ಲಿ ನಟಿಸುತ್ತಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories