ಕೆಂಪು ಬಸ್ ಏರಿ ಮಸ್ತ್ ಪೋಸ್ ನೀಡಿದ ಸಾರಾ ಅಲಿ ಖಾನ್; ಫೋಟೋ ವೈರಲ್

Published : Apr 22, 2023, 11:21 AM IST

ಕೆಂಪು ಬಸ್ ಏರಿ ಮಸ್ತ್ ಪೋಸ್ ನೀಡಿದ ಸಾರಾ ಅಲಿ ಖಾನ್ ಹೊಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

PREV
16
ಕೆಂಪು ಬಸ್ ಏರಿ ಮಸ್ತ್ ಪೋಸ್ ನೀಡಿದ ಸಾರಾ ಅಲಿ ಖಾನ್; ಫೋಟೋ ವೈರಲ್

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಸಿನಿಮಾಗಳ ಜೊತೆಗೆ ಸಿಕ್ಕಾಪಟ್ಟೆ ಫೋಟೋಶೂಟ್ ಮೂಲಕ ಮಿಂಚುತ್ತಿರುತ್ತಾರೆ. ಆಗಾಗ ಬಾಯ್‌ಫ್ರೆಂಡ್ ವಿಚಾರಕ್ಕೆ ಸದ್ದು ಮಾಡುವ ನಟಿ ಸಾರಾ ಅಲಿ ಖಾನ್ ಇದೀಗ ಮತ್ತೆ ಹೊಸ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ರು ಖ್ಯಾತಿ ಕಮ್ಮಿ ಆಗಿಲ್ಲ. 

26

ಸಿನಿಮಾರಂಗದ ದೊಡ್ಡ ಯಶಸ್ಸಿಯಾಗಿ ಎದುರು ನೋಡುತ್ತಿರುವ ಸಾರಾ ಅಲಿ ಖಾನ್ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ಹೊಸ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ.  ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಸಾರಾ ಹಲವು ಗ್ಲಾಮರಸ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 
 

36

ಈ ಬಾರಿ ಸಾರಾ ಬಸ್ ಏರಿ ಫೋಟೋಗೆ ಪೋಸ್ ನೀಡಿದ್ದಾರೆ. ಸಾರಾ ಅಲಿ ಖಾನ್ ಮಸ್ತ್ ಫೋಟೋಗಳು ಅಭಿಮಾನಿಗಳ ಹೃದಯ ಗೆದ್ದಿವೆ. ಈ ಫೋಟೋಗಳಿಗೆ ಸಿಕ್ಕಾಪಟ್ಟೆ ಲೈಕ್ಸ್ ಒತ್ತಿ ಕಾಮೆಂಟ್ ಮಾಡಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. 

46

ಇನ್ಸ್ಟಾಗ್ರಾಮ್‌ನಲ್ಲಿ 41 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಫೋಟೋ ಶೇರ್ ಮಾಡುತ್ತಿದ್ದಂತೆ ಸಿಕ್ಕಾಪಟ್ಟೆ ಲೈಕ್ಸ್ ಹರಿದು ಬಂದಿದೆ.  

56

ಅಂದಹಾಗೆ ಸಾರಾ ಹಳದಿ ಬಣ್ಣದ ಸ್ಕರ್ಟ್ ಧರಿಸಿದ್ದಾರೆ. ಇದರ ಬೆಲೆ 10,499 ರೂಪಾಯಿ ಎನ್ನಲಾಗುತ್ತಿದೆ. ಹೈ ಹೀಲ್ಸ್ ಧರಿಸಿದ್ದಾರೆ. ಕೆಂಪು ಬಸ್‌ನಲ್ಲಿ ಸಾರಾ ಮಿರ ಮಿರ ಮಿಂಚುತ್ತಿದ್ದಾರೆ. 

66

ಸಿನಿಮಾ ವಿಚಾರಕ್ಕೆ ಬರುವುದಾರೆ ಸಾರಾ ಬಳಿ ಅನೇಕ ಸಿನಿಮಾಗಳಿವೆ. ಕೊನೆಯದಾಗಿ ಗ್ಯಾಸ್‌ಲೈಟ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಜರಾ ಹತ್ಕೆ ಜರಾ ಬಚ್ ಕೆ, ಏ ವತನ್ ಮೇರೆ ವತನ್, ಮರ್ಡರ್ ಮುಬಾರಕ್ ಸಿನಿಮಾಗಳನ್ನು ಮುಗಿಸಿರುವ ಸಾರಾ ರಿಲೀಸ್‌ಗೆ ಕಾಯುತ್ತಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories