'ಅವನು ಮಹಿಳೆಯರು ತನ್ನ..' 58 ವರ್ಷದ ಮಗ ಸಲ್ಮಾನ್ ಮದುವೆಯಾಗೋ ಹುಡುಗಿಯಲ್ಲಿ ಬಯಸುವುದೇನು ಎಂದು ಬಿಚ್ಚಿಟ್ಟ ತಂದೆ ಸಲೀಂ ಖಾನ್

First Published Jun 25, 2024, 3:56 PM IST

ಸಲ್ಮಾನ್ ಖಾನ್ ಅವರ ತಂದೆ, ಸಲೀಂ ಖಾನ್ ತಮ್ಮ ಮಗ ಇನ್ನೂ ಮದುವೆಯಾಗದಿರುವುದಕ್ಕೆ ಕಾರಣ ಬಿಚ್ಚಿಟ್ಟಿದ್ದೇ ಅಲ್ಲದೆ, ಸಲ್ಮಾನ್ ಖಾನ್ ಸಂಗಾತಿಯಲ್ಲಿ ಬಯಸುವ ಗುಣಗಳೇನು ಎಂದೂ ಹೇಳಿದ್ದಾರೆ. 
 

ಸಲ್ಮಾನ್ ಖಾನ್ ಹಿಂದಿ ಚಿತ್ರರಂಗದ ಫಾರೆವರ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ಸುಮಾರು ನಾಲ್ಕು ದಶಕಗಳಿಂದ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ನಟ, ಶೋಬಿಜ್‌ನಲ್ಲಿ ಕೆಲವು ಜನಪ್ರಿಯ ನಟಿಯರೊಂದಿಗೆ ಪ್ರೀತಿ ಪ್ರೇಮ ಎಂದು ಸುದ್ದಿಯಾಗಿ ಕಡೆಗೆ ಎಲ್ಲದರಲ್ಲೂ ಕೆಟ್ಟ ಅಂತ್ಯ ಕಂಡಿದ್ದಾರೆ. 

58 ವರ್ಷದ ಸಲ್ಲು, ಐಶ್ವರ್ಯಾ ರೈ, ಕತ್ರಿನಾ ಕೈಫ್, ಸಂಗೀತಾ ಬಿಜ್ಲಾನಿ, ಸೋಮಿ ಅಲಿ ಮತ್ತು ಇನ್ನೂ ಅನೇಕರೊಂದಿಗೆ ಡೇಟಿಂಗ್ ಮಾಡಿದ್ದಾರೆ. ಸಧ್ಯ ಯುಲಿಯಾ ವಂತೂರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವ ಸಲ್ಮಾನ್ ಇನ್ನೂ ಮದುವೆಯಾಗಿಲ್ಲ.

Latest Videos


ಸಲ್ಮಾನ್ ಖಾನ್ ಏಕೆ ಇನ್ನೂ ಮದುವೆಯಾಗಿಲ್ಲ ಎಂಬುದಕ್ಕೆ ನಟನ ತಂದೆ ಸಲೀಂ ಖಾನ್ ಕಾರಣ ಬಿಚ್ಚಿಟ್ಟಿದ್ದಾರೆ. ಜೊತೆಗೆ, ನಟ ತನ್ನ ಹುಡುಗಿಯ ಬಳಿ ಬಯಸುವುದೇನು ಎಂದೂ ಹೇಳಿದ್ದಾರೆ. 

ತನ್ನ ಮಗ ಸಲ್ಮಾನ್ ಖಾನ್ ಗೆ ಮದುವೆಯಾಗುವ ಧೈರ್ಯ ಇಲ್ಲ ಎನ್ನುತ್ತಾರೆ ಸಲೀಂ ಖಾನ್. ಹೌದು, ಸಂದರ್ಶನವೊಂದರಲ್ಲಿ ಮಾತಾಡಿರುವ ಸಲೀಂ, 'ಅವನು ಸುಲಭವಾಗಿ ಸಂಬಂಧವನ್ನು ಪಡೆಯುತ್ತಾನೆ ಆದರೆ ಮದುವೆಯಾಗಲು ಧೈರ್ಯವಿಲ್ಲ' ಎಂದಿದ್ದಾರೆ.

'ಅವನು ತುಂಬಾ ಸರಳ ಸ್ವಭಾವವನ್ನು ಹೊಂದಿದ್ದಾನೆ ಮತ್ತು ಸುಲಭವಾಗಿ ಆಕರ್ಷಿತವಾಗುತ್ತಾನೆ. ಆದರೆ, ಆಕೆ ತನ್ನ ತಾಯಿಯಂತೆ ಕುಟುಂಬವನ್ನು ನಿಭಾಯಿಸಲು ಸಮರ್ಥಳೇ ಎಂದು ಅನುಮಾನ ಪಟ್ಟು ಭಯಗೊಳ್ಳುತ್ತಾನೆ' ಎಂದು ಸಲೀಂ ಹೇಳಿದ್ದಾರೆ.

ಸಲ್ಲು ಹುಡುಗಿ ಹೇಗಿರಬೇಕು?
ತನ್ನ 58 ವರ್ಷದ ಮಗ ತನ್ನ ತಾಯಿ ಸಲ್ಮಾ ಖಾನ್ (ಸುಶೀಲಾ ಚರಕ್) ನಂತೆ ಪತಿ ಮತ್ತು ಕುಟುಂಬಕ್ಕೆ ಬದ್ಧವಾಗಿರುವ ಮಹಿಳೆಯನ್ನು ಬಯಸುತ್ತಾನೆ ಎಂದು ಸಲೀಂ ಖಾನ್ ಹೇಳಿದ್ದಾರೆ. 
 

'ಹೆಣ್ಣು ತನ್ನ ತಾಯಿಯಂತೆ ತನ್ನ ಪತಿ ಮತ್ತು ಕುಟುಂಬಕ್ಕೆ ಬದ್ಧಳಾಗಿರಬೇಕೆಂದು ಅವನು ಬಯಸುತ್ತಾನೆ. ಅವಳು ಮಕ್ಕಳಿಗೆ ಊಟವನ್ನು ತಯಾರಿಸಬೇಕು, ಅವರು ಸಿದ್ಧವಾಗಲು ಸಹಾಯ ಮಾಡಬೇಕು ಮತ್ತು ಅವರ ಮನೆಕೆಲಸವನ್ನು ಮಾಡಬೇಕು. ಆದಾಗ್ಯೂ, ಇಂದಿನ ಸಮಯದಲ್ಲಿ ಇದು ಸುಲಭವಲ್ಲ' ಎಂದು ಸಲ್ಲು ತಂದೆ ಹೇಳಿದ್ದಾರೆ. 
 

ತಮ್ಮ ವಿಫಲ ಸಂಬಂಧಗಳ ಬಗ್ಗೆ ಮಾತನಾಡಿದ ಸಲ್ಮಾನ್ ಖಾನ್ 
ಈ ಹಿಂದೆ, ಆಪ್ ಕಿ ಅದಾಲತ್‌ನಿಂದ ಸಲ್ಮಾನ್ ಖಾನ್ ಅವರ ಹಳೆಯ ಸಂದರ್ಶನವು ಚರ್ಚಾ ವೇದಿಕೆಯಾದ ರೆಡ್ಡಿಟ್‌ನಲ್ಲಿ ಹೊರಹೊಮ್ಮಿತು. ನಟನು ತನ್ನ ವಿಫಲ ಸಂಬಂಧಗಳಿಗೆ ಒಂದರ ನಂತರ ಒಂದರಂತೆ ಯಾರ ತಪ್ಪು ಎಂದು ತಿಳಿಸಿದನು. ಅವರು ತಪ್ಪು ತಮ್ಮದೇ ಎಂದು ಒಪ್ಪಿಕೊಂಡರು ಮತ್ತು ಅವರ ಜೀವನದಲ್ಲಿ ಎಲ್ಲಾ ಹೆಂಗಸರು ನಿಜವಾಗಿಯೂ ಒಳ್ಳೆಯವರು ಎಂದರು.

ಸಲ್ಮಾನ್ ಹೇಳಿದ್ದೇನು?
ವಾಸ್ತವವಾಗಿ ಎಲ್ಲರೂ ಚೆನ್ನಾಗಿದ್ದರು. ತಪ್ಪು ನನ್ನದೇ. ಮೊದಲು ತಪ್ಪು ಅವರದ್ದೆಂದುಕೊಳ್ಳುತ್ತಿದ್ದೆ. ಆದರೆ, ಯಾವಾಗ ನಾಲ್ಕು, ಐದನೆಯ ಸಂಬಂಧಗಳೂ ಹಳಸಿದವೋ ಆಗ ನನ್ನಲ್ಲೇ ದೋಷವಿದೆ ಎಂದು ಅರಿವಾಯಿತು. ಬಹುಷಃ ಅವರ ಮನಸ್ಸಿನಲ್ಲಿರುವ ಜೀವನವನ್ನು ಅವರಿಗೆ ಕೊಡಲಾರೆ ಎಂಬ ಭಯ ನನ್ನಲ್ಲಿತ್ತು. ಈಗ ಪ್ರತಿಯೊಬ್ಬರೂ ಸಂತೋಷವಾಗಿದ್ದಾರೆ ಎಂದು ನನಗೆ ಖಾತ್ರಿಯಿದೆ ಎಂದು ಸಲ್ಮಾನ್ ಹೇಳಿದ್ದರು. 

click me!