ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿಲ್ಲ ನಂಬಿಕೆ, ಗಂಡನೂ ಬೇಡ, ಬಾಯ್ ಫ್ರೆಂಡ್ಸ್ ಬದಲಿಸಿದ್ದು ಹೌದು! ಕಿರಾತಕ ನಟಿಯ ಬಿಚ್ಚು ಮಾತು

First Published | Jun 25, 2024, 3:54 PM IST

ಕನ್ನಡದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆ ಕಿರಾತಕದಲ್ಲಿ ನಟಿಸಿದ್ದ ಓವಿಯಾ ಸಿನಿಮಾಕ್ಕಿಂತಲೂ ತಮ್ಮ ರಿಲೇಶನ್‌ಶಿಪ್ ಹಾಗೂ ಬಾಯ್ ಫ್ರೆಂಡ್ಸ್‌ನಿಂದಲೇ ಹೆಚ್ಚು ಸುದ್ದಿಯಾದವರು. ಕನ್ನಡಕ್ಕಿಂತಲೂ ತಮಿಳಿನಲ್ಲಿ ಹೆಚ್ಚು ಬ್ಯುಸಿಯಾಗಿದ್ದ ಈ ನಟಿಗೀಗ ಅವಕಾಶಗಳು ಕಡಿಮೆಯಾಗಿವೆ.  ಬಿಗ್ ಬಾಸ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದ ಓವಿಯಾ ತಮ್ಮ ಜೀವನದ ಹಲವು ಮಜಲುಗಳ ಬಗ್ಗೆ ಓಪನ್ ಅಪ್ ಆಗಿದ್ದರು. ಅಷ್ಟಕ್ಕೂ ಇವರು ಹೇಳುವುದೇನು? 
 

ರಾಕಿಂಗ್​ ಸ್ಟಾರ್ ಯಶ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ ಕಿರಾತಕ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ್ದ ಮಲಯಾಳಂ ನಟಿ ಓವಿಯಾ,  ಸೋಷಿಯಲ್‌ ಮೀಡಿಯಾ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಒಮ್ಮೆ ಸಲಿಂಗಕಾಮದ ಬಗ್ಗೆ ಓಪನ್ ಅಪ್ ಆಗಿ, ಹಲ್​ಚಲ್​ ಸೃಷ್ಟಿಸಿದ್ದೂ ಉಂಟು. 
 

ಗಂಡ ಬೇಕು ಅನಿಸಿಲ್ಲ. ಮದುವೆಯೂ ಆಗಲ್ಲ ಎಂದಿದ್ದ ಬೆಡಗಿ, ನಾನೇನು ಸಲಿಂಗಕಾಮಿ ಅಲ್ಲವೆಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. ಮದುವೆ ಎಂದರೆ ಅಲರ್ಜಿ ಎನ್ನುತ್ತಿದ್ದವಳನ್ನು ನೋಡಿ ಕೆಲವರು ಇವಳು ಸಲಿಂಗ ಕಾಮಿ ಇರಬಹುದಾ ಎಂಬ ಅನುಮಾನ ವ್ಯಕ್ತಪಡಿಸಿದ್ದರು. 

Tap to resize

ಮದುವೆಯಾಗೋಲ್ಲ ಅಂದ್ರೆ ಸಹಜವಾಗಿಯೇ ನೂರಾರು ಪ್ರಶ್ನೆಗಳು ಏಳುತ್ತವೆ. ಅದಕ್ಕೂ ತಲೆ ಕೆಡಿಸಿಕೊಳ್ಳೋಲ್ಲವೆನ್ನೋ ಈ ನಟಿ ವೇಶ್ಯಾವಾಟಿಕೆಯ ಕಾನೂನುಬದ್ಧತೆ ಮತ್ತು ಲೈಂಗಿಕ ಶಿಕ್ಷಣದ  ಕುರಿತು ಮುಕ್ತವಾಗಿ ಮಾತನಾಡಿದ್ದರು.

ಕಿರಾತಕ ಚಿತ್ರದ ಬಳಿಕ ಕನ್ನಡದ  ಮಿಸ್ಟರ್ ಮೊಮ್ಮಗ ಸಿನಿಮಾದಲ್ಲಿ ನಟಿಸಿದ್ದ ಈ ಮಲ್ಲು, ಅತ್ಯಾಚಾರದ ಬಗ್ಗೆ ಮಾತನಾಡಿ, ‘ವೇಶ್ಯಾವಾಟಿಕೆಯನ್ನು (Prostitution) ಕಾನೂನುಬದ್ಧ ಮಾಡಿದರೆ, ಅತ್ಯಾಚಾರದಂಥ ಮಹಿಳಾ ವಿರೋಧಿ ಅಪರಾಧವನ್ನು ತಡೆಗಟ್ಟಬಹುದು, ಎನ್ನುತ್ತಾರೆ.

ರೇಪ್ ಒಂದೇ ಅಲ್ಲ, ಎಷ್ಟೋ ಹೆಣ್ಣು ಮಕ್ಕಳ ಸಮಸ್ಯೆಗಳನ್ನು ವೇಶ್ಯಾವಾಟಿಕೆಯನ್ನು ಕಾನೂನುಬದ್ಧ ಮಾಡುವುದರಿಂದ ತಡೆಗಟ್ಟಬಹುದು ಎಂದಿದ್ದಲ್ಲದೇ ವೈಜ್ಞಾನಿಕ ಲೈಂಗಿಕ ಶಿಕ್ಷಣ (Scientific Sexual Education) ನೀಡುವಂತೆಯೂ ಒತ್ತಾಯಿಸಿದ್ದರು. 
 

ತಮಿಳಿನ ವಿಜಯ್ ಚಾನೆಲ್‌ನಲ್ಲಿ ಪ್ರಸಾರವಾದ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದ ಈ ಬಹುಭಾಷಾ ನಟಿ, ಸ್ಪೆಷಲ್ ಮ್ಯಾನರಿಸಂನಿಂದ ಹೆಸರು ಮಾಡಿದ್ದರು. ಅಷ್ಟೇ ಅಲ್ಲ ಸಹ ಸ್ಪರ್ಧಿ ಆರವ್ ಜೊತೆಗಿನ ಸಂಬಂಧದ ಕಾರಣವೂ ಚರ್ಚೆಗೆ ಗ್ರಾಸಿವಾಗಿದ್ದಲ್ಲೇ, ಒಂದು ಸಂದರ್ಭದಲ್ಲಿ ಆತ್ಮಹತ್ಯೆಗೂ ಯತ್ನಿಸಿದ್ದರೆಂಬ ಸುದ್ದಿ ಹರಿದಾಡಿತ್ತು. 

ಬಿಗ್‌ಬಾಸ್‌ನಲ್ಲಿ ವೀಕ್ಷಕರ ಸಪೋರ್ಟ್ ಇದ್ದರೂ, ರಿಯಾಲಿಟಿ ಶೋನಿಂದ ತಾವಾಗಿಯೇ ಹೊರಬಂದು ಬಿಟ್ಟರು. ಶೋ ಮುಗಿದ ಬಳಿಕೆ ಕೆಲವು ದಿನ ಮತ್ತೆ ಚಿತ್ರರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಬರ ಬರುತ್ತಾ ಮತ್ತೆ ಅವಕಾಶಗಳು ಕುಂಠಿತವಾದವು.

ಅದಕ್ಕೆ ಇವರು ಚಿತ್ರಗಳಿಗಿಂತಲೂ ಎಲ್ಲ ಮುಕ್ತ ವಿಷ್ಯಗಳ ಬಗ್ಗೆ ಓಪನ್ ಸ್ಟೇಟ್‌ಮೆಂಟ್ಸ್ ಕೊಡುವ ಮೂಲಕವೇ ಸದ್ದು ಮಾಡುತ್ತಿರುತ್ತಾರೆ. ಪ್ರೀತಿಯಲ್ಲಿ ಬಿದ್ದು ಹಲವರು ಮೋಸ ಹೋಗಿದ್ದಾರೆ. ರಿಲೇಶನ್‌ಶಿಪ್‌ನಲ್ಲಿರೋದು ನಂಗೇನೂ ಹೊಸತನಲ್ಲ. ಆದರೂ ಯಾವುದೂ ಸೆಕ್ಯೂರಡ್ ಅನಿಸಲೇ ಅಂತಾರೆ ಅಂತಾರೆ ಓವಿಯಾ.

ಕೆಲವರು ಹಣದ ವಿಷಯದಲ್ಲಿ ಮೋಸ ಮಾಡಿದ್ದಾರೆ. ಮತ್ತೆ ಕೆಲವರು ನಂಬಿಕೆ ದ್ರೋಹವೆಸಗಿದ್ದಾರೆ. ಆದರೆ, ನಮ್ಮ ವೈಯಕ್ತಿಕ ವಿಚಾರಕ್ಕೆ ಇನ್ನೊಬ್ಬರಿಗೆ ತೊಂದರೆ ಕೊಡೋದು ಸಲ್ಲದು ಎನ್ನುವುದು ಇವರ ಬಲವಾದ ಅಭಿಪ್ರಾಯ.

ಮದಯನ್ಯೇ ಕೂಟಂ, ಮರೀನಾ, ಮುದರ್ ಕೂಡಂ, ಕಾಲಕಲಾಪು ಸೇರಿ ಅನೇಕ ಚಿತ್ರಗಳಲ್ಲಿ ನಮ್ಮ ನಟನಾ ಕೌಶಲ್ಯ ತೋರಿಸಿದ ಈ ನಟಿ ಕಲಾವಾಣಿ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟವರು.  

Latest Videos

click me!