ರಣಬೀರ್ ಕಪೂರ್ ಅಕ್ಕನ ಮದುವೆಯಲ್ಲಿ ಬಾರಟೆಂಡರ್ ಆಗಿದ್ದ ಸಲ್ಮಾನ್ ಖಾನ್!

First Published | Apr 1, 2024, 4:58 PM IST

ಬಾಲಿವುಡ್ ನಟ ರಣಬೀರ್ ಕಪೂರ್ ಮದುವೆಯಲ್ಲಿ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಬಾರಟೆಂಡರ್ ಆಗಿ ಕೆಲಸ ಮಾಡಿದ್ದರಂತೆ. ಇದರಿಂದ ರಿಷಿ ಕಪೂರ್‌ಗೊಂದು ಸಮಸ್ಯೆ ಹುಟ್ಟಿಕೊಂಡಿತಂತೆ. 
 

ಇತ್ತೀಚೆಗೆ ನೀತು ಕಪೂರ್ ತನ್ನ ಮಗ ರಣಬೀರ್ ಕಪೂರ್ ಮತ್ತು ಮಗಳು ರಿದ್ಧಿಮಾ ಕಪೂರ್ ಜೊತೆಗೆ ಕಪಿಲ್ ಶರ್ಮಾ ಅವರ ಹೊಸ ಕಾಮಿಡಿ ಶೋ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋಗೆ ಬಂದಿದ್ದರು. ಇದರಲ್ಲಿ ವಿಶಿಷ್ಠ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. 

ಅದೆಂದರೆ, ಬಾಲಿವುಡ್ ಸೂಪರ್‌ಸ್ಟಾರ್, 3000 ಕೋಟಿಗಳ ಒಡೆಯ ಸಲ್ಮಾನ್‌ಖಾನ್ ರಣಬೀರ್ ಕಪೂರ್ ಅಕ್ಕ ರಿದ್ಧಿಮಾ ಕಪೂರ್ ಅವರ ಮದುವೆಯಲ್ಲಿ ಅತಿಥಿಗಳಿಗೆ ಮದ್ಯವನ್ನು ಹಂಚಿದರಂತೆ!
 

Tap to resize

ಒಂದು ಕ್ಲಿಪ್‌ನಲ್ಲಿ, ರಿದ್ಧಿಮಾ ಚಿತ್ರರಂಗದ ವ್ಯಕ್ತಿಗಳ ಬಗ್ಗೆ ಮೆಚ್ಚುಗೆಯ ಮಾತನಾಡಿದರು ಮತ್ತು ಅವರು ತಮ್ಮ ಪೋಷಕರಾದ ರಿಷಿ ಕಪೂರ್ ಮತ್ತು ನೀತು ಕಪೂರ್ ಬಗ್ಗೆ ಮಾತನಾಡಿದರು

ಅವರ ಸಹೋದರ ರಣಬೀರ್ ಕಪೂರ್, ರಿದ್ದಿಮಾಗೆ ಸಲ್ಮಾನ್ ಖಾನ್ ಮೇಲಿನ ಅಭಿಮಾನವನ್ನು ಬಹಿರಂಗಪಡಿಸಿದರು. ಆಕೆಯ ಕೋಣೆಯಲ್ಲಿ ಸಲ್ಮಾನ್ ಖಾನ್ ಅವರ ಪೋಸ್ಟರ್‌ಗಳು ಇದ್ದವು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.
 

ಕಪಿಲ್ ಶರ್ಮಾ ಅವರು ಭರತ್ ಸಹಾನಿ ಅವರ ಮದುವೆಯಲ್ಲಿ ಸಲ್ಮಾನ್ ಖಾನ್ ಬಾರ್ಟೆಂಡರ್ ಪಾತ್ರವನ್ನು ತೆಗೆದುಕೊಳ್ಳುತ್ತಾರೆಯೇ ಎಂದು ಕೇಳಿದಾಗ, ರಿದ್ಧಿಮಾ ಅದಕ್ಕೆ ಒಪ್ಪಿದರು ಮತ್ತು ಇದಕ್ಕೆ ನೀತು ಕಪೂರ್ ಆಸಕ್ತಿದಾಯಕ ಕತೆಯೊಂದನ್ನು ಹೇಳಿದರು. 

'ರಿದ್ದಿಮಾ ಮದುವೆಯಲ್ಲಿ ಸಲ್ಮಾನ್ ನಾನು ಬಾರ್ಟೆಂಡರ್ ಆಗುತ್ತೇನೆ ಎಂದು ಹೇಳಿದರು. ನಾನು ಟೀಕ್ ಹೈ ಹೇಳಿದರು. ಸಲ್ಮಾನ್ ಖಾನ್ ಎಲ್ಲರಿಗೂ ಮದ್ಯವನ್ನು ಬಡಿಸಲಾರಂಭಿಸಿದರು.'
 

ಕಡೆಗೆ ವೇಟರ್‌ಗಳು ಬಂದು ಮದ್ಯ ಮುಗಿಯುತ್ತಿದೆ ಎಂದು ಹೇಳಿದರಂತೆ. ಇದನ್ನು ಕೇಳಿ ರಿಷಿ ಕಪೂರ್ ಆಶ್ಚರ್ಯದಿಂದ ಅಷ್ಟೊಂದು ಮದ್ಯ ತರಿಸಿದ್ದೆ, ಹೇಗೆ ಮುಗಿಯುತ್ತದೆ ಎಂದು ಕೇಳಿದಾಗ ತಿಳಿದು ಬಂದ ವಿಷಯ ಅಚ್ಚರಿದಾಯಕವಾಗಿತ್ತು. 

 'ಬಾರ್‌ನಲ್ಲಿ ಸಲ್ಮಾನ್ ಖಾನ್ ಮದ್ಯ ಹಂಚುತ್ತಿರುವುದರಿಂದ ಪ್ರತಿಯೊಬ್ಬರೂ ತಮ್ಮ ಗ್ಲಾಸ್‌ನಲ್ಲಿದ್ದ ಮದ್ಯ ಚೆಲ್ಲಿ ಸಲ್ಮಾನ್ ಹತ್ತಿರ ಸರ್ವ್ ಮಾಡಿಸಿಕೊಳ್ಳಲು ಮುಗಿ ಬಿದ್ದಿದ್ದರಂತೆ. ಹಾಗಾಗಿ ಮದ್ಯದ ಅಭಾವವಾಯಿತು' ಎಂದವರು ವಿವರಿಸಿದ್ದಾರೆ.
 

ವಿಷಯ ತಿಳಿದ ಕೂಡಲೇ ರಿಷಿ ಕಪೂರ್, ಬಾರ್ ಬಳಿ ಹೋಗಿ ಸಲ್ಮಾನ್ ಖಾನ್ ಅವರನ್ನು ಮದ್ಯ ಹಂಚುವ ಕರ್ತವ್ಯವನ್ನು ಕೈಬಿಡುವಂತೆ ಕೇಳಿಕೊಂಡರಂತೆ. 
 

ಏತನ್ಮಧ್ಯೆ, ರಿದ್ಧಿಮಾ ಕಪೂರ್ ನೆಟ್‌ಫ್ಲಿಕ್ಸ್‌ನ ಹಿಟ್ ಸರಣಿಯಾದ 'ಫ್ಯಾಬುಲಸ್ ಲೈವ್ಸ್ ಆಫ್ ಬಾಲಿವುಡ್ ವೈವ್ಸ್‌'ನ ಮುಂಬರುವ ಸೀಸನ್‌ನಲ್ಲಿ ನಟನೆಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಏತನ್ಮಧ್ಯೆ, ರಣಬೀರ್ ಕಪೂರ್ 'ಬ್ರಹ್ಮಾಸ್ತ್ರ: ಭಾಗ 2 ಮತ್ತು 3', ಸಂಜಯ್ ಲೀಲಾ ಬನ್ಸಾಲಿಯವರ 'ಲವ್ & ವಾರ್'ನಲ್ಲಿ ನಟಿಸುತ್ತಿದ್ದಾರೆ. 

Latest Videos

click me!